ಬೆಂ.ಗ್ರಾ/ಹೊಸಕೋಟೆ: ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರು ಎಲ್ಲವೂ ತಾವೇ ಆಗಬೇಕೆಂದು ಬಯಸುತ್ತಾರೆ ಎಂದು ಅಹಿಂದ ನಾಯಕ ಮುಕುಡಪ್ಪ ದೂರಿದರು.
ಸಿದ್ದರಾಮಯ್ಯ ವಿರುದ್ಧ ಅಹಿಂದ ನಾಯಕ ಮುಕುಡಪ್ಪ ವಾಗ್ದಾಳಿ - ಸಿದ್ದರಾಮಯ್ಯ ವಿರುದ್ಧ ಅಹಿಂದ ನಾಯಕ ಮುಕುಡಪ್ಪ ವಾಗ್ದಾಳಿ
ಕುರುಬ ಸಮುದಾಯಕ್ಕೆ ಸಿದ್ದರಾಮಯ್ಯ ಏನೂ ಮಾಡಿಲ್ಲ. ಅವರು ಎಲ್ಲವೂ ತಾವೇ ಆಗಬೇಕೆಂದು ಬಯಸುತ್ತಾರೆ ಎಂದು ಅಹಿಂದ ನಾಯಕ ಮುಕುಡಪ್ಪ ದೂರಿದರು.
ಹೊಸಕೋಟೆಯಲ್ಲಿ ಮಾತನಾಡಿದ ಅವರು, 2008ರ ಉಪ ಚುನಾವಣೆಗಳಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದ್ರು. ಆದರೆ ಇವಾಗ ಎಂಟಿಬಿ ನಾಗರಾಜ್ ಹಾಗೂ ಭೈರತಿ ಬಸವರಾಜು ಅವರನ್ನು ಹೀಯಾಳಿಸುತ್ತಿದ್ದಾರೆ ಎಂದರು. ಸಿದ್ದರಾಮಯ್ಯ ಎಂದೂ ಮುಂದಿನ ಬಾಗಿಲಲ್ಲಿ ಬಂದಿಲ್ಲ. ಅವರು ಹಿಂಬಾಗಿಲಿನಿಂದ ಪ್ರವೇಶಿಸುವ ನಾಯಕ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಪ್ರತಿಶತ ನೂರರಷ್ಟು ಕಾಗೆ ಬಂಗಾರ. ಅವರನ್ನು ಯಾರೂ ನಂಬಬೇಡಿ ಎಂದರು. 2008ರಲ್ಲಿ ಸಿದ್ದರಾಮಯ್ಯ ಬಿಜೆಪಿಗೆ ಸಹಾಯ ಮಾಡಿದ್ರು. ಅದನ್ನ ಇಲ್ಲ ಅಂತೇಳಲು ಅವರು ಯಾವ ದೇವಸ್ಥಾನಕ್ಕೆ ಬಂದರೂ ಪ್ರಮಾಣ ಮಾಡಲು ನಾನು ಸಿದ್ಧ ಎಂದು ಸವಾಲು ಹಾಕಿದರು.