ಆನೇಕಲ್(ಬೆಂಗಳೂರು): ಹುಳಿಮಾವು ಸೇರಿದಂತೆ ಆರೇಳು ಬಡಾವಣೆಯ ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿಯನ್ನು ಇಂದು ತೆರವುಗೊಳಿಸಲಾಯಿತು.
ಹುಳಿಮಾವು ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿ ತೆರವು.. ಮನೆಗಳು ನೆಲಸಮ - ರಾಜ ಕಾಲುವೆ ಒತ್ತುವರಿ ತೆರವು
ಕೆರೆ ಕಟ್ಟೆ ಹೊಡೆದು ಹೈರಾಣವಾಗಿದ್ದ ಹುಳಿಮಾವು ಆರೇಳು ಬಡಾವಣೆಯ ನಿವಾಸಿಗಳಿಗೆ ತಲೆನೋವಾಗಿದ್ದ ರಾಜ ಕಾಲುವೆ ಒತ್ತುವರಿಯನ್ನು ಇಂದು ತೆರವುಗೊಳಿಸುವ ಕಾರ್ಯ ನಡೆಯಿತು.
ಕೆರೆ ಜಾಗ ಒತ್ತುವರಿ ಮಾಡಿಕೊಂಡು ಮನೆಗಳ ನಿರ್ಮಾಣ ಮಾಡಿಕೊಳ್ಳಲಾಗಿತ್ತು. ಜೊತೆಗೆ ಒತ್ತುವರಿ ಜಾಗದಲ್ಲಿದ್ದ ರಾಜಕಾಲುವೆಗಳಿಂದಾಗಿ ಬಡಾವಣೆಗಳಿಗೆ ನುಗ್ಗಿದ ನೀರು ಸರಾಗವಾಗಿ ಹರಿಯದಂತಾಗಿತ್ತು. ಸದ್ಯ ಕಂದಾಯ ಇಲಾಖೆ ಅಧಿಕಾರಿಗಳು ಇದರ ತೆರವಿಗೆ ಮುಂದಾಗಿದ್ದಾರೆ.
ಹುಳಿಮಾವು ಕೆರೆಯಿಂದ ಹೊರ ಹೋಗುವ ನೀರಿನ ಕಾಲುವೆಗಳ ಅಕ್ಕಪಕ್ಕ ಅಕ್ರಮವಾಗಿ ಎದ್ದಿದ್ದ ಮನೆ, ಅಪಾರ್ಟ್ಮೆಂಟ್ಗಳು ತಲೆ ಎತ್ತಿದ್ದವು. ಸುಮಾರು 14 ಮನೆಗಳನ್ನ ತೆರವುಗೊಳಿಸಲು ಜಿಲ್ಲಾಧಿಕಾರಿಗಳಿಂದ ಸೂಚನೆಯಿತ್ತು. ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಬಿಬಿಎಂಪಿ ಅಧಿಕಾರಿಗಳೂ ಜೊತೆಗೂಡಿ ತೆರವು ಕಾರ್ಯ ನಡೆಸಿದ್ದಾರೆ.
ವಾಸವಿರುವ ಮನೆಗಳನ್ನು ಖಾಲಿ ಮಾಡಲು ಒಂದು ದಿನಸ ಕಾಲಾವಕಾಶ ನೀಡಿ ಉಳಿದ ಜಾಗವನ್ನು ವಶಕ್ಕೆ ಪಡೆದ ಅಧಿಕಾರಿಗಳು ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಕಾರ್ಯಾಚರಣೆ ನಡೆಸಿದರು. ಇದೇ ಸಂದರ್ಭದಲ್ಲಿ ಮನೆ ಮಾಲೀಕರು ಹಾಗೂ ಅಧಿಕಾರಿಗಳ ನಡುವೆ ವಾಗ್ವಾದ ಕೂಡ ನಡೆಯಿತು.