ಕರ್ನಾಟಕ

karnataka

ETV Bharat / state

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪರ್ಕರಹಿತ ಪ್ರಯಾಣ... ಇಷ್ಟೆಲ್ಲಾ ಮುನ್ನೆಚ್ಚರಿಕೆ

ಟರ್ಮಿನಲ್ ಪ್ರವೇಶದ್ವಾರದಲ್ಲಿ ಸಿಐಎಸ್‍ಎಫ್ ಸಿಬ್ಬಂದಿಯಿಂದ ಬೋರ್ಡಿಂಗ್ ಪಾಸ್ ಮತ್ತು ಸರ್ಕಾರ ನೀಡಿರುವ ಫೋಟೊ ಐಡಿ ಗುರುತಿನ ಚೀಟಿ ಪರಿಶೀಲನೆ ಮಾಡಲಿದ್ದು , ಮ್ಯಾಗ್ನಿಫೈಡ್ ಗ್ಲ್ಯಾಸ್ ಸ್ಕ್ರೀನ್ ಮೂಲಕ ದಾಖಲೆಯನ್ನು ಸ್ಪರ್ಶಿಸದೆ ಪರೀಕ್ಷಿಸುತ್ತಾರೆ.

Contactless travel at Kempegowda International Airport
Contactless travel at Kempegowda International Airport

By

Published : Jun 3, 2020, 8:20 AM IST

ದೇವನಹಳ್ಳಿ: ಪ್ರಯಾಣಿಕರ ಸುರಕ್ಷತೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪರ್ಕ ರಹಿತ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ ತಕ್ಷಣವೇ ತಮ್ಮ ಮೊಬೈಲ್ ನಲ್ಲಿ ಇ-ಪ್ರಿಂಟೆಡ್ ಬೋರ್ಡಿಂಗ್ ಪಾಸ್ ಪಡೆದಿರಬೇಕು, ಟರ್ಮಿನಲ್‍ ಪ್ರವೇಶಿಸುವ ಮುನ್ನ ಪ್ರವೇಶದ್ವಾರದಲ್ಲಿ ಪ್ರಯಾಣಿಕರಿಗೆ ಥರ್ಮಲ್ ಸ್ಕ್ಯಾನ್ ಪರೀಕ್ಷೆ ನಡೆಸಲಾಗುವುದು. ಪ್ರಯಾಣಿಕರು ತಮ್ಮ ಮೊಬೈಲ್‍ನಲ್ಲಿನ ಆರೋಗ್ಯ ಸೇತು ಆ್ಯಪ್‍ ಡೌನ್ ಲೋಡ್ ಮಾಡಿರಬೇಕು.

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ

ಈ ಆ್ಯಪ್‍ ಯು ಆರ್ ಸೇಫ್’ ಎಂಬ ಸಂದೇಶ ತೋರಿಸಿದ್ದಲ್ಲಿ ಮಾತ್ರ ಟರ್ಮಿನಲ್ ಒಳಗೆ ಪ್ರವೇಶ ನೀಡಲಾಗುವುದು. ಟರ್ಮಿನಲ್ ಪ್ರವೇಶದ್ವಾರದಲ್ಲಿ ಸಿಐಎಸ್‍ಎಫ್ ಸಿಬ್ಬಂದಿಯಿಂದ ಬೋರ್ಡಿಂಗ್ ಪಾಸ್ ಮತ್ತು ಸರ್ಕಾರ ನೀಡಿರುವ ಫೋಟೊ ಐಡಿ ಗುರುತಿನ ಚೀಟಿ ಪರಿಶೀಲನೆ ಮಾಡಲಿದ್ದು , ಮ್ಯಾಗ್ನಿಫೈಡ್ ಗ್ಲ್ಯಾಸ್ ಸ್ಕ್ರೀನ್ ಮೂಲಕ ದಾಖಲೆಯನ್ನು ಸ್ಪರ್ಶಿಸದೆ ಪರೀಕ್ಷಿಸುತ್ತಾರೆ.

ಚೆಕ್ ಇನ್ : ಬೋರ್ಡಿಂಗ್ ಪಾಸ್ ಅನ್ನು ಸಂಪರ್ಕರಹಿತ ಸ್ವಯಂಚಾಲಿತ ಕಿಯಾಸ್ಕ್​​ ನಲ್ಲಿ ಸ್ಕ್ಯಾನ್ ಮಾಡಿ ಬ್ಯಾಗೇಜ್ ಟ್ಯಾಗ್ ಪಡೆಯಬೇಕು. ಈ ಬ್ಯಾಗೇಜ್ ಟ್ಯಾಗ್ ಗಳನ್ನ ತಮ್ಮ ಬ್ಯಾಗ್‍ಗಳಿಗೆ ಅಂಟಿಸಬೇಕು. ಬ್ಯಾಗೇಜ್ ಟ್ಯಾಗ್ ಅಂಟಿಸಿದ ಬ್ಯಾಗ್ ಗಳನ್ನ ವಿಮಾನಯಾನ ಕಂಪನಿ ಕೌಂಟರ್ ನಲ್ಲಿ ಕೊಡಬೇಕು. ವಿಮಾನಯಾನ ಸಂಸ್ಥೆಯ ಬ್ಯಾಗ್ ಡ್ರಾಪ್ ಕೌಂಟರ್‍ಗಳಲ್ಲಿ ಪಾರದರ್ಶಕ ವಿಭಜಕವನ್ನು ಸ್ಥಾಪಿಸಲಾಗಿರುತ್ತದೆ.

ಪ್ರಯಾಣಿಕರು ಮತ್ತು ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಅನ್ನು ಸೆನ್ಸ್​ರ್​​ನಲ್ಲಿ ಸ್ಕ್ಯಾನ್ ಮಾಡಬೇಕು ಮತ್ತು ತಮ್ಮ ಗುರುತಿನ ಚೀಟಿಯನ್ನು ತೋರಿಸಿದಾಗ ವಿಮಾನಯಾನ ಸಂಸ್ಥೆ ಸಿಬ್ಬಂದಿ ಬ್ಯಾಗ್‍ಗಳನ್ನು ಸ್ವೀಕರಿಸುತ್ತಾರೆ.

ಭದ್ರತಾ ಪರೀಕ್ಷೆ ಪ್ರಕ್ರಿಯೆ: ವಿಮಾನ ಹಾರಾಟ ಪೂರ್ವ ಭದ್ರತಾ ಪರೀಕ್ಷಾ ಸ್ಥಳದಲ್ಲಿ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅನ್ನು ಕಿಯಾಸ್ಕ್​ ನಲ್ಲಿ ಸ್ಕ್ಯಾನ್ ಮಾಡುತ್ತಾರೆ. ನಂತರ ಬಾಡಿ ಸ್ಕ್ಯಾನರ್ ಮೂಲಕ ಸಾಗುವ ಮುನ್ನ ತಮ್ಮ ಎಲ್ಲಾ ವಸ್ತುಗಳನ್ನು ಟ್ರೇ ಒಂದರಲ್ಲಿ ಹಾಕುತ್ತಾರೆ. ಟ್ರೇ ಅನ್ನು ಪ್ರತಿ ಬಳಕೆಯ ನಂತರ ಸ್ಯಾನಿಟೈಸ್​ ಮಾಡಲಾಗುತ್ತದೆ.

ನೂತನ ಸಂಪರ್ಕರಹಿತ ಪ್ರಕ್ರಿಯೆಯ ಅಡಿಯಲ್ಲಿ ಬಾಡಿ ಸ್ಕ್ಯಾನಿಂಗ್ ಅನ್ನು ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ಸ್(ಡಿಎಫ್‍ಎಂಡಿ) ಮೂಲಕ ನಡೆಸಲಾಗುವುದು. ಭದ್ರತಾ ಪರೀಕ್ಷೆಗೆ ಮುನ್ನ ಮತ್ತು ನಂತರ ಹ್ಯಾಂಡ್ ಸ್ಯಾನಿಟೈಸರ್​​ಗಳು ಲಭ್ಯವಿರುತ್ತವೆ.

ವಿಮಾನ ಹತ್ತುವ ಪ್ರಕ್ರಿಯೆ : ಬೋರ್ಡಿಂಗ್ ಗೇಟ್‍ನಲ್ಲಿ ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಫೇಸ್ ಮಾಸ್ಕ್, ಫೇಸ್ ಶೀಲ್ಡ್ ಮತ್ತು ಸ್ಯಾನಿಟೈಸರ್ ಇರುವ ಕಿಟ್‍ವೊಂದನ್ನು ಪ್ರಯಾಣಿಕರಿಗೆ ಹಸ್ತಾಂತರಿಸುತ್ತಾರೆ. ಪ್ರಯಾಣಿಕರು ವಿಮಾನ ಹತ್ತುವ ಮುನ್ನ ನೂತನ ಮಾಸ್ಕ್ ಧರಿಸಬೇಕು ಮತ್ತು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು. ಸೆನ್ಸ್​​ರ್​​​ಲ್ಲಿ ಪ್ರಯಾಣಿಕರು ಬೋರ್ಡಿಂಗ್ ಪಾಸ್ ಅನ್ನು ಸ್ಕ್ಯಾನ್ ಮಾಡುತ್ತಾರೆ. ವಿಮಾನಯಾನ ಸಂಸ್ಥೆಯ ಸಿಬ್ಬಂದಿ ಪ್ರಯಾಣಿಕರ ದೇಹದ ತಾಪಮಾನ ಪರೀಕ್ಷೆ ನಡೆಸಿ ನಂತರ ವಿಮಾನ ಹತ್ತಲು ಪರವಾನಗಿ ನೀಡುತ್ತಾರೆ.

ABOUT THE AUTHOR

...view details