ಕರ್ನಾಟಕ

karnataka

By

Published : May 27, 2021, 10:47 PM IST

ETV Bharat / state

ಮಾಜಿ ಸಚಿವ ಸಿಎಂ ಉದಾಸಿ ಆರೋಗ್ಯ ಸ್ಥಿತಿ ಗಂಭೀರ: ಸಿಎಂ ಯಡಿಯೂರಪ್ಪ ಭೇಟಿ

ಆರೋಗ್ಯ ಸ್ಥಿತಿ ಗಂಭೀರಗೊಂಡು ಆನೇಕಲ್ ನಾರಾಯಣ ಹೆಲ್ತ್ ಸಿಟಿಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಹಾನಗಲ್ ಹಾಲಿ ಶಾಸಕ, ಮಾಜಿ ಮಂತ್ರಿ ಸಿಎಂ ಉದಾಸಿ ಅವರನ್ನು ಸಿ ಎಂ ಯಡಿಯೂರಪ್ಪ ಭೇಟಿ ಮಾಡಿದ್ದಾರೆ.

cm-yeddiyurappa-meets-former-minister-cm-udasi
ಆನೇಕಲ್ ನಾರಾಯಣ ಹೆಲ್ತ್ ಸಿಟಿಯ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಭೇಟಿ

ಆನೇಕಲ್: ಹಾನಗಲ್ ಹಾಲಿ ಶಾಸಕ, ಮಾಜಿ ಮಂತ್ರಿ ಸಿಎಂ ಉದಾಸಿ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆ ಮುಖ್ಯಮಂತ್ರಿ ಯಡಿಯೂರಪ್ಪ ಆನೇಕಲ್ ನಾರಾಯಣ ಹೆಲ್ತ್ ಸಿಟಿಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಯಡಿಯೂರಪ್ಪ ಆಗಮನಕ್ಕೂ ಮುನ್ನ ಆಗಮಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಸಿಎಂ ಉದಾಸಿ ಅತ್ಯಾಪ್ತ ಸ್ನೇಹಿತರಾದ್ದರಿಂದ ಮೂರ್ನಾಲ್ಕು ತಾಸು ಸಿಎಂ ಉದಾಸಿ ಮಗ ಸಂಸದ ಶಿವಕುಮಾರ್ ರೊಂದಿಗೆ ದೀರ್ಘ ಮಾತುಕತೆ ನಡೆಸಿ ಸಂಜೆವರೆಗೂ ಆಸ್ಪತ್ರೆಯಲ್ಲಿದ್ದು ತೆರಳಿದರು.

ಆನೇಕಲ್ ನಾರಾಯಣ ಹೆಲ್ತ್ ಸಿಟಿಯ ಆಸ್ಪತ್ರೆಗೆ ಸಿಎಂ ಯಡಿಯೂರಪ್ಪ ಭೇಟಿ

ಬೊಮ್ಮಸಂದ್ರ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಮಜುಂದಾರ್ ಷಾ ಆಸ್ಪತ್ರೆಗೆ ಸಿಎಂ ಉದಾಸಿ ಮೂರು ದಿನಗಳ ಹಿಂದೆ ದಾಖಲಾಗಿದ್ದರು. ಅವರಿಗೆ ಆರೋಗ್ಯ ಸ್ಥಿತಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ರಾಜಕಾರಣಿಗಳ ದಂಡು ಆಸ್ಪತ್ರೆಯತ್ತ ಮುಖ ಮಾಡಿವೆ. ಮಾಧ್ಯಮ ಕ್ಯಾಮೆರಾಗಳನ್ನ ಕಂಡ ಕಂದಾಯ ಸಚಿವರು ಮಾಧ್ಯಮದವರನ್ನ ಬಿಡಬೇಡಿ ಎಂದು ಕಟ್ಟಪ್ಪಣೆ ಮಾಡಿ ಹೇಳಿಕೆ ನೀಡುವುದಿಲ್ಲ ಎಂದು ಪೊಲೀಸರಿಗೆ ತಿಳಿಸಿ ಆಸ್ಪತ್ರೆಗೆ ತೆರಳಿದರು.

ವಿಶ್ವನಾಥ್, ಸಂಸದ ತೇಜಸ್ವಿ ಸೂರ್ಯ ಸಿಎಂ ಯಡಿಯೂರಪ್ಪ ಜತೆಯಲ್ಲಿದ್ದು, ಕೆಲಕಾಲ ಆಸ್ಪತ್ರೆಯ ವೈದ್ಯರ ಸಂಪರ್ಕಿಸಿ ಆರೋಗ್ಯದ ಸ್ಥಿತಿಗತಿಯ ಬಗ್ಗೆ ವಿಚಾರಿಸಿದರು ಎನ್ನಲಾಗಿದೆ. ಕೆಲಕಾಲ ಆಸ್ಪತ್ರೆಯಲ್ಲಿದ್ದು ಬಳಿಕ ಅಲ್ಲಿಂದ ಸಿಎಂ ತೆರಳಿದರು ಎನ್ನಲಾಗಿದ್ದು, ಆ ನಂತರವೂ ಗೃಹ ಮಂತ್ರಿ ಬಸವರಾಜ್ ಬೊಮ್ಮಾಯಿ ಸಂಜೆವರೆಗೂ ಆಸ್ಪತ್ರೆಯಲ್ಲಿದ್ದರು. ಈ ವೇಳೆ ಅವರೊಂದಿಗೆ ಸಂಸದ ಶಿವಕುಮಾರ್ ಜತೆಗಿದ್ದರು.

ಹಾನಗಲ್ ಶಾಸಕ ಸಿಎಂ ಉದಾಸಿ ಗಂಭೀರ ಪರಿಸ್ಥಿತಿಯಿರುವಾಗಲೇ ಸಿಎಂ ತಂಡ ಆಸ್ಪತ್ರೆಗೆ ತೆರಳಿರುವುದು ರಾಜಕೀಯ ಬೆಳವಣಿಗೆಗಳ ಲೆಕ್ಕಾಚಾರದಲ್ಲಿ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಓದಿ:ನೋಂದಾಯಿತ ಕಾರ್ಮಿಕರಿಗೆ 3,000₹ ಸಹಾಯ ಧನ ಬಿಡುಗಡೆ ಮಾಡಿದ ರಾಜ್ಯ ಸರ್ಕಾರ..!

ABOUT THE AUTHOR

...view details