ಕರ್ನಾಟಕ

karnataka

ETV Bharat / state

ಗೃಹ ಸಚಿವರಿಗೆ ಕೊರೊನಾ: ಶೀಘ್ರ ಚೇತರಿಕೆಗೆ ಕಾಂಗ್ರೆಸ್ ನಾಯಕರ ಹಾರೈಕೆ - ಟ್ವೀಟ್​

ಗೃಹ ಸಚಿವರಿಗೆ ಕೊರೊನಾ ಪಾಸಿಟಿವ್​ ಬಂದ ಹಿನ್ನೆಲೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್, ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಮಾಜಿ ಸಚಿವ ಎಂಬಿ ಪಾಟೀಲ್ ಸೇರಿದಂತೆ ಹಲವು ನಾಯಕರು ಅವರ ಆರೋಗ್ಯ ಚೇತರಿಕೆ ಹಾರೈಸಿದ್ದಾರೆ.

home minister basavraj bommaiah tested corona positive
ಗೃಹಸಚಿವರಿಗೆ ಕೊರೊನಾ ಪಾಸಿಟಿವ್

By

Published : Sep 16, 2020, 11:49 PM IST

ಬೆಂಗಳೂರು:ಕೋವಿಡ್-19 ನಿಂದ ಬಳಲುತ್ತಿರುವ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಶೀಘ್ರ ಚೇತರಿಕೆಗೆ ಕಾಂಗ್ರೆಸ್ ನಾಯಕರು ಹಾರೈಸಿದ್ದಾರೆ.

ದಿನೇಶ್ ಗುಂಡೂರಾವ್ ತಮ್ಮ ಟ್ವೀಟರ್​ನಲ್ಲಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರಿಗೆ ಕೊರೊನಾ ದೃಢಪಟ್ಟಿರುವ ವಿಚಾರ ತಿಳಿದು ಆಘಾತವಾಗಿದೆ. ಬೊಮ್ಮಾಯಿಯವರೆ ಕೊರೊನಾ ಎಂಬ ಮಹಾಮಾರಿಯನ್ನು ನೀವು ಗೆದ್ದು ಬರುತ್ತೀರಿ ಎಂಬ ವಿಶ್ವಾಸವಿದೆ. ನೀವು ಶೀಘ್ರ ಗುಣಮುಖರಾಗಿ ಬನ್ನಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಗೃಹಸಚಿವರಿಗೆ ಕೊರೊನಾ ಪಾಸಿಟಿವ್

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಳಗ್ಗೆಯೇ ಟ್ವೀಟ್ ಮಾಡಿ ಗೃಹ ಸಚಿವರ ಆರೋಗ್ಯ ಚೇತರಿಕೆಗೆ ಹಾರೈಸಿದ್ದಾರೆ. ಮಾಜಿ ಡಿಸಿಎಂ ಜಿ. ಪರಮೇಶ್ವರ್ ಹಾಗೂ ಎಂಬಿ ಪಾಟೀಲ್ ಕೂಡ ಗೃಹ ಸಚಿವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದು, ಆದಷ್ಟು ಶೀಘ್ರ ಗುಣಮುಖರಾಗಿ ಸೇವೆಗೆ ಮರಳಲಿ ಎಂದು ಬಯಸಿದ್ದಾರೆ.

ಗೃಹಸಚಿವರಿಗೆ ಕೊರೊನಾ ಪಾಸಿಟಿವ್

ಮನೆಯ ಕೆಲಸದಾಳಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ತಪಾಸಣೆಗೊಳಗಾಗಿದ್ದ ಗೃಹ ಸಚಿವರಿಗೂ ಕೂಡ ಮಹಾಮಾರಿ ವಕ್ಕರಿಸಿರುವುದು ದೃಢಪಟ್ಟಿದೆ. ಯಾವುದೇ ಲಕ್ಷಣ ಇಲ್ಲದಿರುವ ಕಾರಣ ಅವರು, ಮನೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಗೃಹಸಚಿವರಿಗೆ ಕೊರೊನಾ ಪಾಸಿಟಿವ್

ABOUT THE AUTHOR

...view details