ಕರ್ನಾಟಕ

karnataka

ETV Bharat / state

ಸಾವಿನಲ್ಲೂ ಒಂದಾದ ದಂಪತಿ.. 3 ಗಂಟೆ ಅಂತರದಲ್ಲಿ ಪತಿ ಹಿಂಬಾಲಿಸಿದ ಪತ್ನಿ - ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯ

ಬಾಗಲಕೋಟೆ ಜಿಲ್ಲೆಯಲ್ಲಿ ಸಾವಿನಲ್ಲೂ ಒಂದಾದ ದಂಪತಿಯ ಅಂತ್ಯಕ್ರಿಯೆಯನ್ನು ಕುಟುಂಬಸ್ಥರು ನೆರವೇರಿಸಿದ್ದಾರೆ. ಮೂರು ಗಂಟೆ ಅಂತರದಲ್ಲಿ ಗಂಡ ಹೆಂಡತಿ ಮೃತಪಟ್ಟಿರುವುದು ತಿಳಿದು ಬಂದಿದೆ.

old couple died together  Couple died same time in Bagalkot  Husband and wife died at a time  couple died together in Bagalkot  ಪತಿಯನ್ನು ಹಿಂಬಾಲಿಸಿದ ಪತ್ನಿ  ಸಾವಿನಲ್ಲೂ ಒಂದಾದ ದಂಪತಿ  ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯ  ಬಾಗಲಕೋಟೆಯಲ್ಲಿ ದಂಪತಿ ಸಾವು
ಸಾವಿನಲ್ಲೂ ಒಂದಾದ ದಂಪತಿ

By

Published : Aug 30, 2022, 11:10 AM IST

ಬಾಗಲಕೋಟೆ: ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತವೆ. ವಿವಾಹವಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನುಕಂಡು ಸಿಹಿ, ಕಹಿ, ನೋವು, ಕಷ್ಟಗಳ ಸವಾಲುಗಳನ್ನು ಒಟ್ಟಿಗೆ ಎದುರಿಸಿ, ಒಟ್ಟಿಗೇ ಸ್ವರ್ಗಸ್ಥರಾಗುವುದೆಂದರೆ ಸುಮ್ಮನೆಯಾ?.. ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಸಾವಿನಲ್ಲೂ ಸಂಗಾತಿ ಜೊತೆಗೆ ಇರುತ್ತಾಳೆ ಅನ್ನೋದು ಇದೇನಾ. ಹೌದು, ವಿವಾಹವಾಗಿ 55 ವರ್ಷಗಳ ಕಾಲ ಜತೆಯಾಗಿ ಬದುಕಿದ ದಂಪತಿ ಸಾವಿನಲ್ಲೂ ಒಂದಾದ ಅಪರೂಪದ ಘಟನೆ ಜಿಲ್ಲೆಯಲ್ಲಿ ಕಂಡು ಬಂದಿದೆ.

ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯ ಮಂಗಳವಾರ ಪೇಟೆ ನಿವಾಸಿ ಭೀಮಪ್ಪ ಬಾಗಲಕೋಟ (80) ಮತ್ತು ಇವರ ಪತ್ನಿ ಕಸ್ತೂರಿ (74) ಸಾವಿನಲ್ಲೂ ಒಂದಾದ ದಂಪತಿ. ವಯೋಸಹಜ ಕಾಯಿಲೆಯಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಭೀಮಪ್ಪ ವಿಜಯಪುರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗಿನ ಜಾವ 1 ಗಂಟೆಗೆ ನಿಧನ ಹೊಂದಿದ್ದರು.

ಆರೋಗ್ಯವಾಗಿಯೇ ಮನೆಯಲ್ಲಿದ್ದ ಪತ್ನಿ ಕಸ್ತೂರಿ ಗಂಡ ಭೀಮಪ್ಪ ಅವರ ನಿಧನದ ಸುದ್ದಿ ಕೇಳುತ್ತಿದ್ದಂತೆಯೇ ಹೃದಯಾಘಾತದಿಂದ ಬೆಳಗಿನ ಜಾವ 4 ಗಂಟೆಗೆ ನಿಧನರಾದರು.ಇಂದು ಅವರ ಮನೆಯಲ್ಲಿ ಕುಟುಂಬಸ್ಥರು ದಿವಂಗತ ದಂಪತಿಯನ್ನು ಜೋಡಿಯಾಗಿಯೇ ಕೂಡಿಸಿ ಅಂತ್ಯ ಕ್ರಿಯೆ ನಡೆಸಿದ್ದಾರೆ.

ಓದಿ: ಸಾವಿನಲ್ಲೂ ಒಂದಾದ ವೃದ್ಧ ದಂಪತಿ: 55 ವರ್ಷದ ದಾಂಪತ್ಯದಲ್ಲಿ ಕಲಹವೇ ಇರಲಿಲ್ಲವಂತೆ !

ABOUT THE AUTHOR

...view details