ಕರ್ನಾಟಕ

karnataka

ETV Bharat / state

ದೇವನಹಳ್ಳಿಯಲ್ಲಿ ಶಶಿಕಲಾ ಪರ ಹಾಕಿದ್ದ ಬ್ಯಾನರ್​ಗಳಿಗೆ​ ಬೆಂಕಿ ಇಟ್ಟ ಕನ್ನಡಪರ ಸಂಘಟನೆಗಳು

ಇಂದು ಶಶಿಕಲಾ ಅವರು ದೇವನಹಳ್ಳಿಯಿಂದ ಚೆನ್ನೈ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಅವರನ್ನು ಸ್ವಾಗತಿಸಲು ರೆಸಾರ್ಟ್​ ಸುತ್ತಮುತ್ತ ತಮಿಳು ಭಾಷೆಯ ಬ್ಯಾನರ್​​ಗಳನ್ನು ಹಾಕಿದ್ದರು. ಇದರಿಂದ ಕೋಪಗೊಂಡ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಅವುಗಳನ್ನು ಸುಟ್ಟು ಹಾಕಿರುವ ಘಟನೆ ನಡೆದಿದೆ.

ಶಶಿಕಲಾ ತಂಗಿರುವ ರೆಸಾರ್ಟ್​ ಸುತ್ತಮುತ್ತ ಹಾಕಿದ್ದ ಬ್ಯಾನರ್​ ಸುಟ್ಟು ಹಾಕಿದ ಕನ್ನಡಪರ ಸಂಘಟನೆಗಳು
Kannada Organisation burnet Tamil Banner in Resort at Devanahalli

By

Published : Feb 8, 2021, 7:05 AM IST

ದೇವನಹಳ್ಳಿ:ತಾಲೂಕಿನ ಗಾಲ್ಫ್​ ಶೈರ್​​ ರೆಸಾರ್ಟ್​ನಲ್ಲಿ ಶಶಿಕಲಾ ಅವರು ವಿಶ್ರಾಂತಿ ಪಡೆಯುತ್ತಿದ್ದು, ಈ ನಡುವೆ ಚಿನ್ನಮ್ಮ ಅವರನ್ನು ಸ್ವಾಗತಿಸಲು ರೆಸಾರ್ಟ್​​ ಮುಂದೆ ತಮಿಳಿನ ಬ್ಯಾನರ್​ಗಳನ್ನು​ ಹಾಕಲಾಗಿತ್ತು. ಅವನ್ನು ಕನ್ನಡಪರ ಸಂಘಟನೆ ಕಾರ್ಯಕರ್ತರು ಸುಟ್ಟು ಹಾಕಿದ್ದಾರೆ.

ಶಶಿಕಲಾ ತಂಗಿರುವ ರೆಸಾರ್ಟ್​ ಸುತ್ತಮುತ್ತ ಹಾಕಿದ್ದ ಬ್ಯಾನರ್​ ಸುಟ್ಟು ಹಾಕಿದ ಕನ್ನಡಪರ ಸಂಘಟನೆಗಳು

ಜೈಲು ಶಿಕ್ಷೆಗೊಳಗಾಗಿ ಶಶಿಕಲಾ ಪರಪ್ಪನ ಅಗ್ರಹಾರದಿಂದ ಬಿಡುಗಡೆಯಾದ ನಂತರ ತಾಲೂಕಿನ ಸಾದಹಳ್ಳಿ ಗಾಲ್ಫ್​​ ಶೈರ್ ರೆಸಾರ್ಟ್​ನಲ್ಲಿ ವಿಶ್ರಾಂತಿ ಪಡೆಯುವುದರ ಜೊತೆಗೆ ತಮಿಳುನಾಡಿನ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಇಂದು ಬೆಳಗ್ಗೆ ರೆಸಾರ್ಟ್​​ನಿಂದ ಚೆನ್ನೈಗೆ ಶಶಿಕಲಾ ಪ್ರಯಾಣ ಬೆಳೆಸಲಿದ್ದು, ಅವರನ್ನು ಸ್ವಾಗತಿಸಲು ತಮಿಳುನಾಡಿನಿಂದ ಬೆಂಬಲಿಗರು ರೆಸಾರ್ಟ್​ನತ್ತ ಧಾವಿಸುತ್ತಿದ್ದಾರೆ. ಜೊತೆಗೆ ಚಿನ್ನಮ್ಮಗೆ ಸ್ವಾಗತ ಕೋರಲು ತಮಿಳು ಭಾಷೆಯಲ್ಲಿನ ಬ್ಯಾನರ್​​ಗಳನ್ನು ರೆಸಾರ್ಟ್​ ಸುತ್ತಮುತ್ತ ಹಾಕಿದ್ದಾರೆ.

ಓದಿ: ಮಂಗಳೂರು: ಯುವಕನ ಮೇಲೆ ದುಷ್ಕರ್ಮಿಗಳಿಂದ ಮಾರಣಾಂತಿಕ ಹಲ್ಲೆ

ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ರೆಸಾರ್ಟ್​​ ಸುತ್ತಮುತ್ತ ಹಾಕಿದ್ದ ಬ್ಯಾನರ್​ಗಳನ್ನು ಸುಟ್ಟು ಹಾಕಿ ಶಶಿಕಲಾ ವಿರುದ್ಧ ಕಿಡಿಕಾರಿದ್ದಾರೆ. ರೆಸಾರ್ಟ್​​ ಅನ್ನು ತಮಿಳುಮಯ ಮಾಡಲು ಹೊರಟಿದ್ದಾರೆ. ಶಶಿಕಲಾ ಅವರು ರೆಸಾರ್ಟ್​ನಲ್ಲಿ ಇರಲು ನಮ್ಮದೇನು ತಕರಾರು ಇಲ್ಲ. ತಮಿಳುನಾಡಿನಲ್ಲಿ ಬೇಕಾದರೆ ಅವರ ವಿಜೃಂಭಣೆ ಮಾಡಿಕೊಳ್ಳಲಿ ಎಂದಿದ್ದಾರೆ.

ABOUT THE AUTHOR

...view details