ಬಾಗಲಕೋಟೆ: ಕೊರೊನಾದಿಂದ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆಗೆ ಒಳಗಾಗಿದ್ದಾರೆ. ಹಾಗೆಯೇ ಫೋಟೋಗ್ರಾಫರ್ಗಳ ಬದುಕೂ ಕೂಡ ಸಂಕಷ್ಟಕ್ಕೆ ಸಿಲುಕಿದೆ.
ಫೋಟೋಗ್ರಾಫರ್ಸ್ಗೂ ಸಂಕಷ್ಟ ತಂದ ಕೊರೊನಾ... ಚಿತ್ರ ತೆಗೆಯುವವರ ಬದುಕು ಕಗ್ಗತ್ತಲು!
ಈ ವೇಳೆಯಲ್ಲಿ ಫೋಟೋಗ್ರಾಫರ್ಗಳು ಅಷ್ಟೋ ಇಷ್ಟು ಹಣ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಕೊರೊನಾ ಭೀತಿ ಎಲ್ಲವನ್ನೂ ಸ್ತಬ್ಧಗೊಳಿಸಿದೆ. ಈ ಹಿನ್ನೆಲೆ ಜೀವನ ನಡೆಸುವುದು ಹೇಗೆ ಎಂದು ಛಾಯಾಚಿತ್ರಗ್ರಾಹಕರು ಚಿಂತೆಗೀಡಾಗಿದ್ದಾರೆ.
ಪ್ರತಿ ವರ್ಷ ಹೋಳಿ-ಹುಣ್ಣಿಮೆ ಬಳಿಕ ಅಂದ್ರೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಮದುವೆ ಸೇರಿದಂತೆ ಇತರ ಶುಭ ಕಾರ್ಯಕ್ರಮಗಳು ನಡೆಯುತ್ತಿದ್ದವು. ಈ ಸಂದರ್ಭದಲ್ಲಿ ಫೋಟೋ ಹಾಗೂ ವಿಡಿಯೋಗ್ರಾಫರ್ಸ್ ವಾರ್ಷಿಕವಾಗಿ ಐದು ಲಕ್ಷಕ್ಕೂ ಅಧಿಕ ಹಣ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಒಟ್ಟು 300 ಫೋಟೋ ಹಾಗೂ ವಿಡಿಯೋಗ್ರಫಿ ಅಂಗಡಿಗಳಿದ್ದು, ಈಗ ಅವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಈ ಸಮಯದಲ್ಲೇ ಹೆಚ್ಚು ಹಬ್ಬ ಹರಿದಿನಗಳು ಇರುತ್ತಿದ್ದವು. ಈ ವೇಳೆಯಲ್ಲಿ ಫೋಟೋಗ್ರಾಫರ್ಗಳು ಅಷ್ಟೋ ಇಷ್ಟು ಹಣ ಸಂಪಾದನೆ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಆದರೆ, ಕೊರೊನಾ ಸೋಂಕು ಎಲ್ಲವನ್ನು ನಿಶಬ್ಧಗೊಳಿಸಿದೆ. ಇನ್ನು ಕೆಲ ನೂತನ ತಂತ್ರಜ್ಞಾನದ ಕ್ಯಾಮರಾಗಳನ್ನ ತೆಗೆದುಕೊಂಡು ಇದರಲ್ಲಿ ಜೀವನ ಕಟ್ಟಿಕೊಳ್ಳಲು ಮುಂದಾದ ಫೋಟೋಗ್ರಾಫರ್ಗಳ ಪಾಡು ಹೇಳತೀರದ್ದಾಗಿದೆ. ಬ್ಯಾಂಕ್ನಿಂದ ಸಾಲ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣ ಕೊಟ್ಟು ಖರೀದಿಸಿದ ಕ್ಯಾಮರಾ ಈಗ ಮೂಲೆ ಸೇರಿವೆ.