ಕರ್ನಾಟಕ

karnataka

ETV Bharat / state

ಪ್ರತ್ಯಕ್ಷದರ್ಶಿ ದಾಖಲೆ ನೀಡಿದ್ರೆ ಡಿಸಿಎಂ ಪುತ್ರನ ವಿರುದ್ಧ ಕ್ರಮ: ಬಾಗಲಕೋಟೆ ಎಸ್​ಪಿ - ಡಿಸಿಎಂ ಲಕ್ಷ್ಮಣ್ ಸವದಿ ಅವರ ಪುತ್ರ ಚಿದಾನಂದ ಸವದಿ

ಡಿಸಿಎಂ ಲಕ್ಷ್ಮಣ್​ ಸವದಿ ಅವರ ಪುತ್ರ ಚಿದಾನಂದ ಸವದಿಯವರು ಕಾರು ಚಾಲನೆ ಮಾಡುತ್ತಿರುವ ಬಗ್ಗೆ ಯಾರಾದರೂ ಪ್ರತ್ಯಕ್ಷದರ್ಶಿ ಹಾಗೂ ವಿಡಿಯೋ ಇದ್ದ ಮಾಹಿತಿ ನೀಡಿದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ. ಪ್ರಾಮಾಣಿಕವಾಗಿ ಪ್ರಕರಣದ ತನಿಖೆ ನಡೆಸಿ, ಸೂಕ್ತಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಸ್​ಪಿ ಲೋಕೇಶ್ ಜಗಲಸಾರ ಸ್ಪಷ್ಟಪಡಿಸಿದ್ದಾರೆ.

Chidananda Savadi car accident
ಚಿದಾನಂದ ಸವದಿ ಕಾರು ಅಪಘಾತ

By

Published : Jul 6, 2021, 1:00 PM IST

Updated : Sep 11, 2021, 3:58 PM IST

ಬಾಗಲಕೋಟೆ:ಡಿಸಿಎಂ ಲಕ್ಷ್ಮಣ್ ಸವದಿ ಅವರ ಪುತ್ರ ಚಿದಾನಂದ ಸವದಿ ಕಾರು ಅಪಘಾತದಿಂದ ಮೃತಪಟ್ಟ ರೈತ ಕೂಡ್ಲಪ್ಪ ಅಂತ್ಯಸಂಸ್ಕಾರವನ್ನು ಚಿಕ್ಕಹಂಡ್ರಗಲ್ ಗ್ರಾಮದಲ್ಲಿ ನೆರವೇರಿಸಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.

ಚಾಲಕನ ವಿರುದ್ಧ ಪ್ರಕರಣ:

ಈ ನಡುವೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಜಗಲಸಾರ, ಚಿದಾನಂದ ಸವದಿ ಮಾಲೀಕತ್ವದ ಕಾರಿನಿಂದ ಅಪಘಾತ ಸಂಭವಿಸಿದೆ. ಅಥಣಿ ನಿವಾಸಿಯಾಗಿರುವ ವಾಹನ ಚಾಲಕ ಹನಮಂತ ಸಿಂಗ್ ರಜಪೂತ್ ವಿರುದ್ಧ ಐಪಿಸಿ ಸೆಕ್ಷನ್​ 304 ಎ ಅಡಿ ಕೇಸ್ ದಾಖಲಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಹಾಗೂ ಕುಟುಂಬದವರು ನೀಡಿರುವ ಹೇಳಿಕೆ ಮೇರೆಗೆ ಪ್ರಕರಣ‌ ದಾಖಲಿಸಲಾಗಿದೆ. ಚಾಲಕನನ್ನು ವಿಚಾರಣೆ ನಡೆಸಿದ್ದು, ಆತ ಯಾವುದೇ ರೀತಿಯ ಮದ್ಯಪಾನ ಮಾಡಿರಲಿಲ್ಲ ಎಂದು ತಿಳಿಸಿದರು.

ರೈತ ಕೂಡ್ಲಪ್ಪ ಅಂತ್ಯಸಂಸ್ಕಾರ

ಚಿದಾನಂದ ಸವದಿ ಸ್ಥಳದಲ್ಲೇ ಇದ್ದರು:

ಪೊಲೀಸರು ಸ್ಥಳಕ್ಕೆ ತೆರಳಿದ ಸಂದರ್ಭದಲ್ಲಿ ಚಾಲಕ ಹಾಗೂ ಇನ್ನೂ ಮೂವರು ಗ್ರಾಮಸ್ಥರ ಜೊತೆ ಕುಳಿತಿದ್ದರು. ಜೊತೆಗೆ ಚಿದಾನಂದ ಸವದಿ ಕೂಡ ಇದ್ದರು. ಗಾಯಾಳು ವ್ಯಕ್ತಿ ಮತ್ತು ಅಪಘಾತವಾದ ವಾಹನವನ್ನು ಸೀಜ್ ಮಾಡಿಕೊಂಡ ಬಳಿಕ ಅವರು ಪರ್ಯಾಯ ವ್ಯವಸ್ಥೆ ಮಾಡಿಕೊಂಡು ಹೋಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಹಾಗೆ ಪ್ರಕರಣ ದಾಖಲಾಗಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆದಿದೆ ಎಂದು ಎಸ್​ಪಿ ಮಾಹಿತಿ ನೀಡಿದರು.

ಚಿದಾನಂದ ಸವದಿಯವರು ಕಾರು ಚಾಲನೆ ಬಗ್ಗೆ ಪ್ರತ್ಯಕ್ಷದರ್ಶಿ ಮಾಹಿತಿ ನೀಡಿದ್ರೆ ಕ್ರಮ ಕೈಗೊಳ್ಳಲಾಗುವುದು: ಎಸ್​ಪಿ ಲೋಕೇಶ್ ಜಗಲಸಾರ

ಯಾವುದೇ ರಾಜಕೀಯ ಒತ್ತಡವಿಲ್ಲ:

ಚಿದಾನಂದ ಸವದಿಯವರು ಕಾರು ಚಾಲನೆ ಮಾಡುತ್ತಿರುವ ಬಗ್ಗೆ ಯಾರಾದರೂ ಪ್ರತ್ಯಕ್ಷದರ್ಶಿ ಹಾಗೂ ವಿಡಿಯೋ ಇದ್ದ ಮಾಹಿತಿ ನೀಡಿದರೆ ಅವರ ಡಿಸಿಎಂ ಪುತ್ರನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಈ ಸಂಬಂಧ ಪೊಲೀಸರ ಮೇಲೆ ಯಾವುದೇ ರಾಜಕೀಯ ಒತ್ತಡವಿಲ್ಲ. ಪ್ರಾಮಾಣಿಕವಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಎಸ್​ಪಿ ಲೋಕೇಶ್​ ಜಗಲಸಾರ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ:ಡಿಸಿಎಂ ಸವದಿ ಪುತ್ರನ ಕಾರು ಅಪಘಾತ ಪ್ರಕರಣ: ಪ್ರತ್ಯಕ್ಷದರ್ಶಿ ಹೇಳಿದ್ದೇನು?

Last Updated : Sep 11, 2021, 3:58 PM IST

ABOUT THE AUTHOR

...view details