ಕರ್ನಾಟಕ

karnataka

ETV Bharat / state

ಗಡಿ: ಸಿದ್ದರಾಮಯ್ಯ ಹೇಳಿಕೆಗೆ ಏಕವಚನದಲ್ಲಿ ತಿರುಗೇಟು ನೀಡಿದ ಕಾರಜೋಳ - ಈಟಿವಿ ಭಾರತ ಕನ್ನಡ

60 ವರ್ಷ ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಯಾಕೆ ಗಡಿ ಸಮಸ್ಯೆಯನ್ನು ಬಗೆಹರಿಸಿಲ್ಲ ಎಂದು ಸಚಿವರು ಪ್ರಶ್ನಿಸಿದರು.

Minister govind karjol
ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಕಾರಜೋಳ

By

Published : Dec 18, 2022, 2:13 PM IST

ಸಚಿವ ಗೋವಿಂದ ಕಾರಜೋಳ

ಬಾಗಲಕೋಟೆ:ಗಡಿ ವಿವಾದ ಬಗೆಹರಿಸಲಾಗದ ಸಿಎಂ ಬೊಮ್ಮಾಯಿ ವೀಕ್​ ಎಂದ ಸಿದ್ದರಾಮಯ್ಯ ಹೇಳಿಕೆಗೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಏಕವಚನದಲ್ಲಿ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಐದು ವರ್ಷ ಅವನು ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡುತ್ತಿದ್ದ? ಯಾಕೆ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸಿಲ್ಲ? ಸುಮ್ಮನೆ ಬಾಯಿಚಪಲಕ್ಕೆ ಏನೆನೆಲ್ಲಾ ಮಾತಾಡಬಾರದು. 60 ವರ್ಷ ನಿಮ್ಮ ಕಾಂಗ್ರೆಸ್​ ಪಕ್ಷವೇ ಆಡಳಿತದಲ್ಲಿತ್ತು. ಆದರೂ ನೀವು ಯಾಕೆ ಸಮಸ್ಯೆಗಳನ್ನು ಪರಿಹರಿಸಿಲ್ಲ ಎಂದು ಕಿಡಿಕಾರಿದರು.

ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ 1912 ರಿಂದಲೇ ಇದೆ. ಅಲ್ಲದೇ 1922 ರಲ್ಲೂ ಈ ಬಗ್ಗೆ ಸಮಸ್ಯೆಯಾಗಿತ್ತು. ಆಗ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಕೆಲ ಪುಂಡರು ಒತ್ತಾಯ ಮಾಡಿದ್ದರು. ಗಾಂಧೀಜಿಯವರು ಕೂಡಾ ಇದಕ್ಕೆ ಒಪ್ಪಿರಲಿಲ್ಲ. ಅಲ್ಲದೇ ಗಡಿ ವಿಚಾರಕ್ಕೆ ಸಂಬಂಧಿಸಿ 13 ಸಮಿತಿಗಳಿವೆ. ಅವೆಲ್ಲವೂ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಅಂತಾನೇ ಹೇಳಿದೆ. ಕನಿಷ್ಠ ಜ್ಞಾನ ಇಲ್ಲದವರು ಇಂತಹ ಮಾತುಗಳನ್ನು ಆಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳು ಕಮ್ಮಿ ಇದಾವೆ. ಆ ಬಗ್ಗೆ ಚರ್ಚೆ ಆಗಬೇಕು. ಅಲ್ಲದೇ ಮಹದಾಯಿ ಯೋಜನೆ ಬಗ್ಗೆಯೂ ಚರ್ಚೆ ಆಗಬೇಕಿದೆ. ಆದರೆ ಇದಕ್ಕೆಲ್ಲ ಪರಿಹಾರವಾಗಿ ಜನರು ಪ್ರತಿಭಟನೆ ಮಾಡುತ್ತಿದ್ದಾರೆ. ಸುವರ್ಣ ಸೌಧದ ಮುಂದೆ ಅಡ್ಡ ಹಾಕಿ ಕೂತ್ರೆ ಏನು ಪ್ರಯೋಜನ ಆಗಲ್ಲ. ಈ ಬಗ್ಗೆ ಸರ್ಕಾರಕ್ಕೆ ಮನವಿಯನ್ನು ಕೊಡಿ ಎಂದರು.

ಇದನ್ನೂ ಓದಿ:ಎಂಇಎಸ್ ಪುಂಡರನ್ನು ಹದ್ದುಬಸ್ತಿನಲ್ಲಿಡಲು ನಮಗೆ ಗೊತ್ತಿದೆ: ಸಿಎಂ

ABOUT THE AUTHOR

...view details