ದೊಡ್ಡಬಳ್ಳಾಪುರ :ಮಕ್ಕಳಾಗಲು ಹಾಗೂ ಪಾರ್ಶುವಾಯು ಸೇರಿದಂತೆ ಹಲವು ರೋಗಗಳಿಗೆ ಔಷಧಿ ಕೊಡಲು ಬಂದವನಿಗೆ ಗ್ರಾಮಸ್ಥರು ಗೂಸಾ ನೀಡಿರುವ ಘಟನೆ ತಾಲೂಕಿನ ತಿರುಮಗೊಂಡನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಂಡಿತನಿಗೆ ಗ್ರಾಮಸ್ಥರಿಂದ ಧರ್ಮದೇಟು ನಾಗರಾಜು ಎಂಬ ಆಯುರ್ವೇದ ಪಂಡಿತ ಕಳೆದ ತಿಂಗಳು ಗ್ರಾಮಕ್ಕೆ ಭೇಟಿ ನೀಡಿ, ಮಕ್ಕಳಾಗಲು, ಪಾರ್ಶುವಾಯು ರೋಗಕ್ಕೆ ಔಷಧಿ ಕೊಡುವುದಾಗಿ ಹೇಳಿದ್ದಾನೆ. ಈತನ ಮಾತು ನಂಬಿದ ಗೌರಮ್ಮ ಎಂಬ ಮಹಿಳೆ, ಮಕ್ಕಳಾಗಲು ಆತನಿಂದ ಔಷಧಿಯನ್ನು ತೆಗೆದುಕೊಂಡಿದ್ದಳು. ಔಷಧಿಗೆ ಎರಡು ಮೊಬೈಲ್ ಮತ್ತು 30 ಸಾವಿರ ರೂಪಾಯಿಯನ್ನ ಆಕೆಯಿಂದ ಪಡೆದುಕೊಂಡು ಆರೋಪಿ ಪರಾರಿಯಾಗಿದ್ದ.
ಓದಿ: ಪ್ರವಾಸಿಗರ ಹಾಟ್ಸ್ಪಾಟ್.. ಭದ್ರೆಯ ಮಡಿಲು, ಅಭಯಾರಣ್ಯದ ಒಡಲು..
ಗ್ರಾಮದ ಕೆಲವರಿಗೆ ರೋಗ ಗುಣವಾಗಲು ಆಯುರ್ವೇದ ಔಷಧಿ ನೀಡಿದ್ದ. ಆದರೆ, ರೋಗ ಮಾತ್ರ ವಾಸಿಯಾಗಿರಲಿಲ್ಲ. ಇಂದು ಇದೇ ವ್ಯಕ್ತಿ ಗ್ರಾಮಕ್ಕೆ ಬಂದು ಮಕ್ಕಳಾಗಲು, ಪಾರ್ಶುವಾಯು ಸೇರಿದಂತೆ ಹಲವು ರೋಗಗಳಿಗೆ ಆರ್ಯುವೇದ ಔಷಧಿ ನೀಡುವುದಾಗಿ ಬಂದಿದ್ದಾನೆ.
ಮೊದಲೇ ಈತನಿಂದ ಮೋಸ ಹೋಗಿದ್ದ ಗ್ರಾಮಸ್ದರು, ಈತನನ್ನು ಹಿಡಿದು ಗೂಸಾ ನೀಡಿದ್ದಾರೆ. ಆಯುರ್ವೇದ ಪಂಡಿತನೆಂಬುವುದಕ್ಕೆ ಆತನ ಬಳಿ ಯಾವುದೇ ಪತ್ರಗಳಿಲ್ಲ. ಆತನನ್ನ ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು ಮತ್ತೂಮ್ಮೆ ಗ್ರಾಮಕ್ಕೆ ಕಾಲಿಟ್ಟರೇ ಎಚ್ಚರಿಕೆ ಎಂದು ಹೇಳಿ ಕಳುಹಿಸಿದ್ದಾರೆ.