ಬಾಗಲಕೋಟೆ: ಮಲ್ಲಪ್ರಭಾ ನದಿಯ ಅಬ್ಬರ ತಗ್ಗಿದ ಪರಿಣಾಮ ಬಾದಾಮಿ ತಾಲೂಕಿನ ಪ್ರವಾಹ ಭೀತಿ ಉಂಟಾಗುವ ಗ್ರಾಮದ ಜನ ಸ್ವಲ್ಪ ಮಟ್ಟಿಗೆ ನಿರಾಳವಾಗಿದ್ದಾರೆ.
ತಗ್ಗಿದ ಮಲ್ಲಪ್ರಭಾ ಪ್ರವಾಹ: ವಾಹನ ಸಂಚಾರ ಮತ್ತೆ ಆರಂಭ - Mallaprabha river
ತಗ್ಗಿದ ಮಲಪ್ರಭೆ ಪ್ರವಾಹ. ಚೊಳಚಗುಡ್ಡ ಸೇತುವೆಯ ಮೇಲೆ ವಾಹನ ಸಂಚಾರ ಮತ್ತೆ ಆರಂಭವಾಗಿದೆ.
ಚೊಳಚಗುಡ್ಡ ಸೇತುವೆ
ಬಾದಾಮಿ ತಾಲೂಕಿನಲ್ಲಿ ನದಿ ನೀರು ಇಳಿಕೆಯಿಂದ, ಜಲಾವೃತಗೊಂಡ ಸೇತುವೆ ಸಂಚಾರ ಮುಕ್ತವಾಗಿದೆ. ಜಲಾವೃತ ಆಗಿದ್ದ ಚೊಳಚಗುಡ್ಡ ಸೇತುವೆಯಲ್ಲಿ ಶಾಂತವಾದ ಮಲ್ಲಪ್ರಭೆಯಿಂದ ಬಾಗಲಕೋಟೆಯಿಂದ ಗದಗ ಸಂಚಾರಕ್ಕೆ ಮುಕ್ತವಾಗಿದೆ.
ಕಳೆದ ದಿನ ಸೇತುವೆ ಮೇಲಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನೆಲೆ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಗದಗ, ರೋಣ ಹಾಗೂ ಗಜೇಂದ್ರಗಡ ಸೇರಿದಂತೆ ಗದಗ ಜಿಲ್ಲೆಗೆ ಸಂಚಾರ ಇಲ್ಲದೆ ಪರದಾಡುವಂತಾಗಿತ್ತು. ಈಗ ನೀರು ಇಳಿಕೆ ಆಗಿರುವುದರಿಂದ ವಾಹನ ಸಂಚಾರ ಮತ್ತೆ ಆರಂಭವಾಗಿದೆ.