ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಹೆದ್ದಾರಿ ಅಗಲೀಕರಣದಿಂದ 800 ವರ್ಷಗಳ ಪುರಾತನ ಮಠ ತೆರವು : ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ - national highway widening

ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಅಶ್ರಯ ನೀಡಿರುವ ಮಠ, ಅನ್ನದಾನ ಮತ್ತು ವಿದ್ಯಾದಾನ ಮಾಡಿದೆ. ಮಠದಲ್ಲಿ ಮೂವರು ಸ್ವಾಮೀಜಿಗಳು ಜೀವಂತ ಸಮಾಧಿಯಾಗಿರುವ ಗದ್ದುಗೆಗಳಿವೆ. ಭಕ್ತರು ಮಠಕ್ಕೆ ಭೇಟಿ ನೀಡಿ ಗದ್ದುಗೆಗಳ ದರ್ಶನ ಪಡೆಯುತ್ತಾರೆ..

khani-math
ದೊಡ್ಡಬಳ್ಳಾಪುರದ ಖಾನಿಮಠ ತೆರವಿಗೆ ವಿರೋಧ

By

Published : Feb 1, 2022, 4:29 PM IST

ದೊಡ್ಡಬಳ್ಳಾಪುರ: 800 ವರ್ಷಗಳ ಇತಿಹಾಸ ಹೊಂದಿರುವ ಖಾನಿಮಠವು ಹೆದ್ದಾರಿ ಅಗಲೀಕರಣದಿಂದ ಕಣ್ಮರೆಯಾಗಲಿದೆ. ಶ್ರೀಮಠದಲ್ಲಿ ಜೀವಂತ ಸಮಾಧಿಯಾದ ಮೂರು ಗದ್ದುಗೆಗಳಿವೆ.

ಸಂಪ್ರದಾಯದ ಪ್ರಕಾರ ಗದ್ದುಗೆಗಳನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸುವಂತಿಲ್ಲ. ಹೀಗಾಗಿ, ಗದ್ದುಗೆಗಳ ಉಳುವಿಗಾಗಿ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಭಕ್ತರು ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ಸೊಣ್ಣೇನಹಳ್ಳಿಯ ಖಾನಿಮಠಕ್ಕೆ 800 ವರ್ಷಗಳ ಇತಿಹಾಸವಿದೆ. ತಾಲೂಕಿನ ಲಿಂಗಾಯತ ಸಮುದಾಯದ ಏಕೈಕ ಮಠ ಇದಾಗಿದೆ.

ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳಿಗೆ ಅಶ್ರಯ ನೀಡಿರುವ ಮಠ, ಅನ್ನದಾನ ಮತ್ತು ವಿದ್ಯಾದಾನ ಮಾಡಿದೆ. ಮಠದಲ್ಲಿ ಮೂವರು ಸ್ವಾಮೀಜಿಗಳು ಜೀವಂತ ಸಮಾಧಿಯಾಗಿರುವ ಗದ್ದುಗೆಗಳಿವೆ. ಭಕ್ತರು ಮಠಕ್ಕೆ ಭೇಟಿ ನೀಡಿ ಗದ್ದುಗೆಗಳ ದರ್ಶನ ಪಡೆಯುತ್ತಾರೆ.

ದೊಡ್ಡಬಳ್ಳಾಪುರದ ಖಾನಿಮಠ ತೆರವಿಗೆ ವಿರೋಧ

ಖಾನಿಮಠದ ಮುಂಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 207 ಹಾದು ಹೋಗಿದೆ. ಹೆದ್ದಾರಿಯ ಅಗಲೀಕರಣದಿಂದ ಪುರಾತನ ಮಠ ಕಣ್ಮರೆಯಾಗಲಿದೆ. ಸ್ವಾಮೀಜಿಗಳ ಮೂರು ಗದ್ದುಗೆಗಳು ಸಹ ಅಗಲೀಕರಣಕ್ಕೆ ಬಲಿಯಾಗಲಿವೆ. ಸಂಪ್ರದಾಯದ ಪ್ರಕಾರ ದೇವರ ಮೂರ್ತಿಗಳನ್ನ ಸ್ಥಳಾಂತರ ಮಾಡುವಂತೆ ಗದ್ದುಗೆಗಳನ್ನ ಸ್ಥಳಾಂತರ ಮಾಡುವಂತಿಲ್ಲ.

ಮಠ ಮತ್ತು ಗದ್ದುಗೆಗಳ ರಕ್ಷಣೆಗೆ ಇರುವ ಏಕೈಕ ಪರಿಹಾರ ಅಂದ್ರೆ ರಸ್ತೆ ಅಗಲೀಕರಣ ಮಾಡುವ ಬದಲಿಗೆ ಮಠದ ಮುಂಭಾಗ ಮೇಲ್ಸೇತುವೆ ನಿರ್ಮಾಣ ಮಾಡುವಂತೆ ಭಕ್ತರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಿದ್ದಾರೆ. ಈ ಕುರಿತು ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ಹೈಕೋರ್ಟ್ ಸಹ ಪರಿಶೀಲನೆ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.

ನಾರಹಳ್ಳಿಯಿಂದ ಚಿಕ್ಕಬೆಳವಂಗಲದ ಎರಡು ಕಿ.ಮೀ ಅಂತರದಲ್ಲಿ ಗ್ರಾಮಗಳಿಗೆ ಸಂಪರ್ಕಿಸುವ 16 ರಸ್ತೆಗಳು ಬರುತ್ತವೆ. ಈ ಸ್ಥಳದಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡಿದ್ರೆ ಗ್ರಾಮಸ್ಥರಿಗೂ ಅನುಕೂಲವಾಗಲಿದೆ ಮತ್ತು ಪುರಾತನ ಮಠ ಸಹ ಉಳಿಯಲಿದೆ. ಒಂದು ವೇಳೆ ರಸ್ತೆ ಅಗಲೀಕರಣವಾದಲ್ಲಿ 16 ರಸ್ತೆಗಳ ವಾಹನ ಸವಾರರ ಓಡಾಟಕ್ಕೂ ತೊಂದರೆಯಾಗಿ ಅಪಘಾತಗಳಿಗೆ ಕಾರಣವಾಗಲಿದೆ ಮತ್ತು ಜಾನುವಾರುಗಳ ಓಡಾಟಕ್ಕೂ ತೊಂದರೆಯಾಗಲಿದೆ. ಹೈಕೋರ್ಟ್ ಸೂಚನೆ ನೀಡಿದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮಾತ್ರ ಈ ಬಗ್ಗೆ ಗಮನ ಹರಿಸದೆ ಹೆದ್ದಾರಿ ಅಗಲೀಕರಣಕ್ಕೆ ಮುಂದಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details