ದೊಡ್ಡಬಳ್ಳಾಪುರ: ಕೊರೊನಾ ವೈರಸ್ ನಿಯಂತ್ರಣಕ್ಕೆ ಇರುವ ಮಾರ್ಗ ಎಂದರೆ ಮನೆಯಲ್ಲಿರುವುದು. ಇದರಿಂದ ಅಗತ್ಯ ವಸ್ತುಗಳು ಸಿಗದೆ ಜನ ಕಷ್ಟ ಪಡುತ್ತಿದ್ದಾರೆ.
ಜನರ ಕಷ್ಟ ಅರಿತ ದೊಡ್ಡಬಳ್ಳಾಪುರ ಪೊಲೀಸರು ಅಗತ್ಯ ವಸ್ತುಗಳ ಪೂರೈಕೆಗಾಗಿ ತುರ್ತು ಸೇವೆಯನ್ನು ಆರಂಭಿಸಿದ್ದಾರೆ. ಸಹಾಯವಾಣಿಗೆ ಒಂದು ಕರೆ ಮಾಡಿದರೆ ಸಾಕು ಅಗತ್ಯ ವಸ್ತುಗಳನ್ನ ಹೊತ್ತ ಆಟೋ ಮನೆ ಬಾಗಿಲಿಗೆ ಬರಲಿದೆ.
ಅಗತ್ಯ ವಸ್ತುಗಳ ಪೂರೈಕೆಗೆ ಮನೆ ಬಾಗಿಲಿಗೆ ಬರಲಿದೆ ಆಟೋ ಲಾಕ್ ಡೌನ್ ಜಾರಿಯಾಗಿದ್ದನಿಂದ ಜನ ಮನೆ ಬಿಟ್ಟು ಹೊರಗೆ ಬರುವಂತಿಲ್ಲ, ಒಂದು ವೇಳೆ ಹೊರ ಬಂದರು ಪೊಲೀಸರ ಲಾಠಿ ರುಚಿ ನೋಡಬೇಕಾಗುತ್ತದೆ. ಪೊಲೀಸರು ಸಹ ಮನೆಯಿಂದ ಹೊರ ಬರಬೇಡಿಯೆಂದು ಮನವಿ ಮಾಡುತ್ತಿದ್ದಾರೆ.
ಆದರೆ ಅಗತ್ಯ ವಸ್ತುಗಳು ಸಿಗದೆ ಜನ ಪರದಾಟುವಂತಾಗಿದೆ. ಜನರ ಕಷ್ಟ ಅರಿತ ದೊಡ್ಡಬಳ್ಳಾಪುರ ಪೊಲೀಸರು ಜನರಿಗೆ ಅಗತ್ಯವಾದ ವಸ್ತುಗಳನ್ನ ಪೂರೈಕೆಗಾಗಿ ತುರ್ತು ಸೇವೆಯನ್ನು ಆರಂಭಿಸಿದೆ. ಜನರ ಮನೆ ಬಾಗಿಲಿಗೆ ಅಗತ್ಯ ವಸ್ತುಗಳನ್ನು ಸಾಗಿಸಲು 15 ಆಟೋ ಸಿದ್ಧವಾಗಿದೆ.
ಸಾರ್ವಜನಿಕರು ಸಹಾಯವಾಣಿ ನಂಬರ್ 99860 91898ಗೆ ಕರೆ ಮಾಡಿದರೆಸಾಕು ತಮಗೆ ಬೇಕಾದ ಅಗತ್ಯ ವಸ್ತುಗಳನ್ನ ತಮ್ಮ ಮನೆ ಬಾಗಿಲಿಗೆ ಆಟೋ ಚಾಲಕರು ತಂದು ಕೊಡುತ್ತಾರೆ.