ಬಾಗಲಕೋಟೆ: ಜಿಲ್ಲೆಯ ಜಮಖಂಡಿ ತಾಲೂಕಿನ ಕಡಕೋಳ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಶ್ರೀ ಚಂದ್ರಗಿರಿ ದೇವಿ ಹಾಗೂ ಶ್ರೀ ಸದಾಶಿವ ಅಜ್ಜನವರ ಜಾತ್ರಾ ಮಹೋತ್ಸವ ಅತಿ ವಿಜೃಂಭಣೆಯಿಂದ ಜರಗಿತು. ಜಾತ್ರೆಯ ಅಂಗವಾಗಿ ಆಯೋಜಿಸಿದ್ದ ಎತ್ತಿನ ಬಂಡಿ ಓಟದ ಸ್ಪರ್ಧೆಯು ಗಮನ ಸೆಳೆಯಿತು.
ಗ್ರಾಮದ ಪಕ್ಕದಲ್ಲಿಯೇ ಇರುವ ಕೃಷ್ಣಾ ನದಿಯಲ್ಲಿ ಪುಣ್ಯ ಸ್ನಾನ ಮುಗಿಸಿ ನಂತರ ಪೂಜೆ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಸಕಲ ವಾದ್ಯ ಮೇಳಗಳೊಂದಿಗೆಮುತೈದೆಯರಿಂದಆರತಿ ಜೊತೆಗೆ ಶ್ರೀ ಚಂದ್ರಗಿರಿ ದೇವಿ ಹಾಗೂ ಸದಾಶಿವ ಅಜ್ಜನ್ನವರ ಪಲಕ್ಕಿ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಂಕಣವಾಡಿ ಗ್ರಾಮಸ್ಥರಿಂದ ಕರಡಿ ಮಜಲು, ಡೊಳ್ಳಿನ ಕುಣಿತ, ಕಡಕೋಳ ಗ್ರಾಮಸ್ಥರ ಭಜನಾ ಕಾರ್ಯಕ್ರಮ ಗಮನ ಸೆಳೆಯಿತು.