ಟೋಕಿಯೊ :ಟೋಕಿಯೊ ಒಲಿಂಪಿಕ್ಸ್ ಯಶಸ್ವಿಯಾಗಿ 12 ದಿನಗಳನ್ನು ಪೂರೈಸಿದೆ. ಭಾರತ ತಂಡ ಬಹುಪಾಲು ಕಹಿ ಅನುಭವಿಸಿದ್ದು, ಕೇವಲ 3 ಪದಕಗಳು ಮಾತ್ರ ಭಾರತದ ಪಾಲಿಗೆ ಸಂದಿವೆ. ಆದರೆ, ನಾಳೆ ಭಾರತೀಯ ಅಥ್ಲೀಟ್ಗಳ ಪಾಲಿಗೆ ಮಹತ್ವದ್ದಾಗಿದ್ದು, ಮತ್ತೆರಡು ಪದಕ ಖಚಿತವಾಗುವ ಸಾಧ್ಯತೆಯಿದೆ.
ಅಥ್ಲೆಟಿಕ್ಸ್ನಲ್ಲಿ ಭಾರತದ ಬಹುದೊಡ್ಡ ಪದಕದ ಭರರವಸೆಯಾಗಿರುವ ಜಾವಲಿನ್ ಥ್ರೋವರ್, ಬಾಕ್ಸಿಂಗ್ನಲ್ಲಿ ಪದಕ ಖಚಿತವಾಗಿದ್ದರೂ ಐತಿಹಾಸಿಕ ಫೈನಲ್ ಮೇಲೆ ಕಣ್ಣಟ್ಟಿರುವ ಲವ್ಲಿನಾ ಹಾಗೂ ಚೆಕ್ ದೇ ಇಂಡಿಯಾ ಸಿನಿಮಾ ರೀತಿ ಅಚ್ಚರಿಯ ಗೆಲುವಿನೊಂದಿಗೆ ಮುನ್ನಗ್ಗುತ್ತಿರುವ ಮಹಿಳಾ ಹಾಕಿ ತಂಡ ಕಣಕ್ಕಿಳಿಯಲಿದೆ. ಬುಧವಾರ ಎದುರು ನೋಡಬಹುದಾದ ಪ್ರಮುಖ ಕ್ರೀಡೆ ಮತ್ತು ಕ್ರೀಡಾಪಟುಗಳ ವಿವಿರ
ಭಾರತ ಮಹಿಳಾ ಹಾಕಿ ತಂಡ
ಸತತ 3 ಪಂದ್ಯಗಳನ್ನು ಸೋತರ ಎದೆಗುಂದದೆ ಧೈರ್ಯ ಮತ್ತು ದೃಢನಿಶ್ಚಯದಿಂದ ಮುನ್ನಗ್ಗುತ್ತಿರುವ ರಾಣಿ ರಾಂಪಾಲ್ ನೇತೃತ್ವದ ಭಾರತ ಮಹಿಳಾ ತಂಡ ಸೆಮಿಫೈನಲ್ ಪ್ರವೇಶಿಸುವ ಮೂಲಕ ಈಗಾಗಲೇ ಇತಿಹಾಸ ನಿರ್ಮಿಸಿದೆ.
ಕ್ವಾರ್ಟರ್ ಫೈನಲ್ನಲ್ಲಿ 3 ಬಾರಿಯ ಒಲಿಂಪಿಕ್ಸ್ ಚಾಂಪಿಯನ್ ಮತ್ತು 2 ಬಾರಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಮಣಿಸಿರುವ ಭಾರತಕ್ಕೆ ಬುಧವಾರ ಸೆಮಿಫೈನಲ್ನಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ. ಅರ್ಜೆಂಟೀನಾ ಅಂತಿಮ 8ರ ಘಟ್ಟದಲ್ಲಿ ಜರ್ಮನಿಯನ್ನು 3-0ಯಲ್ಲಿ ಮಣಿಸಿ ಸೆಮಿಫೈನಲ್ ಪ್ರವೇಶಿಸಿದೆ.