ಸರ್ಕಾರಿ ಆಸ್ಪತ್ರೆಯಲ್ಲಿ ಮೃತನ ಸಂಬಂದಿಕರ ಗೋಳಾಟ ದೇವನಹಳ್ಳಿ: ವೈದ್ಯರ ನಿರ್ಲಕ್ಷ್ಯದಿಂದ ವೃದ್ಧ ಸಾವನ್ನಪ್ಪಿದ್ದಾರೆ ಆರೋಪಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ಮೃತನ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಶುಗರ್ ಚೆಕ್ ಮಾಡಿಸಿಕೊಳ್ಳಲು ಬಂದಿದ್ದ ವೃದ್ಧ ಸಾವನ್ನಪ್ಪಿದ್ದು, ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಅಂತಾ ಕುಟುಂಬಸ್ಥರು ದೂರಿದ್ದಾರೆ. ಜತೆಗೆ ಸಾವಿನಿಂದ ಕಂಗೆಟ್ಟ ಕುಟುಂಬಸ್ಥರು ವೈದ್ಯರ ವಿರುದ್ಧ ಗರಂ ಆಗಿದ್ದು, ಆಸ್ಪತ್ರೆಯಲ್ಲಿನ ಚೇರ್ಗಳನ್ನು ಬಿಸಾಕಿ ಕಿಡಿಕಾರಿದ್ದಾರೆ.
ಶಿಡ್ಲಘಟ್ಟ ಮೂಲದ ಚಿನ್ನಪ್ಪ(61) ಎಂಬುವರು ಬೆಳಗ್ಗೆ ಶುಗರ್ ಚೆಕ್ಕಿಂಗ್ ಗೆ ಅಂತ ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ವೈದ್ಯರು ಸ್ವಂದಿಸದ ಹಿನ್ನೆಲೆ ವೃದ್ಧ ಸಾವನ್ನಪ್ಪಿದ್ದಾನೆ ಎಂದು ಕುಟುಂಬಸ್ಥರು ದೂರಿದ್ದಾರೆ. ಜತೆಗೆ ಬಡ ಜನರು ಬಂದ್ರೆ ಸರಿಯಾಗಿ ಚಿಕಿತ್ಸೆ ಕೊಡಲ್ಲ ಅಂತ ಸರ್ಕಾರಿ ಆಸ್ಪತ್ರೆ ವೈದ್ಯರ ವಿರುದ್ಧ ಮೃತನ ಸಂಬಂಧಿಕರು ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ.
ಇನ್ನು ಟಿಹೆಚ್ಒ ಸೇರಿದಂತೆ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಸರಿಯಾಗಿ ಚಿಕಿತ್ಸೆ ನೀಡದೆ ಬಡ ರೋಗಿಗಳ ಜೊತೆ ಚೆಲ್ಲಾಟವಾಡ್ತಿದ್ದಾರೆ ಅಂತಾ ಮೃತ ವೃದ್ಧನ ಮಗಳು ಆರೋಪಿಸಿದ್ದು, ಆಸ್ಪತ್ರೆಯ ದಾಖಲಾತಿ ಪುಸ್ತಕ ಪಿಠೋಪಕರಣ ಬಿಸಾಕಿ ರಂಪಾಟ ಮಾಡಿದ್ದಾರೆ. ಆಸ್ಪತ್ರೆಯಲ್ಲಿನ ವೈದ್ಯರ ವಿರುದ್ಧ ಮಹಿಳೆಯ ರಂಪಾಟ ನೋಡಿ ಸ್ಥಳಕ್ಕೆ ಬಂದ ಪೊಲೀಸರು ಮನವೊಲಿಸಲು ಹರಸಾಹಸ ಪಟ್ಟಿದ್ದಾರೆ. ಈ ವೇಳೆ ಪೊಲೀಸರ ವಿರುದ್ಧವೇ ಮಹಿಳೆ ತಿರುಗಿಬಿದ್ದಿದ್ದು, ಶವಪರೀಕ್ಷೆ ಮಾಡಲು ಬಿಡಲ್ಲ ಅಂತ ಹೇಳಿದ್ದಾರೆ.
ವೈದ್ಯರು ಹೇಳಿದ್ದೆನು..?
ಇನ್ನು, ಮೃತವೃದ್ಧ ಮೃತಪಟ್ಟಿರುವ ಬಗ್ಗೆ ಟಿಹೆಚ್ಓ ಕೂಡ ಸ್ಥಳ ಪರಿಶೀಲನೆ ನಡೆಸಿದ್ದು, ಬೆಳಗ್ಗೆ 10. 30 ಗಂಟೆಗೆ ಆಸ್ಪತ್ರೆಗೆ ರೋಗಿಯನ್ನ ಕರೆದುಕೊಂಡು ಬಂದಿದ್ದಾರೆ. ಈ ವೇಳೆ ಶುಗರ್ ಟೆಸ್ಟ್ ಮಾಡಿದಾಗ 450 ದಾಟಿತ್ತು. ಆದರೂ ಚಿಕಿತ್ಸೆಯನ್ನ ಕೊಟ್ಟಿದ್ದೇವೆ. ಆದ್ರೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದು, ನಮ್ಮದೇನು ನಿರ್ಲಕ್ಷ್ಯವಿಲ್ಲ ಎಂದು ಟಿಹೆಚ್ಓ ಸಂಜಯ್ ಹಾಗೂ ವೈದ್ಯೆ ಸ್ವರೂಪ ಅವರು ತಿಳಿಸಿದ್ದಾರೆ.
ಓದಿ:ಖಾಸಗಿ ಆಸ್ಪತ್ರೆಯಲ್ಲಿ ಬಾಣಂತಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ, ಕುಟುಂಬಸ್ಥರ ಪ್ರತಿಭಟನೆ