ಬಾಗಲಕೋಟೆ:ಜಿಲ್ಲೆಯ ನವನಗರದ 61ನೇ ಸೆಕ್ಟರ್ನಲ್ಲಿಹಣದ ಆಸೆಗಾಗಿ ಪರಿಚಿತರೇ ಬಾಲಕಿಯನ್ನು ಅಪಹರಣ ಮಾಡಿರುವ ಶಂಕೆ ವ್ಯಕ್ತವಾಗ್ತಿದೆ.
ಏಳು ವರ್ಷದ ಬಾಲಕಿ ನಿತ್ಯ ಟ್ಯೂಷನ್ಗೆ ಹೋಗುತ್ತಿದ್ದಳು. ಇದನ್ನು ಗಮನಿಸಿದ್ದ ಕಿಡಿಗೇಡಿಗಳು ನಿನ್ನೆ ರಾತ್ರಿ ಆಕೆ ಟ್ಯೂಷನ್ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಕಾರಿನಲ್ಲಿ ಬಂದು ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ. ಅಪಹರಣಕಾರರು, ಬಾಲಕಿ ತಾಯಿಗೆ ಕರೆ ಮಾಡಿದ್ದು, ನಿಮ್ಮ ಮಗಳು ಸುರಕ್ಷಿತವಾಗಿ ಹಿಂದಿರುಗಬೇಕೆಂದರೆ ನಮಗೆ 50 ಲಕ್ಷ ರೂ. ಕೊಡಿ ಎಂದು ಬೇಡಿಕೆಯಿಟ್ಟಿದ್ದಾರೆ ಎನ್ನಲಾಗಿದೆ.