ಕರ್ನಾಟಕ

karnataka

ETV Bharat / state

ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ ಮೂವರು : ಆಸ್ಪತ್ರೆಯಿಂದ ಬಿಡುಗಡೆ - Bagalkote news

ಬಾಗಲಕೋಟೆಯ ಢಾಣಕಶಿರೂರ ಗ್ರಾಮದ ಗರ್ಭಿಣಿ ಸೇರಿದಂತೆ ಮೂವರು ಕೋವಿಡ್​ನಿಂದ ಗುಣಮುಖರಾಗಿದ್ದು, ಒಟ್ಟು 42 ಸೋಂಕಿತರು ಇಲ್ಲಿಯವರೆಗೆ ಗುಣಮುಖರಾಗಿ ಡಿಸಾಜ್೯ ಆಗಿದ್ದಾರೆ.

3 more Coronavirus cases recovered in bagalkote: discharged from hospital
ಬಾಗಲಕೋಟೆಯಲ್ಲಿ ಕೊರೊನಾ ಗೆದ್ದ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್​​

By

Published : May 23, 2020, 9:55 PM IST

ಬಾಗಲಕೋಟೆ:ಇಂದು ಸಹ ಜಿಲ್ಲೆಯ ಮೂವರು ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸಾಜ್೯ ಆಗಿದ್ದಾರೆ.

ಢಾಣಕಶಿರೂರ ಗ್ರಾಮದ ಗರ್ಭಿಣಿ ಸೇರಿದಂತೆ ಮೂವರು ಕೊರೊನಾದಿಂದ ಗುಣಮುಖರಾಗಿದ್ದು, ಒಟ್ಟು 42 ಸೋಂಕಿತರು ಇಲ್ಲಿಯವರೆಗೆ ಗುಣಮುಖರಾಗಿ ಡಿಸಾಜ್೯ ಆಗಿದ್ದಾರೆ. ಹುಬ್ಬಳ್ಳಿ ಕಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಢಾಣಕಶಿರೂರ ಗ್ರಾಮದ 23 ವರ್ಷದ ಗರ್ಭಿಣಿ ಮಹಿಳೆ ಪಿ-607 ಗುಣಮುಖರಾಗಿದ್ದು, ಕಿಮ್ಸ್​ ಆಸ್ಪತ್ರೆಯಿಂದ ಸಂಜೆ ಬಿಡುಗಡೆ ಆಗಿದ್ದಾರೆ.

ಅದೇ ರೀತಿ ಬಾಗಲಕೋಟೆಯ ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ 23 ವರ್ಷದ ಯುವಕ ಪಿ-688, 32 ವರ್ಷದ ಪುರುಷ ಪಿ-690 ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಜಿಲ್ಲಾ ಸರ್ಜನ್ ಡಾ.ಪ್ರಕಾಶ ಬಿರಾದಾರ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಆಸ್ಪತ್ರೆಯಿಂದ ಪ್ರಮಾಣ ಪತ್ರ ವಿತರಣೆ ಮಾಡಿ, ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ABOUT THE AUTHOR

...view details