ಕರ್ನಾಟಕ

karnataka

ETV Bharat / state

ಪ್ರಜ್ಞೆ ಕಳೆದುಕೊಂಡ ಪ್ರಯಾಣಿಕಳನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ಸಿಐಎಸ್​ಎಫ್​ ಸಿಬ್ಬಂದಿ

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಮಹಿಳಾ ಪ್ರಯಾಣಿಕಳಿಗೆ ಚಿಕಿತ್ಸೆ ಕೊಡಿಸಿದ ಸಿಐಎಸ್ಎಫ್​ ಸಿಬ್ಬಂದಿ ಕಾರ್ಯ ಶ್ಲಾಘನೆಗೆ ಪಾತ್ರವಾಗಿದೆ.

Etv Bharatcisf-personnel-help-to-unconscious-passenger
Etv Bharatಪ್ರಜ್ಞೆ ಕಳೆದುಕೊಂಡ ಪ್ರಯಾಣಿಕಳನ್ನು ಹೊತ್ತೊಯ್ದು ಚಿಕಿತ್ಸೆ ಕೊಡಿಸಿದ ಸಿಐಎಸ್​ಎಫ್​ ಸಿಬ್ಬಂದಿ

By

Published : Aug 24, 2022, 10:58 PM IST

ದೇವನಹಳ್ಳಿ:ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಿಗರ್ಮನ ಗೇಟ್ ಬಳಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ಸಿಐಎಸ್ಎಫ್​ ಸಿಬ್ಬಂದಿ ತಕ್ಷಣ ಹೆಗಲ ಮೇಲೆ ಹೊತ್ತೊಯ್ದು ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸಿದ್ದಾರೆ. ಸಿಬ್ಬಂದಿ ಕಾರ್ಯಕ್ಕೆ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಮಹಿಳಾ ಪ್ರಯಾಣಿಕಳಿಗೆ ಚಿಕಿತ್ಸೆ ಕೊಡಿಸಿದ ಸಿಐಎಸ್​ಎಫ್​ ಸಿಬ್ಬಂದಿ

ಮ್ಯಾಂಕ್ವೆ ಗ್ಲೋಬಲ್ ಸರ್ವಿಸಸ್ ಪ್ರೈ.ಲಿ. ಉದ್ಯೋಗಿ ಸಾಕ್ಷಿ ಎಂಬುವರು ನಿರ್ಗಮನ ಗೇಟ್ ನಂಬರ್ 7ರಲ್ಲಿ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದರು. ಈ ವೇಳೆ ಕೆಐಎಎಲ್ ನ ಕೇಂದ್ರೀಯ ಕೈಗಾರಿಕಾ ಭಧ್ರತಾ ಪಡೆ (CISF) ಇನ್ಸ್​​ಪೆಕ್ಟರ್ ಎನ್. ಕವಿತಾ, ಕಾನ್ಸ್​ಟೇಬಲ್ ಅನಿಮಾ ಮೊಂಡಲ್ ಮತ್ತು ಕಾನ್ಸ್​ಟೇಬಲ್​ ಡೇವಿಡ್ ಅವರು ತಕ್ಷಣ ಮಹಿಳೆಯನ್ನು ಏರ್​​ಪೋರ್ಟ್​​ನ ಆಸ್ಟರ್ ಕ್ಲಿನಿಕ್​ಗೆ ದಾಖಲಿಸಿದ್ದರು.

ಮಹಿಳಾ ಪ್ರಯಾಣಿಕಳಿಗೆ ಚಿಕಿತ್ಸೆ ಕೊಡಿಸಿದ ಸಿಐಎಸ್​ಎಫ್​ ಸಿಬ್ಬಂದಿ

ಇದನ್ನೂ ಓದಿ:ಜಂಬೋ ಎಲೆಕ್ಟ್ರಿಕ್​​ ಬೈಕ್​ ತಯಾರಿಸಿದ ರೋಹಿತ್​.. 2 ಗಂಟೆ ಚಾರ್ಜ್​​, 1080 ಕಿ.ಮೀಟರ್ ಪ್ರಯಾಣ

ಸೂಕ್ತ ಸಮಯದಲ್ಲಿ ಚಿಕಿತ್ಸೆ ಲಭಿಸಿದ್ದರಿಂದ ಸಾಕ್ಷಿಯವರು ಚೇತರಿಸಿಕೊಂಡಿದ್ದು, ಸಿಐಎಸ್ಎಫ್​ ಸಿಬ್ಬಂದಿ ಸೇವೆಗೆ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ:ಶಾಲೆಗೆ ಹೋಗುವ ಅವಸರದ ನಡುವೆ ರಸ್ತೆ ಹೊಂಡ ಮುಚ್ಚಿದ ವಿದ್ಯಾರ್ಥಿ.. ಶ್ಲಾಘನೆ

ABOUT THE AUTHOR

...view details