ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ):ಲಾಕ್ಡೌನ್ ಹಿನ್ನಲೆ, ಕಳೆದ ಎರಡು ತಿಂಗಳಿಂದ ಮಲೇಷ್ಯಾದಲ್ಲಿ ಸಿಲುಕಿದ್ದ 94 ಕನ್ನಡಿಗರು ತಾಯ್ನಾಡಿಗೆ ಮರಳಿದ್ದಾರೆ.
ಮಲೇಷ್ಯಾದಲ್ಲಿ ಸಿಲುಕಿದ್ದ 94 ಕನ್ನಡಿಗರು ತಾಯ್ನಾಡಿಗೆ ವಾಪಾಸ್
ಮಲೇಷ್ಯಾದ್ಲಲಿ ಸಿಲುಕಿದ್ದ 94 ಕನ್ನಡಿಗರು ವಾಪಾಸ್ ತಾಯ್ನಾಡಿಗೆ ಮರಳಿದ್ದು,ಅವರ ಆರೋಗ್ಯ ತಪಾಸಣೆ ನಡೆಸಿ 14 ದಿನಗಳ ಕ್ವಾರಂಟೈನ್ಗೆ ಕಳುಹಿಸಲಾಗಿದೆ.
ಮಲೇಷ್ಯಾದ ಕೌಲಾಲಂಪುರ್ನಿಂದ ನಿನ್ನೆ ರಾತ್ರಿ 7.00 ಗಂಟೆಗೆ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಒಟ್ಟು 94 ಪ್ರಯಾಣಿಕರಲ್ಲಿ 4 ಗರ್ಭಿಣಿಯರು, ಹತ್ತು ವರ್ಷದೊಳಗಿನ ಐವರು ಮಕ್ಕಳು ಸೇರಿದಂತೆ 60 ಪುರುಷರು ಮತ್ತು 34 ಮಹಿಳೆಯರಿದ್ದಾರೆ. ಇವರೆಲ್ಲರನ್ನೂ ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಲಾಗಿದ್ದು,ಯಾವುದೇ ಪ್ರಯಾಣಿಕರಲ್ಲಿ ಕೊರೊನಾ ಲಕ್ಷಣಗಳು ಕಂಡುಬಂದಿಲ್ಲ.
ಆರೋಗ್ಯ ತಪಾಸಣೆಯ ಬಳಿಕ 94 ಪ್ರಯಾಣಿಕರನ್ನ 14 ದಿನಗಳ ಕ್ವಾರಂಟೈನ್ಗಾಗಿ ಹೋಟೆಲ್ಗಳಿಗೆ ಬಿಎಂಟಿಸಿ ಬಸ್ಗಳ ಮೂಲಕ ಕಳುಹಿಸಿಕೊಡಲಾಗಿದ್ದು,ಕ್ವಾರಂಟೈನ್ ವೆಚ್ಚವನ್ನ ಪ್ರಯಾಣಿಕರೇ ಭರಿಸಲಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದ್ದಾರೆ.