ಕರ್ನಾಟಕ

karnataka

ETV Bharat / state

ಗೆದ್ದ ಬಳಿಕ ಬಿಜೆಪಿ ಬಾವುಟ ಹಾರಿಸಿ ಕೂಗಾಟ... ಪೊಲೀಸರು-ಅಭ್ಯರ್ಥಿ ಬೆಂಬಲಿಗರ ನಡುವೆ ವಾಗ್ವಾದ - ಫಲಿತಾಂಶದ ವೇಳೆ ಬಿಜೆಪಿ ಬಾವುಟ

ಪಕ್ಷ ರಹಿತ ಚುನಾವಣೆ ಆಗಿದ್ದರೂ ಸಹ ನಗರದ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಪಕ್ಷದ ಬಾವುಟ ಹಾಗೂ ಕೇಸರಿ ಶಾಲ್ ಹಾಕಿಕೊಂಡು ಕೂಗಾಟ, ಚೀರಾಟ ಮಾಡಲಾಯಿತು. ಈ ಸಂಬಂಧ ಪೊಲೀಸರು ತಡೆಯಲು ಹೋದ ವೇಳೆ ಮುಚಖಂಡಿ ತಾಂಡದ ಯುವಕನೋರ್ವ ಪೊಲೀಸರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಸಿಪಿಐ ಪಟ್ಟಣಶೆಟ್ಟಿ ಯುವಕನನ್ನು ತರಾಟೆಗೆ ತೆಗೆದುಕೊಂಡರು.

ವಾಗ್ವಾದ
ವಾಗ್ವಾದ

By

Published : Dec 30, 2020, 10:41 PM IST

ಬಾಗಲಕೋಟೆ:ಮುಚಖಂಡಿ ತಾಂಡದ ಅಭ್ಯರ್ಥಿ ಜಯ ಗಳಿಸಿದ ಹಿನ್ನೆಲೆ ಬಿಜೆಪಿ ಪಕ್ಷದ ಬಾವುಟ ಬಳಕೆ ಸಂಬಂಧ ಹಾಗೂ ಮತ ಎಣಿಕೆ ಕೇಂದ್ರದ ಬಳಿ ಕೂಗಾಟ ಮಾಡಿದ ಹಿನ್ನೆಲೆ ಸಿಪಿಐ ಹಾಗೂ ಗ್ರಾಪಂ ಚುನಾವಣಾ ಅಭ್ಯರ್ಥಿಯ ಬೆಂಗಲಿಗರ ನಡುವೆ ವಾಗ್ವಾದ ನಡೆಯಿತು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಚಿನ್ಹೆ ಬಳಕೆ ಮಾಡುವಂತಿಲ್ಲ. ಪಕ್ಷ ರಹಿತ ಚುನಾವಣೆ ಆಗಿದ್ದರೂ ಸಹ ನಗರದ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಪಕ್ಷದ ಬಾವುಟ ಹಾಗೂ ಕೇಸರಿ ಶಾಲ್ ಹಾಕಿಕೊಂಡು ಕೂಗಾಟ, ಚೀರಾಟ ಮಾಡಲಾಯಿತು. ಈ ಸಂಬಂಧ ಪೊಲೀಸರು ತಡೆಯಲು ತೆರಳಿದ ವೇಳೆ ಮುಚಖಂಡಿ ತಾಂಡದ ಯುವಕನೋರ್ವ ಪೊಲೀಸರ ವಿರುದ್ಧ ವಾಗ್ವಾದಕ್ಕೆ ಇಳಿದಿದ್ದಾನೆ. ಈ ವೇಳೆ ಸಿಪಿಐ ಪಟ್ಟಣಶೆಟ್ಟಿ ಯುವಕನನ್ನು ತರಾಟೆಗೆ ತೆಗೆದುಕೊಂಡರು.

ಪೊಲೀಸ್​ ಹಾಗೂ ಅಭ್ಯರ್ಥಿ ಬೆಂಬಲಿಗರ ನಡುವೆ ವಾಗ್ವಾದ

ಯುವಕ ಸಹ ಸಿಪಿಐ ವಿರುದ್ಧ ತಿರುಗಿಬಿದ್ದರಿಂದ ಕೆಂಡಾಮಂಡಲರಾದ ಸಿಪಿಐ, ಜಯ ಗಳಿಸಿದ ಅಭ್ಯರ್ಥಿ ಹಾಗೂ ಇತರರಿಗೆ ತಾಕೀತು ಮಾಡಿದರು. ಈ‌ ಸಮಯದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಗಿ ಪೊಲೀಸರು ಲಘು ಲಾಠಿ ಚಾರ್ಜ್​ ಮಾಡಿ ಗುಂಪನ್ನು ಚದುರಿಸಿದರು.

ABOUT THE AUTHOR

...view details