ಕರ್ನಾಟಕ

karnataka

By

Published : May 29, 2019, 6:02 PM IST

ETV Bharat / state

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಆರೋಪ: ವಿದ್ಯುತ್ ತಂತಿಗೆ ದೇವನಹಳ್ಳಿಯಲ್ಲಿ‌ ಮತ್ತೊಂದು ಬಲಿ

ತಿಪ್ಪೆಗೆ ಕಸ ಹಾಕಲು ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಮಹಿಳೆವೋರ್ವಳು ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದೇವನಹಳ್ಳಿಯಲ್ಲಿ ಈ ದುರ್ಘಟನೆ ನಡೆದಿದ್ದು, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ವಿದ್ಯುತ್ ತಂತಿಗೆ ದೇವನಹಳ್ಳಿಯಲ್ಲಿ‌ ಮತ್ತೊಂದು ಬಲಿ

ಬೆಂಗಳೂರು:ಈಗಾಗಲೇ ನಗರದಲ್ಲಿ ವಿದ್ಯುತ್​ ಅವಘಡಗಳಿಂದಾಗಿ ಕೆಲವರ ಪ್ರಾಣ ಹಾರಿಹೋಗಿದ್ದರೆ, ಇನ್ನೂ ಕೆಲವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಲ್ಲೇನಹಳ್ಳಿಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್​ ತಂತಿ ತುಳಿದು ಮಹಿಳೆವೋರ್ವಳು ಸಾವನ್ನಪ್ಪಿದ್ದಾಳೆ.

ವಿದ್ಯುತ್ ತಂತಿಗೆ ದೇವನಹಳ್ಳಿಯಲ್ಲಿ‌ ಮತ್ತೊಂದು ಬಲಿ

ಸಾಕಮ್ಮ (55) ಮೃತ ಮಹಿಳೆ. ಇಂದು ಮಧ್ಯಾಹ್ನ ತಿಪ್ಪೆಗೆ ಕಸ ಹಾಕಲು ಹೋಗಿದ್ದ ವೇಳೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಸಾಕಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. 2 ದಿನಗಳ ಹಿಂದೆ ತಂತಿ ತುಂಡಾಗಿ ಬಿದ್ದಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೀಗಾಗಿ ಮಹಿಳೆಯ ಪ್ರಾಣ ಹೋಗಿದೆ ಎಂದು ಗ್ರಾಮಸ್ಥರು ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಇನ್ನು ಸ್ಥಳಕ್ಕೆ ಬಂದ ಬೆಸ್ಕಾಂ ಅಧಿಕಾರಿಗಳು ಮೃತಳ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ರು. ಅಂತೆಯೇ ಸ್ಥಳಕ್ಕೆ ಬಂದ ಚನ್ನರಾಯಪಟ್ಟಣ ಪೊಲೀಸರು ಘಟನೆ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದೇ ಮೊದಲಲ್ಲ:ಕಳೆದ ವಾರ ವಿದ್ಯುತ್​ ಅವಘಡದಿಂದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದು, ಇದೀಗ ಮತ್ತೊಂದು ಬಲಿಯಾಗಿರುವುದು ದುರಾದೃಷ್ಟ. ಇಂತಹ ದುರ್ಘಟನೆಗಳು ಮರುಕಳಿಸದಂತೆ ಬೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

For All Latest Updates

TAGGED:

ABOUT THE AUTHOR

...view details