ಕರ್ನಾಟಕ

karnataka

ETV Bharat / state

ಖ್ಯಾತ ವನ್ಯಮೃಗ ಚಿತ್ರ ಕಲಾವಿದ ಜಯವಂತ ಮುನ್ನೋಳ್ಳಿಗೆ ರಾಜ್ಯೋತ್ಸವ ಪ್ರಶಸ್ತಿ

ಮುನ್ನೋಳ್ಳಿಯವರು ಓರ್ವ ಅದ್ಭುತ ಚಿತ್ರಕಾರ ಎನ್ನುವುದಕ್ಕೆ ಅವರು ವಿಶ್ವದ ತುಂಬ ತಮ್ಮ ಚಿತ್ರಕಲೆಯನ್ನು ಪ್ರದರ್ಶನ ಮಾಡಿರುವುದು ಸಾಕ್ಷಿ. ಮುಂಬೈನ ಪ್ರತಿಷ್ಠಿತ ಜಾಹಾಂಗೀರ್ ಆರ್ಟ್​ ಗ್ಯಾಲರಿಯಲ್ಲಿ 15 ಬಾರಿ, ತಾಜ್ ಆರ್ಟ್​ ಗ್ಯಾಲರಿಯಲ್ಲಿ ಎರಡು ಬಾರಿ, ಮುಂಬೈ ಆರ್ಟ್​ ಗ್ಯಾಲರಿಯಲ್ಲಿ ಸೇರಿಂದತೆ ಹಲವು ಕಡೆ ಇವರು ಚಿತ್ರ ಪ್ರದರ್ಶನ ಏರ್ಪಡಿಸಿದ್ದರು.

ಖ್ಯಾತ ವನ್ಯಮೃಗ ಚಿತ್ರ ಕಲಾವಿದ ಜಯವಂತ ಮುನ್ನೋಳ್ಳಿಗೆ ರಾಜ್ಯೋತ್ಸವ ಪ್ರಶಸ್ತಿ

By

Published : Oct 30, 2019, 4:20 AM IST

ಬಾಗಲಕೋಟೆ: ಅಂತರಾಷ್ಟ್ರೀಯ ಖ್ಯಾತಿಯ ವನ್ಯಮೃಗ ಚಿತ್ರ ಕಲಾವಿದರಾದ ಜಯವಂತ ಮುನ್ನೋಳ್ಳಿ ಅವರಿಗೆ ಈ ವರ್ಷದ ಹೊರನಾಡ ವಿಭಾಗದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.

ಮುಂಬೈ ನಿವಾಸಿಯಾದರೂ ಅಪ್ಪಟ ಉತ್ತರ ಕರ್ನಾಟಕದ ಭಾಷೆಯಲ್ಲಿ ಮಾತನಾಡುತ್ತಾರೆ. ಸದ್ಯ ಅವರು ಹೊರನಾಡು ಕನ್ನಡಿಗರಾಗಿ ಮುಂಬೈ ನಗರಿಯಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. 1940 ರಲ್ಲಿ ಬನಹಟ್ಟಿಯಲ್ಲಿ ಜನಿಸಿದ ಜಯವಂತ ಮುನ್ನೋಳ್ಳಿಯವರಿಗೆ ಚಿತ್ರಕಲೆಯ ಬಗ್ಗೆ ಆಸಕ್ತಿ ಬಾಲ್ಯದಿಂದಲೇ ಇತ್ತು. ಅವರು ಕಲಿತಿದ್ದು ಹ್ಯಾಂಡ್​ಲೂಮ್ ಟೆಕ್ಸ್​ಟೈಲ್‍ನಲ್ಲಿ ಡಿಪ್ಲೋಮಾ ಪದವಿ. ಆದರೆ, ಚಿತ್ರಕಲೆಯನ್ನು ಹವ್ಯಾಸವಾಗಿ ತೆಗೆದುಕೊಂಡಿದ್ದರು.

ಭಾರತ ಸರ್ಕಾರದ ನೇಕಾರರ ಸೇವಾ ಕೇಂದ್ರದ ಸಹಾಯಕ ನಿರ್ದೇಶಕರ ವೃತ್ತಿಯಿಂದ ನಿವೃತ್ತಿಯಾದ ನಂತರ ಚಿತ್ರಕಲೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಎಪ್ಪತೈದರ ಆಸುಪಾಸಿನ ವ್ಯಕ್ತಿ ಜಯವಂತ ಮುನ್ನೋಳ್ಳಿ ತಮ್ಮ ಕ್ಯಾನ್​ವಾಸ್, ಕುಂಚ ಮತ್ತು ಬಣ್ಣಗಳ ಮೂಲಕ ವನ್ಯಮೃಗಗಳ ಚಿತ್ರ ಬರೆದು ಬಹಳ ಹೆಸರು ಗಳಿಸಿದ್ದಾರೆ.

ಮುನ್ನೋಳ್ಳಿಯವರು ಓರ್ವ ಅದ್ಭುತ ಚಿತ್ರಕಾರ ಎನ್ನುವುದಕ್ಕೆ ಅವರು ವಿಶ್ವದ ತುಂಬ ತಮ್ಮ ಚಿತ್ರಕಲೆಯನ್ನು ಪ್ರದರ್ಶನ ಮಾಡಿರುವುದು ಸಾಕ್ಷಿ. ಮುಂಬೈನ ಪ್ರತಿಷ್ಠಿತ ಜಾಹಾಂಗೀರ್ ಆರ್ಟ್​ ಗ್ಯಾಲರಿಯಲ್ಲಿ 15 ಬಾರಿ, ತಾಜ್ ಆರ್ಟ್​ ಗ್ಯಾಲರಿಯಲ್ಲಿ ಎರಡು ಬಾರಿ, ಮುಂಬೈ ಆರ್ಟ್​ ಗ್ಯಾಲರಿಯಲ್ಲಿ ಒಮ್ಮೆ, 4 ಬಾರಿ ಬಜಾಜ್ ಆರ್ಟ್ ಗ್ಯಾಲರಿ, ಮುಂಬೈನ ನ್ಯಾಚುರಲ್ ಹಿಸ್ಟರಿ ಸೊಸೈಟಿ, ಬೆಂಗಳೂರಿನ ಲಲಿತ ಕಲಾ ಅಕಾಡೆಮಿ ಹಾಗೂ ಮುಂಬೈನ ಲೀಲಾ ಗ್ಯಾಲರಿಯಲ್ಲಿ ತಲಾ ಒಂದು ಬಾರಿ ಏಕ ವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿದ್ದರು.

ತಾಂಝೇನಿಯಾ, ಇಂಗ್ಲೆಂಡ್, ಇಟಲಿ, ಆಸ್ಟ್ರೇಲಿಯಾ, ಕೆನಡಾದ ಟೋರಾಂಟೋ, ಶ್ರೀಲಂಕಾ, ಹಾಲಂಡ್, ಡೆನ್ಮಾರ್ಕ್, ಜಪಾನ್​, ಅಮೇರಿಕಾದ ನ್ಯೂಯಾರ್ಕ್​ ನಗರ, ಸೌಥ್​​ ಕೋರಿಯಾ, ಹಾಂಕಾಂಗ್​, ಜರ್ಮನಿಯಂತಹ ದೇಶಗಳಲ್ಲಿ ಅವರ ಚಿತ್ರಕಲೆಗಳನ್ನು ಸಂಗ್ರಹಿಸಲಾಗಿದೆ,

ಚಿತ್ರಕಲೆಯಲ್ಲಿ ಇಷ್ಟೊಂದು ಸಾಧನೆ ಮಾಡಿದ ಮುನ್ನೋಳ್ಳಿಯವರಿಗೆ ಸಂದ ಪ್ರಶಸ್ತಿ ಗೌರವಗಳು ಬಹಳಷ್ಟು ಕಡಿಮೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ, ಎಸ್ಸೋ ಕ್ಯಾಲೆಂಡರ್ ಸ್ಪರ್ಧೆಯಲ್ಲಿ ಪ್ರಶಸ್ತಿಗಳು ಮಾತ್ರ ಅವರಿಗೆ ಲಭಿಸಿವೆ.

ABOUT THE AUTHOR

...view details