ದೊಡ್ಡಬಳ್ಳಾಪುರ : ದೇಶದಲ್ಲಿ ಲಾಕ್ಡೌನ್ ಆರಂಭವಾದಾಗಿನಿಂದ ಬಹಳಷ್ಟು ಮಂದಿ ಸ್ವಯಂಪ್ರೇರಿತರಾಗಿ ಬಡಜನರಿಗೆ, ರಸ್ತೆ ಬದಿ ಪ್ರಾಣಿಗಳಿಗೆ ಆಹಾರ ನೀಡುತ್ತಾ ಬಂದಿದ್ದಾರೆ. ಕೆಲವರು ತಮ್ಮದೇ ಆದ ತಂಡವನ್ನು ಕಟ್ಟಿಕೊಂಡು ಆಹಾರ ಸಾಮಗ್ರಿಗಳನ್ನು ಹಂಚುವುದು, ಕೊರೊನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇವರ ನಡುವೆ 4-5 ಮಹಿಳಾ ಪೇದೆಗಳು ಓಬವ್ವ ಪಡೆ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಓಬವ್ವ ಪಡೆಯ ಸೇವೆಯನ್ನು ಮೆಚ್ಚಿ ಗೌರವ ಸೂಚಿಸಿದ ನಟಿ ಮಾಳವಿಕಾ ಅವಿನಾಶ್
ನಟಿ,ನಿರೂಪಕಿ ಮತ್ತು ಬಿಜೆಪಿ ಪಕ್ಷದ ನಾಯಕಿ ನಟಿ ಮಾಳವಿಕಾ ಅವಿನಾಶ್ ಇಂದು ದೊಡ್ಡಬಳ್ಳಾಪುರಕ್ಕೆ ತೆರಳಿದ್ದ ವೇಳೆ ಈ ಓಬವ್ವ ಪಡೆ ಜೊತೆ ನಿಂತು ಫೊಟೋ ತೆಗೆಸಿಕೊಂಡಿದ್ದಾರೆ. ಈ ಮೂಲಕ ಅವರು ಮಾಡುತ್ತಿರುವ ಸೇವೆಗೆ ಗೌರವ ಸಲ್ಲಿಸಿದ್ದಾರೆ.
ನಟಿ,ನಿರೂಪಕಿ ಮತ್ತು ಬಿಜೆಪಿ ಪಕ್ಷದ ನಾಯಕಿ ನಟಿ ಮಾಳವಿಕಾ ಅವಿನಾಶ್ ಇಂದು ದೊಡ್ಡಬಳ್ಳಾಪುರಕ್ಕೆ ತೆರಳಿದ್ದ ವೇಳೆ ಈ ಓಬವ್ವ ಪಡೆ ಜೊತೆ ನಿಂತು ಫೊಟೋ ತೆಗೆಸಿಕೊಂಡಿದ್ದಾರೆ. ಈ ಮೂಲಕ ಅವರು ಮಾಡುತ್ತಿರುವ ಸೇವೆಗೆ ಗೌರವ ಸಲ್ಲಿಸಿದ್ದಾರೆ. ದೊಡ್ಡಬಳ್ಳಾಪುರಕ್ಕೆ ಭೇಟಿ ನೀಡಿದ್ದ ಮಾಳವಿಕಾ ರಾಜೀವ್ ಗಾಂಧಿ ಬಡಾವಣೆಯ ಕೂಲಿ ಕಾರ್ಮಿಕರಿಗೆ ದಿನಸಿ ವಿತರಿಸಿದರು. ಇದೇ ವೇಳೆ ಕೊರೊನಾ ವಾರಿಯರ್ಸ್ಗಳಾಗಿ ಹಗಲು ಇರುಳು ಎನ್ನದೆ ಸೇವೆ ಸಲ್ಲಿಸುತ್ತಿರುವ ಓಬವ್ವ ಪಡೆ ಕಂಡು ಅವರ ಸೇವೆಯನ್ನು ಶ್ಲಾಘಿಸಿದ್ದಾರೆ. ಓಬವ್ವ ಒನಕೆ ಹಿಡಿದು ಶತ್ರುಗಳ ಸಂಹಾರ ನಡೆಸಿದಳು ಹಾಗೆಯೇ ಮಹಿಳಾ ಪೇದೆಗಳು ಲಾಠಿ ಹಿಡಿದು ಕೊರೊನಾ ಸಂಹಾರಕ್ಕಾಗಿ ದುಡಿಯುತ್ತಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅಲ್ಲದೆ, ಓಬವ್ವ ಪಡೆಯ ಮಹಿಳಾ ಪೇದೆಗಳೊಂದಿಗೆ ಪೋಟೋ ತೆಗೆಸಿಕೊಂಡರು.