ಬಾಗಲಕೋಟೆ:ತನ್ನ ಪ್ರೇಮಕಹಾನಿ ಸುಖಾಂತ್ಯ ಕಾಣುವುದಿಲ್ಲ ಎಂಬುದನ್ನರಿತ ಯುವಕನೋರ್ವ ಪ್ರೇಯಸಿಗೆ ಅರಿಷಿಣದ ತಾಳಿ ಕಟ್ಟಿ ನಂತರ ವಿಷ ಕುಡಿಸಿದ್ದಾನೆ. ಅಲ್ಲದೆ, ತಾನೂ ಸಹ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜಿಲ್ಲೆಯ ಹುಲ್ಲಿಕೇರಿ ಗ್ರಾಮದ ಬಳಿ ನಡೆದಿದೆ.
ಎಸ್.ಪಿ. ಕುಮಾರ ಪಾಟೀಲ್ (20) ಎಂಬಾತ ದುಡುಕಿನ ನಿರ್ಧಾರ ತೆಗೆದುಕೊಂಡಿರುವ ಯುವಕ. ಈತ ಹತ್ತನೇ ತರಗತಿ ಓದುತ್ತಿರುವ ತನ್ನ ಪ್ರಿಯತಮೆಗೆ ತಾಳಿ ಕಟ್ಟಿ ಈ ಕೃತ್ಯವೆಸಗಿದ್ದಾನೆ. ಬಾಲಕಿ ಮತ್ತು ಕುಮಾರ ಪಾಟೀಲ್ ಕೆಲ ತಿಂಗಳಿನಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಮನೆಯವರ ಗಮನಕ್ಕೆ ಬಂದಾಗ ಎಚ್ಚರಿಕೆ ನೀಡಿದ್ದರು ಎನ್ನಲಾಗ್ತಿದೆ.