ಬಾಗಲಕೋಟೆ:ಪ್ರಜಾಪ್ರಭುತ್ವ ತಳಹದಿಯ ಸಿದ್ಧಾಂತದ ಆಧಾರ ಮೇಲೆ ನಡೆಯುತ್ತಿರುವ ಏಕೈಕ ಪಕ್ಷ ಅಂದ್ರೆ ಅದು ಬಿಜೆಪಿ ಎಂದು ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಗರದ ಬಸವೇಶ್ವರ ಮಿನಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಲೋಕಸಭೆಯಲ್ಲಿರುವ ಸುಮಾರು 64 ಪಕ್ಷಗಳಲ್ಲೇ ಬಿಜೆಪಿ ಮುಂಚೂಣಿಯಲ್ಲಿದೆ. ವಿಚಾರವಾದ, ಸಿದ್ಧಾಂತ ಹಾಗೂ ಕಾರ್ಯ ಪದ್ಧತಿಗಳನ್ನು ಬದಲಾವಣೆ ಮಾಡಲೇ ಇರುವಂತಹ ಏಕೈಕ ಪಕ್ಷ ನಮ್ಮದು ಎಂದರು.
ಇನ್ನು 2004ರಲ್ಲಿ ನಾನು ಬಿಜೆಪಿಗೆ ಬಂದಾಗ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆಯಾಗಿ ಸೋನಿಯಾಗಾಂಧಿ ಇದ್ದರು. ನಮ್ಮಲ್ಲಿ ಈವರೆಗೆ ಹಲವು ನಾಯಕರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಏಕ ವ್ಯಕ್ತಿಯ ಹಿಡಿತದಲ್ಲಿದೆ. ಹಾಗಾಗಿ ಇವತ್ತು ಪ್ರತಿಪಕ್ಷ ಸ್ಥಾನದಲ್ಲೂ ಸಹ ಕೂರಲಾಗಿದೆ ಸ್ಥಿತಿಗೆ ತಲುಪಿದೆ ಎಂದು ಕಟೀಲ್ ವ್ಯಂಗ್ಯವಾಡಿದರು.
ಈ ಸಭೆಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ಶಾಸಕರಾದ ವೀರಣ್ಣ ಚರಂತಿಮಠ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.