ಬಾಗಲಕೋಟೆ: ರಷ್ಯಾ-ಉಕ್ರೇನ್ ಮಧ್ಯೆ ಯುದ್ಧ ಆರಂಭವಾಗಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿರುವ ಏರ್ಪೋರ್ಟ್ಗಳ ಮೇಲೆ ರಷ್ಯಾ ದಾಳಿ ಮಾಡಿರುವ ಹಿನ್ನೆಲೆ ವಿಮಾನ ಸೇವೆ ಸ್ಥಗಿತಗೊಂಡಿದೆ. ಇತ್ತ ಉಕ್ರೇನ್ನಲ್ಲಿ ನಗರದ ಇಬ್ಬರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದು, ಪೋಷಕರು ಆತಂಕಕ್ಕೆ ಒಳಗಾಗಿದ್ದಾರೆ.
ಇಲ್ಲಿನ ವಿದ್ಯಾಗಿರಿಯ ವಿದ್ಯಾರ್ಥಿ ಮನೋಜ್ ಕುಮಾರ ಚಿತ್ರಗಾರ(20) ಪ್ರಥಮ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ. ಡಿಸೆಂಬರ್ 10ಕ್ಕೆ ಉಕ್ರೇನ್ಗೆ ವಿದ್ಯಾರ್ಥಿ ಉಕ್ರೇನ್ಗೆ ತೆರಳಿದ್ದಾರೆ. ಸದ್ಯ ಕಾಲೇಜಿನ ವಿದ್ಯಾರ್ಥಿನಿಯಲದಲ್ಲಿರುವ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದು, ದೂರವಾಣಿ ಕರೆ ಮಾಡಿ ಪಾಲಕರಿಗೆ ಮಾಹಿತಿ ನೀಡಿದ್ದಾರೆ. ಯುವಕ ಚಿತ್ರಗಾರ ಫೆಬ್ರುವರಿ.28ಕ್ಕೆ ಭಾರತಕ್ಕೆ ಫ್ಲೈಟ್ ಬುಕ್ ಮಾಡಿದ್ದ ಎಂದು ತಿಳಿದು ಬಂದಿದೆ.