ಕರ್ನಾಟಕ

karnataka

ETV Bharat / state

'ಆಲಮಟ್ಟಿ ಹಿನ್ನೀರಲ್ಲಿ ಮುಳುಗಡೆಯಾದ ಸಂತ್ರಸ್ತರಿಗೆ ಹಣ ನೀಡುವರೇ ಸಿಎಂ?' - CM give fund in budget

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಮಾ.8ರಂದು ಬಜೆಟ್ ಮಂಡಣೆ ಮಾಡುತ್ತಿದ್ದು, ಈ ಬಾರಿಯಾದರೂ ಆಲಮಟ್ಟಿ ಹಿನ್ನೀರಿನ ಸಂತ್ರಸ್ತರ ಸಮಸ್ಯೆಗಳನ್ನು ಬಗೆಹರಿಸುವಂತಹ ಬಜೆಟ್ ನೀಡುತ್ತಾರೆಯೇ ಎಂದು ಇಲ್ಲಿನ ಜನರ ಕಾಯುತ್ತಿದ್ದಾರೆ.

ಸಂತ್ರಸ್ತರಿಗೆ ಹಣ ನೀಡುವರೇ ಸಿಎಂ
ಸಂತ್ರಸ್ತರಿಗೆ ಹಣ ನೀಡುವರೇ ಸಿಎಂ

By

Published : Mar 4, 2021, 8:55 PM IST

Updated : Mar 4, 2021, 9:02 PM IST

ಬಾಗಲಕೋಟೆ:ಏಷ್ಯಾ ಖಂಡದಲ್ಲಿಯೇ ಮುಳುಗಡೆಯಾದ ಅತಿ ದೊಡ್ಡ ನಗರ ಎಂದು ಖ್ಯಾತಿ ಪಡೆದಿರುವ ಬಾಗಲಕೋಟೆ ನಗರದ ಸಂತ್ರಸ್ತರ ಸಮಸ್ಯೆಗಳು ಮಾತ್ರ ಐದು ದಶಕಗಳು ಕಳೆದರೂ ಬಗೆಹರಿಯುತ್ತಿಲ್ಲ. 1964ರಲ್ಲಿ ಅಂದಿನ ಪ್ರಧಾನಿ ಲಾಲ್ ಬಹುದ್ದೂರ್​​ ಶಾಸ್ತ್ರಿಯವರು ಆಲಮಟ್ಟಿ ಆಣೆಕಟ್ಟಿನ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದರು. ಆ ನಂತರ ಇದುವರೆಗೂ ಸಮಸ್ಯೆಗಳು ಬಗೆಹರಿಯದೇ ಸಂತ್ರಸ್ತರ ಬವಣೆ ತಪ್ಪಿಲ್ಲ.

ಆಲಮಟ್ಟಿ ಹಿನ್ನೀರಿನಲ್ಲಿ ಮುಳುಗಡೆಯಾದ ಸಂತ್ರಸ್ತರು

2003-04 ರಲ್ಲಿ ಆಲಮಟ್ಟಿ ಹಿನ್ನೀರಿನಲ್ಲಿ ಮುಳಗಡೆಯಾದ ಸಂತ್ರಸ್ತರಿಗೆ ಮೂಲಭೂತ ಸೌಲಭ್ಯವನ್ನು ನೀಡುವಂತೆ ಆಗ್ರಹಿಸಿ ಅಂದಿನ ಸಿಎಂ ಎಸ್. ಎಂ. ಕೃಷ್ಣ ನೇತೃತ್ವದ ಸರ್ಕಾರದ ವಿರುದ್ಧ ಈಗಿನ ಮುಖ್ಯಮಂತ್ರಿ ಬಿಎಸ್​ವೈ ಪ್ರತಿಭಟಿಸಿದ್ರು.

ನಂತರ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪನವರು ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದನೆ ನೀಡಿಲ್ಲ. ಈಗ ಅವರೇ ಮುಖ್ಯಮಂತ್ರಿ ಆಗಿದ್ದಾರೆ. ಈಗಲಾದರೂ ಬಜೆಟ್ ಮೂಲಕ ಹಣ ನೀಡುತ್ತಾರಾ? ಎಂಬುದು ಚರ್ಚೆಯ ವಿಷಯವಾಗುತ್ತಿದೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬರುವ ಮುಂಚೆಯೇ ಕೃಷ್ಣಾ ಕಡೆಗೆ ನಡಿಗೆ ಎಂದು ಬಳ್ಳಾರಿಯಿಂದ ಪಾದಯಾತ್ರೆ ಹಮ್ಮಿಕೊಂಡು, ಕೂಡಲಸಂಗಮದವರೆಗೆ ಹೋರಾಟ ನಡೆಸಿದ್ರು. ಆದ್ರೆ ಸಿದ್ದು ಮುಖ್ಯಮಂತ್ರಿ ಆಗಿ ಐದು ವರ್ಷ ಆಡಳಿತ ಮಾಡಿದರೂ, ಹಣ ನೀಡದೇ ಕೃಷ್ಣಾರ್ಪಣೆ ಮಾಡಿದರು.

ಇದನ್ನೂ ಓದಿ: ಮೂಲಭೂತ ಸೌಕರ್ಯ: ಬಜೆಟ್‌ನಲ್ಲಿ ಉ.ಕರ್ನಾಟಕ ಭಾಗಕ್ಕೂ ಆದ್ಯತೆ ನೀಡಲು ಆಗ್ರಹ

ಆಲಮಟ್ಟಿ ಆಣೆಕಟ್ಟಿನಲ್ಲಿ 525 ಮೀಟರ್​ ನೀರು ಸಂಗ್ರಹ ಮಾಡಲು ಸುಪ್ರೀಂಕೋರ್ಟ್​ ಆದೇಶ ನೀಡಿದೆ. ಇದರಿಂದ ಬಾಗಲಕೋಟೆ ನಗರದ ಕೆಲ ಪ್ರದೇಶ ಹಾಗೂ 22 ಗ್ರಾಮಗಳು, ಲಕ್ಷಾಂತರ ಎಕರೆ ಜಮೀನು ಮುಳುಗಡೆ ಆಗಲಿದೆ. ಇವುಗಳಿಗೆ ಪುನರ್​ವಸತಿ,ಪುನರ್​ ನಿರ್ಮಾಣ ಹಾಗೂ ಪರಿಹಾರಧನ ಎಂದು ಸಾವಿರಾರು ಕೋಟಿ ರೂಪಾಯಿ ಹಣವನ್ನು ಸರ್ಕಾರ ಬಜೆಟ್​​ನಲ್ಲಿ ಮೀಸಲಿಡಬೇಕಾಗಿದೆ. ಇದರಿಂದ ನವನಗರದಲ್ಲಿ ಯೂನಿಟ್ 2 ಹಾಗೂ ಯೂನಿಟ್ 3 ಎಂದು ಸಾರ್ವಜನಿಕರ ವಾಸಕ್ಕೆ ಅಭಿವೃದ್ದಿಪಡಿಸಬೇಕಾಗಿದೆ.ಇದಕ್ಕೆ ಜಮೀನು ಖರೀದಿ, ಪರಿಹಾರ ಧನ, ಮನೆ ಮಠ ಕಳೆದುಕೊಂಡವರಿಗೆ ಪರಿಹಾರ ಧನ, ನಿವೇಶವನ ,ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗಿದೆ.

Last Updated : Mar 4, 2021, 9:02 PM IST

ABOUT THE AUTHOR

...view details