ಕರ್ನಾಟಕ

karnataka

ETV Bharat / state

ಮುಂದಿನ ಚುನಾವಣೆಯಲ್ಲಿ ಹಿಂದುತ್ವದ ಆಟ ನಡೆಯಲ್ಲ: ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ - congress leader madhu bangarappa

ಬಿಜೆಪಿ ಖಾಲಿ ಡಬ್ಬ ಆಗಿದೆ, ಇನ್ನು ಮುಂದೆ ಹಿಂದುತ್ವ ಅನ್ನೋದು ವರ್ಕೌಟ್ ಆಗಲ್ಲ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.

congress leader madhu bangarappa
ಮಧು ಬಂಗಾರಪ್ಪ

By

Published : Dec 18, 2021, 10:30 AM IST

ಬಾಗಲಕೋಟೆ:ಮುಂಬರುವ ಚುನಾವಣೆಯಲ್ಲಿ ಹಿಂದುತ್ವದ ಆಟ ನಡೆಯಲ್ಲ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದರು.

ಬಾದಾಮಿ ತಾಲೂಕಿನ ನರಸಾಪುರ ಗ್ರಾಮದಲ್ಲಿ ಅವರ ಆಪ್ತ ಮಂಜುನಾಥ ಗುಬ್ಬಿ ಅವರ ಹುಟ್ಟುಹಬ್ಬದ ಅಂಗವಾಗಿ ಆಗಮಿಸಿದ ಸಮಯದಲ್ಲಿ ಮಾತನಾಡುತ್ತಾ, ಬಿಜೆಪಿ ಖಾಲಿ ಡಬ್ಬ ಆಗಿದೆ, ಇನ್ಮುಂದೆ ಹಿಂದುತ್ವ ಅನ್ನೋದು ವರ್ಕೌಟ್ ಆಗಲ್ಲ ಎಂದರು.

ಬಿಜೆಪಿ ವಿರುದ್ಧ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ವಾಗ್ದಾಳಿ

ನಾವು ಹಿಂದುಗಳೇ ಅಲ್ವಾ ಎಂದು ಪ್ರಶ್ನೆ ಮಾಡಿದ ಮಧು ಬಂಗಾರಪ್ಪ, ಎಲ್ಲಾ ಜಾತಿ-ಧರ್ಮವನ್ನು ಪ್ರೀತಿಸುವವನು ಒರಿಜಿನಲ್ ಹಿಂದೂ. ಹೊಟ್ಟೆಗೆ ನಾವು ಅನ್ನ ತಿಂತೀವಿ. ಹೊಟ್ಟೆಗೆ ಅನ್ನ ತಿನ್ನುವವರೆಲ್ಲ ಹಿಂದೂಗಳೇ. ಬಿಜೆಪಿ ಅವರೆಲ್ಲ ಬ್ರಿಟಿಷ್ ಜನತಾ ಪಾರ್ಟಿ ಇದ್ದಂತೆ. ಡಿವಿಜನ್ ಮಾಡುವುದೇ ಇವರ ಕೆಲಸ. ರಾಜರನ್ನು ಒಡೆದು ಆಳಿ ಒಳ ಬಂದವರು ಬ್ರಿಟಿಷರು. ಅವರಂತೆ ಬಿಜೆಪಿಯವರು ಆಳುತ್ತಿದ್ದಾರೆ. ಜನರಿಗೆ ಇವರ ಆಟ ಗೊತ್ತಾಗಿದೆ ಎಂದು ಕಿಡಿಕಾರಿದರು.

ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ಮಾತನಾಡಿ, ಬಿಜೆಪಿಯವರು ಮೊದಲು ನೈತಿಕ ಪೊಲೀಸ್ ಗಿರಿ, ತಡೆಯುವ ಕಾನೂನು ಜಾರಿ ಮಾಡಲಿ. ಯಾರು ಎಲ್ಲಿಯೂ ಹೋಗಲ್ಲ. ಸ್ವಾತಂತ್ರ್ಯ ಇರಬೇಕು ಅಷ್ಟೇ. ಅದನ್ನು ಕಟ್ ಮಾಡಬಾರದು. ಏನು ಮಾತನಾಡ್ತಾರೋ ಅದನ್ನೇ ಕಾನೂನು ಮಾಡುತ್ತಾ ಹೋದರೆ ಹೇಗೆ?. ಅದು ತಪ್ಪಾಗುತ್ತದೆ ಎಂದರು.

ಚುನಾವಣೆ ಹತ್ತಿರ ಬಂದರೆ ಬಿಜೆಪಿಯವರು ಇಂತಹದನ್ನು ಶುರು ಮಾಡುತ್ತಾರೆ. ಜನಪರ ಕೆಲಸಗಳನ್ನು ಮಾಡಿದರೆ, ಇದನ್ನು ಮಾಡುತ್ತಿರಲಿಲ್ಲ. ಸರ್ಕಾರ ಇರುವುದು ಕೆಲಸ ಮಾಡುವುದಕ್ಕೆ, ಜಾತಿ ಜಾತಿಗಳನ್ನು ಒಡೆಯಲಿಕ್ಕೆ ಅಲ್ಲ ಎಂದು ಟಾಂಗ್ ನೀಡಿದರು.

ರಾಜ್ಯದ ಜನರೇನು ಅಷ್ಟು ಮೂರ್ಖರಲ್ಲ. ಬಿಜೆಪಿಯವರ ಸರ್ಕಾರ ಇರಬಹುದು. ಒತ್ತಡ ತಂದು ಕಾನೂನು ಮಾಡಬಹುದು. ಬೇರೆ ಬೇರೆ ಧರ್ಮದ ಜನರೆಲ್ಲಾ ಧೈರ್ಯದಿಂದ ಬಾಳಲಿ. ಅಂಬೇಡ್ಕರ್ ಅವರು ಸಂವಿಧಾನ ಬರೆದಿದ್ದಾರೆ. ಬೆಂಕಿ ಹಿಡಿದು ಕೆಲಸ ಮಾಡುವಂತ ಅವಶ್ಯಕತೆ ನನಗಿಲ್ಲ. ಎಲ್ಲರೂ ಧೈರ್ಯದಿಂದ ಬಾಳೋಣ ಎಂದು ಮಧು ಬಂಗಾರಪ್ಪ ಹೇಳಿದರು.

ABOUT THE AUTHOR

...view details