ಕರ್ನಾಟಕ

karnataka

ETV Bharat / state

ಗಂಡನ ಜತೆಗೆ ನಿತ್ಯ ಜಗಳ.. ಜೀವನವೇ ಸಾಕೆಂದು ಕೊನೆಗೆ ಹೆಂಡತಿ ರೈಲಿಗೆ ತಲೆ ಕೊಟ್ಟಳು - kannadanews

ಗಂಡನ ಜತೆಗೆ ನಿತ್ಯ ಅದ್ಯಾಕೆ ಜಗಳವಾಗ್ತಾಯಿತ್ತೋ ಗೊತ್ತಿಲ್ಲ. ಇಬ್ಬರೂ ಜಗಳವಾಡ್ತಾನೆ ಇದ್ದರು. ಇದರಿಂದ ಜೀವನವೇ ಸಾಕು ಅಂತಾ ಹೆಂಡತಿಗೆ ಅನ್ನಿಸಿದೆ. ಕೊನೆಗೆ ಆಕೆ ರೈಲಿಗೆ ತಲೆಕೊಟ್ಟಿದ್ದಾಳೆ.

ಗಂಡನ ಜೊತೆ ಜಗಳ ಹೆಂಡತಿ ಆತ್ಮಹತ್ಯೆ

By

Published : May 25, 2019, 12:24 PM IST

ದೊಡ್ಡಬಳ್ಳಾಪುರ : ಸಂಸಾರ ಅಂದ್ಮೇಲೆ ಒಂದು ಮಾತು ಬರುತ್ತೆ ಇನ್ನೊಂದು ಮಾತು ಹೋಗುತ್ತೆ. ಅದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳೋದು ಎಷ್ಟು ಸರಿ ಅಲ್ವೇ.. ಆದರೆ, ಇಲ್ಲೊಂದು ದಂಪತಿ ಆವಾಗ ಈವಾಗೊಮ್ಮೆ ಜಗಳವಾಡ್ತಿರಲಿಲ್ಲ. ನಿತ್ಯ ಹೆಂಡ್ತಿ ಜತೆಗೆ ಗಂಡ ಕಿರಿಕ್ ಮಾಡ್ತಾನೆಯಿದ್ದ. ಕೊನೆಗೆ ಹೆಂಡತಿಗೆ ಜೀವನವೇ ಸಾಕೆನಿಸಿತು. ಈಗ ಹೆಂಡ್ತಿ ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಹೊರವಲಯದ ವೀರಾಪುರ ರೈಲ್ವೆ ಗೇಟ್ ಬಳಿ ಈ ಘಟನೆ ನಡೆದಿದೆ. ಮರಿಯಮ್ಮ(23) ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಮಹಿಳೆ.

ಮೃತಳು ಯಾದಗಿರಿ ಜಿಲ್ಲೆಯ ಕಾಡಂಗೆರೆ ನಿವಾಸಿ. ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿಕಾರ್ಮಿಕರಾಗಿ ದುಡಿಯಲು ಗಂಡನ ಜೊತೆ ದೊಡ್ಡಬಳ್ಳಾಪುರಕ್ಕೆ ವಲಸೆ ಬಂದಿದ್ದರು. ನಗರದ ಮುನಿಯಪ್ಪ ತೋಟದಲ್ಲಿ ಗುಡಿಸಲು ಹಾಕಿಕೊಂಡು ದಂಪತಿ ವಾಸವಾಗಿದ್ದರು. ದಂಪತಿಗೆ 1 ವರ್ಷದ ಹೆಣ್ಣು ಮಗು ಇದೆ. ಗಂಡ-ಹೆಂಡತಿ ಪ್ರತಿನಿತ್ಯ ಜಗಳವಾಡುತ್ತಿದ್ದರು. ಗಂಡನ ಜತೆಗೆ ಆಗ್ತಿದ್ದ ಜಗಳದಿಂದ ಬೇಸತ್ತ ಮರಿಯಮ್ಮ ಇಂದು ಬೆಳಗ್ಗೆ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ABOUT THE AUTHOR

...view details