ದೊಡ್ಡಬಳ್ಳಾಪುರ: ಬೆಲೆ ಏರಿಕೆಯ ವಿರುದ್ಧ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದೆ. ದೊಡ್ಡಬಳ್ಳಾಪುರ ನಗರದ ಆಸ್ಪತ್ರೆ ವೃತ್ತದಿಂದ ತಾಲೂಕು ಕಚೇರಿ ರವರೆಗೂ ಪ್ರತಿಭಟನೆ ನಡೆಸಲಾಯಿತು. ಕತ್ತೆಗಳ ಮೆರವಣಿಗೆ ಮಾಡುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ನಿಂದ ಬೃಹತ್ ಪ್ರತಿಭಟನೆ - dodda balapura latest news
ಪ್ರತಿಭಟನನಿರತ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣ ಬೈರೇಗೌಡ , ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆಯನ್ನ ಸರ್ಕಾರ ಯದ್ವಾತದ್ವಾ ಏರಿಸುತ್ತಿದೆ. ಬೆಲೆ ಏರಿಕೆಯಿಂದ 135 ಕೋಟಿ ಭಾರತೀಯರು ಕಷ್ಟ ಪಡುತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಹರಿಹಾಯ್ದರು.
ಪ್ರತಿಭಟನಾನಿರತ ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕೃಷ್ಣಬೈರೇಗೌಡ , ಪೆಟ್ರೋಲ್, ಡಿಸೇಲ್, ಗ್ಯಾಸ್ಗಳ ಬೆಲೆಯನ್ನ ಸರ್ಕಾರ ಯದ್ವಾತದ್ವಾ ಏರಿಸುತ್ತಿದೆ. ಬೆಲೆ ಏರಿಕೆಯಿಂದ 135 ಕೋಟಿ ಭಾರತೀಯರು ಕಷ್ಟ ಪಡುತ್ತಿದ್ದರೂ ಕೇಂದ್ರ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ಬೆಲೆ ಏರಿಕೆಯ ಬಗ್ಗೆ ಹಾರಿಕೆಯ ಉತ್ತರಗಳನ್ನ ಕೊಡುತ್ತಿದ್ದಾರೆ ಎಂದು ಹರಿಹಾಯ್ದರು.
ದೇಶದ ಅಭಿವೃದ್ಧಿಗಾಗಿ ಇಂಧನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂಬ ವಾದಕ್ಕೆ ತಿರುಗೇಟು ನೀಡಿದ ಅವರು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 120 ರೂಪಾಯಿ ಇದ್ದಾಗ 65 ರೂಪಾಯಿಗೆ ಪೆಟ್ರೋಲ್ ಮಾರಾಟವಾಗುತ್ತಿತ್ತು. ಆಗ ದೇಶ ಅಭಿವೃದ್ಧಿಯಾಗಿರಲಿಲ್ಲವೇ? ಈಗ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ 60 ಡಾಲರ್ ಇದೆ. ದೇಶದ ಅಭಿವೃದ್ಧಿ ಮಾಡುವುದೇ ಆಗಿದ್ದಾರೆ ದೇಶದ ಒಂದು ಪರ್ಸೆಂಟ್ ನಷ್ಟಿರುವ ಶ್ರೀಮಂತರ ಬಳಿ ಶೇಕಡಾ 50 ರಷ್ಟು ಭಾರತದ ಸಂಪತ್ತಿದೆ. ದಿನಕ್ಕೆ ಸಾವಿರಾರು ಕೋಟಿ ಸಂಪಾದಿಸುವ ಶ್ರೀಮಂತರ ಮೇಲೆ ಟ್ಯಾಕ್ಸ್ ಹಾಕಿದ್ರೆ ಅವರಿಗೆ ಅದೇನೂ ಹೊರೆಯಲ್ಲ. ಅದರ ಬದಲು ದಿನಕ್ಕೆ 150 ರೂಪಾಯಿ ಸಂಪಾದಿಸುವ ಬಡವರ ಮೇಲೆ ಟ್ಯಾಕ್ಸ್ ಹಾಕಿ ದೇಶ ಕಟ್ಟುವ ಅವಶ್ಯಕತೆ ಇದೆಯೇ? ಎಂದು ಪ್ರಶ್ನಿಸಿದರು.