ಬಾಗಲಕೋಟೆ: ತನ್ನ ಯಾವ ಕೆಲಸಕ್ಕೂ ಮನೆಯವರ ಸಹಕಾರ ಇಲ್ಲ, ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ದಾರೆ ಎಂದು ಯುವಕನೋರ್ವ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಂಗಮೇಶ್ ಹೊಳೆನ್ನವರ (22) ನಾಪತ್ತೆಯಾದ ಯುವಕ.
ಬಾಗಲಕೋಟೆ: ತನ್ನ ಯಾವ ಕೆಲಸಕ್ಕೂ ಮನೆಯವರ ಸಹಕಾರ ಇಲ್ಲ, ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ದಾರೆ ಎಂದು ಯುವಕನೋರ್ವ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಸಂಗಮೇಶ್ ಹೊಳೆನ್ನವರ (22) ನಾಪತ್ತೆಯಾದ ಯುವಕ.
ಮುಧೋಳ ತಾಲೂಕಿನ ಹೆಬ್ಬಾಳ ಗ್ರಾಮದ ನಿವಾಸಿಯಾಗಿರುವ ಸಂಗಮೇಶ್, ಡೆತ್ ನೋಟ್ ಬರೆದು ಅದನ್ನು ವಾಟ್ಸಾಪ್ ಸ್ಟೇಟಸ್ನಲ್ಲಿ ಹಾಕಿ, ನಾಪತ್ತೆಯಾಗಿದ್ದನು. ಅಲ್ಲದೇ ಇದೀಗ ಜಿಲ್ಲೆಯ ಚಿಚಖಂಡಿ ಕೆಡಿ ಬಳಿಯ ಘಟಪ್ರಭಾ ನದಿ ಸೇತುವೆ ಬಳಿ ಯುವಕನ ಬೈಕ್ ಪತ್ತೆ ಆಗಿದ್ದು, ಸೇತುವೆಯಿಂದ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಲೋಕಾಪುರ ಪೊಲೀಸರು ಯುವಕನ ಹುಡುಕಾಟ ನಡೆಸುತ್ತಿದ್ದಾರೆ.
ಡೆತ್ ನೋಟ್ನಲ್ಲಿ ಏನಿತ್ತು?
ಇಷ್ಟವಿಲ್ಲದಿದ್ರೂ ಅಕ್ಕನ ಮಗಳ ಜೊತೆ ಮದುವೆಗೆ ಮನೆಯವರು ಮುಂದಾಗಿದಕ್ಕೆ ಯುವಕ ಈ ರೀತಿ ಮಾಡಿದ್ದಾನೆ ಎಂದು ಹೇಳಲಾಗಿದೆ. ಆದರೆ ಡೆತ್ ನೋಟ್ನಲ್ಲಿ ನನ್ನ ಯಾವುದೇ ಕೆಲಸಕ್ಕೂ ಹೆತ್ತವರಿಂದ ನನಗೆ ಸಪೋರ್ಟ್ ಸಿಕ್ಕಿಲ್ಲ. ನನ್ನೆಲ್ಲಾ ಆಸೆಗಳಿಗೆ ಹೆತ್ತವರೇ ಕಲ್ಲು ಹಾಕಿದ್ದಾರೆ, ಇದರಿಂದ ನನಗೆ ತುಂಬಾ ನೋವಾಗಿದೆ ಎಂದು ಬರೆದಿದ್ದಾನೆ. ಅಲ್ಲದೇ ಪತ್ರದಲ್ಲಿ ತನ್ನ ಪ್ರೀತಿಯ ವಿಷಯವನ್ನು ಬಹಿರಂಗ ಪಡಿಸಿರುವ ಯುವಕ, ನೀನು ಎಲ್ಲೇ ಇದ್ರೂ ಚೆನ್ನಾಗಿರುತ್ತೀಯ ಅನ್ನೋ ನಂಬಿಕೆ ನನಗಿದೆ, ನಾ ನಿನ್ನ ಜೊತೆಲೇ ಇರ್ತೀನಿ, ನಾನು ವಾಪಸ್ ಬರಲ್ಲ, ಬಾಯ್ ಚಿನ್ನಾ ಎಂದು ಬರೆದಿದ್ದು, ತನ್ನ ಕೆಲ ಸ್ನೇಹಿತರಿಗೆ ನನ್ನ ಕ್ಷಮಿಸಿ, ಮಿಸ್ ಯೂ ಎಂದು ಬರೆದಿದ್ದಾನೆ.