ಬಾಗಲಕೋಟೆ: ಇಲ್ಲಿನ ಮುಚಖಂಡಿ ವೀರಭದ್ರೇಶ್ವರ ದೇವಾಲಯ ಜಾತ್ರಾ ಹಾಗೂ ಅಗ್ನಿ ಮಹೋತ್ಸವ ಅದ್ಧೂರಿಯಾಗಿ ನಡೆಯಿತು.
ಈ ಜಾತ್ರೆಯು ವರ್ಷದಲ್ಲಿ ಎರಡು ಬಾರಿ ನಡೆಯುವ ಜಾತ್ರೆ ಎಂದು ಖ್ಯಾತಿ ಪಡೆದುಕೊಂಡಿದ್ದು, ಅಗ್ನಿಯಲ್ಲಿ ಹಾಯ್ದರೆ ಭಕ್ತರ ಇಷ್ಟಾರ್ಥಗಳನ್ನು ಈಡೇರುತ್ತವೆ ಎಂಬ ಪ್ರತೀತಿ ಇದೆ.

ಮುಚಖಂಡಿ ವೀರಭದ್ರೇಶ್ವರ ದೇವಸ್ಥಾನವು ಉಗ್ರ ಸ್ವರೂಪವಾಗಿದ್ದು, ಜಾಗೃತ ದೇವರು ಎಂದು ಹೆಸರುವಾಸಿ. ಹೀಗಾಗಿ ಪ್ರತಿ ವರ್ಷ ಶ್ರಾವಣ ಮಾಸ ಹಾಗೂ ಕಾರ್ತಿಕ ಮಾಸದಲ್ಲಿ ಎರಡು ಬಾರಿ ಜಾತ್ರಾ ಮಹೋತ್ಸವ, ಅಗ್ನಿ ಉತ್ಸವ ಕಾರ್ಯಕ್ರಮ ಜರಗುತ್ತದೆ. ಶ್ರಾವಣ ಮಾಸದ ಕಡೆಯ ಮಂಗಳವಾರ ದಿನದಂದು ಚಿಕ್ಕ ರಥೋತ್ಸವ ನಡೆಯುತ್ತದೆ. ನಂತರ ಬೆಂಕಿನ ಕೆಂಡದ ಅಗ್ನಿ ಹಾಯುವ ಮೂಲಕ ಭಕ್ತರು ತಮ್ಮ ಹರಕೆಯನ್ನು ಈಡೇರಿಸುತ್ತಾರೆ. ತಮ್ಮ ಹರಕೆಯನ್ನು ಪೂರೈಸುವುದಕ್ಕೆ ಭಕ್ತರು ಕೆಂಡ ಹಾಯ್ದು ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ.
ಪ್ರತಿ ವರ್ಷ ಕಾರ್ತಿಕ ಮಾಸದಲ್ಲಿ ದೊಡ್ಡ ರಥೋತ್ಸವ, ಶ್ರಾವಣ ಮಾಸದಲ್ಲಿ ಸಣ್ಣ ರಥೋತ್ಸವ ನಡೆಯುತ್ತದೆ. ಇಲ್ಲಿಗೆ ಬರುವ ಕೆಲ ಭಕ್ತರು ಅಗ್ನಿ ಹಾಯ್ದರೆ, ಇನ್ನು ಕೆಲವರು ದೇಹದಲ್ಲಿ ಶಸ್ತ್ರಗಳನ್ನು ಹಾಕಿಕೊಳ್ಳುವ ಮೂಲಕ ಭಕ್ತಿ ಮೆರೆಯುತ್ತಾರೆ. ಕೈ, ನಾಲಿಗೆ ಮೇಲೆ ಶಸ್ತ್ರಗಳನ್ನು ಹಾಕಿಕೊಂಡು ತಮ್ಮ ಹರಕೆ ಈಡೇರಿಸಿಕೊಳ್ಳುತ್ತಾರೆ.