ಬಾಗಲಕೋಟೆ: ನಿಮ್ಮ ಬಳಿ ಹಣವಿಲ್ಲವೇ? ಹಾಗಿದ್ರೆ ನೀವು ತಕ್ಷಣ ಎಟಿಎಂ ಅಥವಾ ಬ್ಯಾಂಕ್ಗೆ ತೆರಳುವ ಅವಶ್ಯಕತೆ ಇಲ್ಲ. ನಿಮ್ಮ ಮನೆ ಬಾಗಿಲಿಗೆ ಬರಲಿದೆ ಅಂಚೆ ಇಲಾಖೆಯ ಸಂಚಾರಿ ಎಟಿಎಂ.
ಬಾಗಲಕೋಟೆಯಲ್ಲಿ ಅಂಚೆ ಇಲಾಖೆಯಿಂದ ಸಂಚಾರಿ ಎಟಿಎಂ ಸೇವೆ!
ಸಾರ್ವಜನಿಕರ ನಗದು ಸಮಸ್ಯೆ ಬಗೆಹರಿಸಲು ಅಂಚೆ ಇಲಾಖೆ ಸಂಚಾರಿ ಎಟಿಎಂ ಆರಂಭಿಸಿದೆ. ಗ್ರಾಹಕರ ಮನೆ ಬಾಗಿಲಿಗೆ ತೆರಳಿ ಹಣ ನೀಡುವ ಯೋಜನೆ ಇದಾಗಿದ್ದು, ಸಾರ್ವಜನಿಕರ ಗಮನ ಸೆಳೆದಿದೆ.
ಕೋವಿಡ್-19 ರೋಗದ ಭೀತಿಯಿಂದ ಜನರಿಗೆ ಹಣದ ಸಮಸ್ಯೆ ಎದುರಾಗಬಾರದು ಎಂದು ಬಾಗಲಕೋಟೆ ಅಂಚೆ ಇಲಾಖೆ ಹಲವು ಇಲಾಖೆಗಳ ಜೊತೆಗೂಡಿ ಈ ಯೋಜನೆಗೆ ಕೈ ಹಾಕಿದೆ. ಇದರಿಂದ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಮನೆಯ ಬಾಗಿಲಿಗೆ ಅಂಚೆ ಇಲಾಖೆಯ ಸಂಚಾರಿ ಎಟಿಎಂ ವಾಹನ ಬಂದು ಹಣ ನೀಡುತ್ತದೆ. ಇಲ್ಲಿನ ನವನಗರ, ವಿದ್ಯಾಗಿರಿ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಂಚಾರ ಆರಂಭಿಸಿದ್ದು, ಯಾವುದೇ ಬ್ಯಾಂಕ್ ಖಾತೆಯಿಂದಲೂ ಹಣ ಪಡೆಯಬಹುದಾಗಿದೆ. ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಕಾರ್ಡ್ ನಂಬರ್ ನೀಡಿದರೆ ಸಾಕು 10 ಸಾವಿರ ರೂಪಾಯಿಗಳವರೆಗೆ ಹಣ ನೀಡುತ್ತಾರೆ. ಅಷ್ಟೇ ಅಲ್ಲದೇ ರಿಜಿಸ್ಟ್ರಾರ್, ಸ್ಪೀಡ್ ಪೋಸ್ಟ್ ಸೇರಿದಂತೆ ಇತರ ಸೇವೆಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ.