ಕರ್ನಾಟಕ

karnataka

ETV Bharat / state

ಪ್ರಿಯಕರನ ಮನೆಯಲ್ಲಿ ಯುವತಿಯ ಶವ ಪತ್ತೆ... ಆಕ್ರೋಶಿತ ಪೋಷಕರಿಂದ ಯುವಕನ ಮನೆಗೆ ಬೆಂಕಿ - ಯುವತಿ ಕುಟುಂಬಸ್ಥರಿಂದ ಮನೆಗೆ ಬೆಂಕಿ

ಪತಿಗೆ ವಿಚ್ಛೇದನ ನೀಡುವ ನಿರ್ಧಾರ ಮಾಡಿ ತವರು ಮನೆಗೆ ಬಂದು ಪ್ರಿಯಕರನ ಜೊತೆ ವಾಸವಿದ್ದ ಯುವತಿ ಶವವಾಗಿ ಪತ್ತೆಯಾಗಿದ್ದಾಳೆ. ಇದು ಕೊಲೆ ಎಂದು ಯುವತಿಯ ಪೋಷಕರು ಆರೋಪಿಸಿ, ಯುವಕನ ಮನೆಗೆ ಬೆಂಕಿ ಹಚ್ಚಿದ್ದಾರೆ.

young-women-dead-body-found-in-her-boyfriend-house
ಪ್ರಿಯಕರನ ಮನೆಯೊಳಗೆ ಯುವತಿ ಶವ ಪತ್ತೆ

By

Published : Jul 9, 2021, 6:07 PM IST

Updated : Jul 9, 2021, 7:58 PM IST

ಬಾಗಲಕೋಟೆ:ಪ್ರಿಯಕರನ ಮನೆಯಲ್ಲಿಯೇ ನೇಣುಬಿಗಿದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿ ಪೋಷಕರು ಪ್ರಿಯಕರನ ಮನೆಗೆ ಬೆಂಕಿಹಚ್ಚಿರುವ ಘಟನೆಬಾಗಲಕೋಟೆ ಜಿಲ್ಲೆಯ ಕೆಲೂರ ಗ್ರಾಮದಲ್ಲಿ ನಡೆದಿದೆ.

ರಂಜಿತ್ ಹಾಗೂ ಬಸಮ್ಮ ಪ್ರೀತಿಸುತ್ತಿದ್ದರು ಆದರೆ ಅಂತರ್ಜಾತಿಯಾಗಿದ್ದರಿಂದ ವಿವಾಹವಾಗಿರಲಿಲ್ಲ. ಆದ್ರೆ ಬಳಿಕ ಬಸಮ್ಮಳನ್ನು ಗದಗ ಮೂಲದ ಯುವಕನ ಜೊತೆ ವಿವಾಹ ಮಾಡಲಾಗಿತ್ತು. ಆದ್ರೆ ಬಸಮ್ಮ ಆತನಿಗೆ ವಿಚ್ಛೇದನ ನೀಡಲು ನಿರ್ಧರಿಸಿ ಅರ್ಜಿ ಸಲ್ಲಿಸಿ ವಾಪಸು ತವರಿಗೆ ಬಂದು, ಪ್ರಿಯಕರ ರಂಜಿತ್ ಮನೆಯಲ್ಲಿ 5 ತಿಂಗಳಿನಿಂದ ವಾಸಿಸುತ್ತಿದ್ದಳು.

ಆಕ್ರೋಶಿತ ಪೋಷಕರಿಂದ ಯುವಕನ ಮನೆಗೆ ಬೆಂಕಿ

ಇದೀಗ ರಂಜಿತ್ ಮನೆಯಲ್ಲಿ ಯುವತಿಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇದು ಕೊಲೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆಯ ಬೆನ್ನಲ್ಲೇ ಯುವಕನ ಕುಟುಂಬಸ್ಥರು ನಾಪತ್ತೆಯಾಗಿದ್ದು, ಆಕ್ರೋಶಗೊಂಡ ಯುವತಿಯ ಪೋಷಕರು ಯುವಕನ ಮನೆಗೆ ಬೆಂಕಿ ಹಚ್ಚಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಜೊತೆ ಎಸ್​ಪಿ ಲೋಕೇಶ್ ಜಗಲಸಾರ ಮತ್ತು ಹಿರಿಯ ಪೊಲೀಸ್​ ಅಧಿಕಾರಿಗಳು ದೌಡಾಯಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಅಮೀನಗಡ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Last Updated : Jul 9, 2021, 7:58 PM IST

ABOUT THE AUTHOR

...view details