ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಿಂಪಿಕ್ಸ್​​: ನಾಳೆ ಕನ್ನಡತಿ ಆದಿತಿ, ರೈತನ ಮಗ ನೀರಜ್ ಚೋಪ್ರಾ ಫೈನಲ್​ ಪಂದ್ಯ - ನೀರಜ್ ಚೋಪ್ರಾ ಫೈನಲ್​ ಪಂದ್ಯ

ಟೋಕಿಯೋ ಒಲಿಂಪಿಕ್ಸ್​​ನಲ್ಲಿ ನಾಳೆ 16ನೇ ದಿನವಾಗಿದ್ದು, ಭಾರತದ ಅಥ್ಲೀಟ್ಸ್​ಗಳು ಕೆಲವೊಂದು ಮಹತ್ವದ ಪಂದ್ಯಗಳಲ್ಲಿ ಸೆಣಸಾಟ ನಡೆಸಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್
ಟೋಕಿಯೋ ಒಲಿಂಪಿಕ್ಸ್

By

Published : Aug 6, 2021, 7:52 PM IST

ಟೋಕಿಯೋ(ಜಪಾನ್​):ಟೋಕಿಯೋ ಒಲಿಂಪಿಕ್ಸ್​​ನಲ್ಲಿ ಭಾರತೀಯರ ಪಾಲಿಗೆ ನಾಳೆ ಮಹತ್ವದ ದಿನವಾಗಿದ್ದು, ಕೆಲವೊಂದು ಪ್ರಮುಖ ಪಂದ್ಯಗಳು ನಡೆಯಲಿವೆ. ಮೊದಲ ಎಸೆತದಲ್ಲೇ ಜಾವಲಿನ್​ ಥ್ರೋದಲ್ಲಿ ಫೈನಲ್​ಗೇರಿರುವ ನೀರಜ್​ ಚೋಪ್ರಾ ಹಾಗೂ ಗಾಲ್ಫ್​ನಲ್ಲಿ ಎರಡನೇ ಸ್ಥಾನದಲ್ಲಿರುವ ಕನ್ನಡತಿ ಆದಿತಿ ಪದಕಕ್ಕಾಗಿ ಸೆಣಸಾಡಲಿದ್ದಾರೆ.

ಅರ್ಹತಾ ಸುತ್ತಿನ ಮೊದಲ ಪ್ರಯತ್ನದಲ್ಲೇ 86:65 ಮೀಟರ್ ದೂರ ಎಸೆದು ಫೈನಲ್​ಗೆ ಅವಕಾಶ ಪಡೆದುಕೊಂಡಿರುವ ನೀರಜ್ ಚೋಪ್ರಾ ಮೇಲೆ ಭಾರತೀಯರು ಅಪಾರ ನಂಬಿಕೆ ಇಟ್ಟುಕೊಂಡಿದ್ದು, ದೇಶಕ್ಕೆ ಮತ್ತೊಂದು ಪದಕ ತಂದುಕೊಡಲಿದ್ದಾರೆ ಎಂಬ ಭರವಸೆ ಇದೆ.

ನಾಳೆ ಯಾವೆಲ್ಲ ಪಂದ್ಯಗಳು

  • ಜಾವಲಿನ್​ ಥ್ರೋ: ನೀರಜ್ ಚೋಪ್ರಾ

23 ವರ್ಷದ ನೀರಜ್​ ಚೋಪ್ರಾ ನಾಳೆಯ ಜಾವಲಿನ್​ ಥ್ರೋ ಫೈನಲ್​ ಪಂದ್ಯದಲ್ಲಿ ತಮ್ಮ ಪ್ರದರ್ಶನ ನೀಡಲಿದ್ದು, ಈ ಮೂಲಕ ಭಾರತಕ್ಕೆ ಮೊದಲ ಪದಕ ತಂದು ಕೊಡುವ ಇರಾದೆಯಲ್ಲಿದ್ದಾರೆ.

  • ಗಾಲ್ಫ್​: ಆದಿತಿ ಅಶೋಕ್​

ಗಾಲ್ಫ್​​ನಲ್ಲಿ ಇಲ್ಲಿಯವರೆಗೆ ಉತ್ತಮ ಪ್ರದರ್ಶನದ ಮೂಲಕ ಎರಡನೇ ಸ್ಥಾನದಲ್ಲಿರುವ ಕನ್ನಡತಿ ಆದಿತಿ ಅಶೋಕ್​​​ ನಾಳೆ ನಾಲ್ಕನೇ ರೌಂಡ್​ನಲ್ಲಿ ಆಡಲಿದ್ದು, ಉತ್ತಮ ಪ್ರದರ್ಶನ ನೀಡಿದರೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಲಿದ್ದಾರೆ.

ಇದನ್ನೂ ಓದಿರಿ: ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ ಕನ್ನಡತಿ ಅದಿತಿ ಅಶೋಕ್

23 ವರ್ಷದ ಆದಿತಿ, ಈಗಾಗಲೇ ಆಡಿರುವ ಮೂರು ರೌಂಡ್​​ಗಳಿಂದ 68 ಅಂಕ ಗಳಿಕೆ ಮಾಡಿ ಎರಡನೇ ಸ್ಥಾನದಲ್ಲಿದ್ದು, ನಾಳೆ ಇನ್ನೊಂದು ರೌಂಡ್​ ನಡೆಯಲಿದೆ. ಹವಾಮಾನ ವೈಪರೀತ್ಯದಿಂದಾಗಿ ನಾಳೆಯ ಪಂದ್ಯ ರದ್ಧುಗೊಂಡರೆ ಬೆಳ್ಳಿ ಪದಕಕ್ಕೆ ಮುತ್ತಿಕ್ಕಲಿದ್ದಾರೆ.

  • ಕುಸ್ತಿ:ಬಜರಂಗ್​ ಪೂನಿಯಾ

65 ಕೆಜಿ ವಿಭಾಗದ ಸೆಮಿಫೈನಲ್​ನಲ್ಲಿ ಸೋಲು ಕಂಡಿರುವ ಬಜರಂಗ್​ ಪೂನಿಯಾ ನಾಳೆ ಕಂಚಿಗಾಗಿ ಸೆಣಸಾಟ ನಡೆಸಲಿದ್ದಾರೆ.

ABOUT THE AUTHOR

...view details