ಕರ್ನಾಟಕ

karnataka

ETV Bharat / state

ಇಲ್ಲಿಗೆ ಬಂದರೆ ಎಲ್ಲವೂ ನಿವಾರಣೆ ಆಗುತ್ತಂತೆ.... ಏನೀ ದೇವರ ಮಹಿಮೆ...!!

ಈ ದೇವಸ್ಥಾನಕ್ಕೆ ಪ್ರತೀ ಸೋಮವಾರ, ಶುಕ್ರವಾರ, ಭಾನುವಾರದಂದು ಭಕ್ತ ಸಾಗರವೇ ಹರಿದು ಬರುತ್ತೆ. ಆ ದೇವರಿಗೆ ಪ್ರಾರ್ಥಿಸಿದ್ರೆ ಸರ್ವ ಕಷ್ಟಗಳು ನಿವಾರಣೆಯಾಗುತ್ತವೆಯಂತೆ. ಹಾಗಾದ್ರೆ, ಆ ದೇವರು ಯಾರು? ಆ ದೇವಸ್ಥಾನ ಎಲ್ಲಿದೆ.. ಇಲ್ಲಿದೆ ಅದಕ್ಕೆಲ್ಲ ಉತ್ತರ

ದೇವರ ಮಹಿಮೆ

By

Published : Mar 28, 2019, 2:27 PM IST

ಶಿವನ ಪುತ್ರ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪುಣ್ಯಕ್ಷೇತ್ರ ಘಾಟಿ.. ದೇಶದ ಪ್ರವಾಸಿ ತಾಣಗಳಲ್ಲಿ ಇದೂ ಒಂದು.. ಈ ದೇಗುಲ ಇರುವುದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಬಳಿ..

ಇಲ್ಲಿಗೆ ಬಂದು ಹೋಮ ಹವನ ಮಾಡಿಸಿದ್ರೆ ನಾಗದೋಷ ನಿವಾರಣೆಯಾಗುತ್ತಂತೆ.. ಮದುವೆಯಾಗದವರಿಗೆ ಮದುವೆ, ಸಂತಾನ ಭಾಗ್ಯ ಸೇರಿ ಹಲವು ಕಷ್ಟಗಳು ಪರಿಹಾರವಾಗುತ್ತವೆಯಂತೆ.

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಪುಣ್ಯಕ್ಷೇತ್ರ ಘಾಟಿ

ಶ್ರೀ ಸುಬ್ರಹ್ಮಣ್ಯ ಸ್ವಾಮಿ ವಿಗ್ರಹ ಉದ್ಭವ ಮೂರ್ತಿಯಂತೆ. ಎದುರಿನಿಂದ ದೇವರನ್ನು ನೋಡಿದ್ರೆ, ಅದೇ ಸಮಯದಲ್ಲಿ ವಿಗ್ರಹದ ಹಿಂಭಾದಲ್ಲಿಟ್ಟಿರುವ ಕನ್ನಡಿಯಲ್ಲಿ ಶ್ರೀ ನರಸಿಂಹ ಸ್ವಾಮಿಯನ್ನು ನೋಡಬಹುದು.

ಇಲ್ಲಿ ಪುಷ್ಯ ಶುದ್ಧ ಷಷ್ಠಿಯಂದು ಬ್ರಹ್ಮ ರಥೋತ್ಸವ ನಡೆಸಲಾಗುತ್ತೆ. ಅದಕ್ಕೂ ಮುನ್ನ ಇಲ್ಲಿ ಪ್ರತೀ ವರ್ಷ ದನದ ಜಾತ್ರೆ ನಡೆಯುತ್ತೆ. ಅಲ್ಲಿ ವಿವಿಧ ತಳಿಗಳ ಎತ್ತುಗಳ ಕೊಡುಕೊಳ್ಳುವಿಕೆ ನಡೆಯುತ್ತದೆ.

ಇನ್ನು ಈ ದೇಗುಲವನ್ನು ನಿರ್ಮಿಸಿದವರು ಬಳ್ಳಾರಿಯ ಸಂಡೂರಿನ ಮಹಾರಾಜರಂತೆ.. ಹಾಗಾಗಿ, ಅವರೇ ಓರ್ವ ಬ್ರಾಹ್ಮಣನನ್ನು ಪೂಜೆಗೆ ನೇಮಿಸಿದ್ರಂತೆ..

ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸಿ ತಮ್ಮ ಸಮಸ್ಯೆಗಳ ನಿವಾರಣೆಗಾಗಿ ಸುಬ್ರಹ್ಮಣ್ಯ ಸ್ವಾಮಿಯ ಮೊರೆ ಹೋಗಿ ಹರಕೆ ಕಟ್ಟಿಕೊಳ್ಳುತ್ತಾರಂತೆ. ಬಳಿಕ ತಮ್ಮ ಕಷ್ಟಗಳು ನಿವಾರಣೆಯಾಗುತ್ತವೆ ಎಂಬುದು ಇಲ್ಲಿನ ಜನರ ನಂಬಿಕೆ.

ABOUT THE AUTHOR

...view details