ಟೋಕಿಯೋ: ಒಲಿಂಪಿಕ್ಸ್ ಮಹಿಳೆಯರ 400 ಮೀಟರ್ ಹರ್ಡಲ್ಸ್ನಲ್ಲಿ ಗೆಲುವು ಸಾಧಿಸುವ ಮೂಲಕ ಅಮೆರಿಕದ ಸಿಡ್ನಿ ಮೆಕ್ಲಾಫ್ಲಿನ್ ತನ್ನದೇ ವಿಶ್ವದಾಖಲೆಯನ್ನು ಮುರಿದರು. ಮೆಕ್ಲಾಫ್ಲಿನ್ ಕೇವಲ 51.46 ಸೆಕೆಂಡುಗಳಲ್ಲಿ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮೆಕ್ಲಾಫ್ಲಿನ್ ಯುಎಸ್ನ ದಾಲಿಯಾ ಮುಹಮ್ಮದ್ ಅವರನ್ನು 1-2 ಅಂಕಗಳ ಅಂತರದಿಂದ ಸೋಲಿಸಿದ್ದಾರೆ. ಮಾಜಿ ವಿಶ್ವ ಚಾಂಪಿಯನ್ ದಾಲಿಯಾ ಮುಹಮ್ಮದ್ ಬೆಳ್ಳಿ ಪದಕಕ್ಕೆ ತೃಪ್ತಿ ಪಡೆದುಕೊಂಡಿದ್ದಾರೆ.
ಇದನ್ನೂಓದಿ: ಚಿನ್ನಕ್ಕಾಗಿ ಇಂದು ಲವ್ಲಿನಾ ಪೈಪೋಟಿ: ಪಂದ್ಯ ವೀಕ್ಷಿಸಲು ಅಸ್ಸೋಂ ಕಲಾಪ ಮುಂದೂಡಿಕೆ, ರೆಡಿಯಾಗ್ತಿದೆ ರಸ್ತೆ!