ಬಾಗಲಕೋಟೆ :ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬಾದಾಮಿ ಬನಶಂಕರಿ ಜಾತ್ರೆಯನ್ನು ರದ್ದು ಮಾಡಲಾಗಿದೆ. ಆದರೂ ಅಧಿಕ ಸಂಖ್ಯೆಯಲ್ಲಿ ಭಕ್ತರು ದೇಗುಲಕ್ಕೆ ತೆರಳಿ ಪೂಜಾ ಕಾರ್ಯಗಳನ್ನು ಮಾಡುತ್ತಿದಾರೆ.
ಬಾದಾಮಿ ಶ್ರೀ ಬನಶಂಕರಿ ಹೊಂಡದಲ್ಲಿ ದೀಪ ತೀಲಿ ಬಿಟ್ಟು ಪ್ರಾರ್ಥಿಸಿದ ಭಕ್ತ ಸಮೂಹ.. ಜಾತ್ರೆ ವೇಳೆ ದೇವಸ್ಥಾನದ ಹೊರ ವಲಯದಲ್ಲಿರುವ ಬನಶಂಕರಿ ಹೊಂಡದಲ್ಲಿ ದೀಪವನ್ನು ಬೆಳಗಿ ನೀರಿನಲ್ಲಿ ಬಿಟ್ಟರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ಇರುತ್ತದೆ ಎಂಬ ನಂಬಿಕೆ ಇದೆ.
ಹೀಗಾಗಿ, ಜಾತ್ರೆಗೆಂದು ಆಗಮಿಸಿದ್ದ ಭಕ್ತ ಸಮೂಹ ದೀಪವನ್ನು ತೇಲಿ ಬಿಟ್ಟು ದೇವಿಯನ್ನು ಪ್ರಾರ್ಥಿಸಿತು. ಜಾತ್ರೆ ನಡೆಯುವ ಸಮಯದಲ್ಲಿ ಮಾತ್ರ ಈ ವಿಶೇಷ ಆಚರಣೆ ನಡೆಯುತ್ತದೆ.
ರಾಜ್ಯವನ್ನು ಒಳಗೊಂಡಂತೆ ದೇಶದಲ್ಲಿ ಕೊರೊನಾ ಪ್ರಕರಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ಜಾತ್ರಾ ಮಹೋತ್ಸವಗಳನ್ನು ರದ್ದು ಮಾಡಲಾಗಿದೆ. ಅದರಂತೆ ಬಾದಾಮಿ ಶ್ರೀ ಬನಶಂಕರಿ ಜಾತ್ರೆಯನ್ನು ಜಿಲ್ಲಾಡಳಿತ ರದ್ದು ಮಾಡಿತ್ತು.
ಆದ್ರೆ, ಜಿಲ್ಲಾಡಳಿತದ ಆದೇಶವನ್ನೂ ಉಲ್ಲಂಘಿಸಿ ದೇವಸ್ಥಾನದ ಆಡಳಿತ ಮಂಡಳಿ ಸಾಂಕೇತಿಕವಾಗಿ ರಥೋತ್ಸವ ನೆರವೇರಿಸಿದೆ. ಈ ಸಂಬಂಧ ಜಾತ್ರೆ ನಡೆಸಿದವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ನಿಷೇಧದ ನಡುವೆಯೂ ನಡೆದ ಬನಶಂಕರಿ ದೇವಾಲಯದ ಜಾತ್ರೆ : ಹರಸಾಹಸ ಪಟ್ಟ ಪೊಲೀಸರು