ಬಾಗಲಕೋಟೆ:ಮಹಾಲಿಂಗಪುರ ಪುರಸಭೆಯ ಚುನಾವಣೆಯಲ್ಲಿ ನಡೆದಿದ್ದ ನೂಕಾಟ, ತಳ್ಳಾಟದಿಂದಾಗಿ ಪುರಸಭೆ ಸದಸ್ಯೆ ಚಾಂದನಿ ನಾಯಕ ಅವರಿಗೆ ಗರ್ಭಪಾತ ಆಗಿದೆ ಎಂದು ಅವರ ಪತಿ ಆರೋಪಿಸಿದ್ದಾರೆ.
ಪುರಸಭೆ ಚುನಾವಣೆ ವೇಳೆ ಕಾರ್ಯಕರ್ತರ ನೂಕಾಟ: ಪುರಸಭೆ ಸದಸ್ಯೆಗೆ ಗರ್ಭಪಾತ ಆರೋಪ
ಮಹಾಲಿಂಗಪುರ ಪುರಸಭೆಯ ಚುನಾವಣೆಯಲ್ಲಿ ಮತದಾನದ ವೇಳೆ ಶಾಸಕರು ಹಾಗೂ ಬೆಂಬಲಿಗರು ತಳ್ಳಾಟ ನಡೆಸಿದ್ದರಿಂದ ಪುರಸಭೆ ಸದಸ್ಯೆ ಚಾಂದನಿಗೆ ಗರ್ಭಪಾತವಾಗಿದೆ ಎಂದು ಅವರ ಪತಿ ಆರೋಪಿಸಿದ್ದಾರೆ.
ಪುರಸಭೆ ಸದಸ್ಯೆಯನ್ನು ತಳ್ಳಿದ ಶಾಸಕ ಸವದಿ
ಸದಸ್ಯೆಯ ಪತಿ ನಾಗೇಶ್ ನಾಯಕ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ನನ್ನ ಪತ್ನಿ ಮತದಾನಕ್ಕೆ ಹೊರಟಿದ್ದ ಸಮಯದಲ್ಲಿ ಶಾಸಕರು ಹಾಗೂ ಬೆಂಬಲಿಗರು ತಳ್ಳಾಡಿದ್ದರು. ಘಟನೆಯಲ್ಲಿ ಕೆಳಕ್ಕೆ ಬಿದ್ದಿದ್ದರಿಂದ ಗರ್ಭಿಣಿ ಆಗಿದ್ದ ಕಾರಣ ಸ್ವಲ್ಪ ನೋವು ಆಗಿತ್ತು. ಈಗ ಗರ್ಭಪಾತ ಆಗಿದೆ. ಈ ಘಟನೆಯಿಂದ ನೋವಾಗಿದೆ. ಮುಂಬರುವ ದಿನಗಳಲ್ಲಿ ಈ ವಿಚಾರವಾಗಿ ಕಾನೂನು ಹೋರಾಟ ಮಾಡುತ್ತೇನೆ ಎಂದು ನಾಗೇಶ ನಾಯಕ ತಿಳಿಸಿದ್ದಾರೆ.
ಇದನ್ನೂ ಓದಿ:ಮಹಾಲಿಂಗಪುರ ಪುರಸಭೆ ಚುನಾವಣೆ ವೇಳೆ ಗಲಾಟೆ: ಸದಸ್ಯೆಯನ್ನು ತಳ್ಳಿದ ಶಾಸಕ ಸವದಿ!
Last Updated : Dec 1, 2020, 3:41 PM IST