ಬಾಗಲಕೋಟೆ: ಜಿಲ್ಲೆಯ ಕೃಷ್ಣಾ, ಘಟಪ್ರಭಾ ಹಾಗೂ ಮಲ್ಲಪ್ರಭಾ ನದಿಗಳ ಪ್ರವಾಹದಿಂದ ಗ್ರಾಮದಲ್ಲಿನ ಸ್ಮಾರಕಗಳು ಹಾಗೂ ಸೇತುವೆಗಳು ಮುಳಗಡೆಯಿಂದಾಗಿ ಸಾಕಷ್ಟು ಜನ ತೊಂದರೆಗಿಡಾದರೆ, ಮತ್ತಷ್ಟು ಜನರಿಗೆ ಇದೆ ಪ್ರವಾಸಿ ತಾಣವಾಗಿ ಹೊರಹೊಮ್ಮಿದೆ.
ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ
ಪ್ರವಾಹದಿಂದ ಮುಳಗಡೆ ಆಗಿರುವ ಐತಿಹಾಸಿಕ ಸ್ಮಾರಕಗಳು, ಪ್ರವಾಸಿಗರು ವೀಕ್ಷಣೆ ಮಾಡುವ ಸಂಖ್ಯೆ ಕಡಿಮೆ ಆಗಿದ್ದರೆ,ಸ್ಥಳೀಯರು ವೀಕ್ಷಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತದೆ.
ಪ್ರವಾಹದಿಂದ ಮುಳಗಡೆಗೊಂಡ ಐತಿಹಾಸಿಕ ಸ್ಮಾರಕಗಳು: ಆದರೂ ಸೆಲ್ಫಿಗಾಗಿ ಮುಗಿಬಿದ್ದ ಜನ
ಹೌದು, ಬಾದಾಮಿ ಚಾಲುಕ್ಯರು ಆಳಿದ ಕಾಲದಲ್ಲಿ ನಿರ್ಮಾಣ ಆಗಿರುವ ಪಟ್ಟದಕಲ್ಲು ಸಂಪೂರ್ಣ ಜಲಾವೃತಗೊಂಡಿದೆ. ಹೀಗೆ ಜಲಾವೃತಗೊಂಡಿರುವ ಕಾಟಾಪೂರ- ಪಟ್ಟದಕಲ್ಲು ನೋಡಲು ಗುಡೂರು, ಬಾದಾಮಿ, ಬಾಗಲಕೋಟೆಯಿಂದ ಜನರು ಬರುತ್ತಿದ್ದಾರೆ. ನೀರಿನ ಒಳಗೆ ಹೋಗಿ ಸೆಲ್ಫಿ , ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗುತ್ತಿದೆ.
ಇದರಿಂದ ಪೊಲೀಸರಿಗೆ ಕಿರಿಕಿರಿ ಉಂಟಾಗಿದ್ದು, ಏನಾದರೂ ಅನಾಹುತ ಆದಲ್ಲಿ, ಅಧಿಕಾರಗಳ ಮೇಲೆ ಬರುತ್ತದೆ ಎಂದು ಪೊಲೀಸ್ ಅಂಜಿಕೆಯಲ್ಲಿದ್ದರೆ, ಯಾವುದೇ ಅಂಜಿಕೆ ಇಲ್ಲದೇ ಜನರು ನೀರಿನ ಒಳಗೆ ನುಗ್ಗಿ ಫೋಟೋ ತೆಗೆದುಕೊಳ್ಳುವ ಹುಚ್ಚು ಹೆಚ್ಚಾಗಿದೆ.