ಕರ್ನಾಟಕ

karnataka

ETV Bharat / sports

ಚಿನ್ನದ ಪದಕ ದೇಶಕ್ಕೆ ಅರ್ಪಿಸಿದ ನೀರಜ್​.. ಅಭಿನಂದನಾ ಸಮಾರಂಭದಲ್ಲಿ ಮನದಾಳ ಬಿಚ್ಚಿಟ್ಟ ಅಥ್ಲೀಟ್ಸ್​! - ಕ್ರೀಡಾಪಟುಗಳಿಗೆ ಅಭಿನಂದನೆ

ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳು ಇಂದು ದೆಹಲಿಗೆ ಆಗಮಿಸಿದ್ದು, ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಸನ್ಮಾನ ಕಾರ್ಯಕ್ರಮ ಆಯೋಜನೆ ಮಾಡಿತ್ತು.

Indian Olympic Champions
Indian Olympic Champions

By

Published : Aug 9, 2021, 9:27 PM IST

Updated : Aug 9, 2021, 10:23 PM IST

ನವದೆಹಲಿ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಜೊತೆಗೆ ದೇಶದ ಕೀರ್ತಿ ಪತಾಕೆ ಹಾರಿಸಿ, ತವರಿಗೆ ಆಗಮಿಸಿರುವ ಅಥ್ಲೀಟ್ಸ್​ಗಳಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಅವರಿಗೆ ಭರ್ಜರಿಯಾಗಿ ಬರಮಾಡಿಕೊಳ್ಳಲಾಯಿತು.

ಅಭಿನಂದನಾ ಸಮಾರಂಭದಲ್ಲಿ ಮನದಾಳ ಬಿಚ್ಚಿಟ್ಟ ಅಥ್ಲೀಟ್ಸ್​​

ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ, ಬೆಳ್ಳಿ ಪದಕ ವಿಜೇತ ರವಿ ದಹಿಯಾ, ಕಂಚಿನ ಪದಕ ಗೆದ್ದಿರುವ ಭಾರತದ ಪುರುಷರ ಹಾಕಿ ತಂಡ, ಬಾಕ್ಸರ್​ ಲವ್ಲಿನಾ ಸೇರಿದಂತೆ ಅನೇಕರನ್ನ ಅಭಿಮಾನಿಗಳು ಹಾಗೂ ಕ್ರೀಡಾ ಪ್ರಾಧಿಕಾರ ಸ್ವಾಗತ ಮಾಡಿಕೊಂಡಿತು. ಇದೇ ವೇಳೆ, ಎಲ್ಲರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮಾಡಲಾಯಿತು. ಇದಾದ ಬಳಿಕ ನಡೆದ ಅಭಿನಂದನಾ ಸಮಾರಂಭದಲ್ಲಿ ಎಲ್ಲರನ್ನೂ ಸನ್ಮಾನ ಮಾಡಲಾಯಿತು.

ಇದನ್ನೂ ಓದಿರಿ: ತವರಿಗೆ ಮರಳಿದ ಒಲಿಂಪಿಕ್ಸ್​ ವಿಜೇತರು..ಅದ್ಧೂರಿಯಾಗಿ ಸ್ವಾಗತಿಸಿದ ತೇಜಸ್ವಿ ಸೂರ್ಯ

ಅಶೋಕ್ ಹೋಟೆಲ್​ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಬಾಕ್ಸರ್ ಲವ್ಲಿನಾ, ತವರಿಗೆ ಮರಳಿರುವುದು ತುಂಬಾ ಸಂತೋಷವಾಗುತ್ತಿದೆ. ದೇಶಕ್ಕಾಗಿ ಪದಕ ಗೆಲ್ಲುವ ನನ್ನ ಕೆಲಸ ಮುಂದುವರೆಯಲಿದೆ. ಪ್ಯಾರೀಸ್​ ಒಲಿಂಪಿಕ್ಸ್​​ನಲ್ಲಿ ಭಾರತಕ್ಕೆ ಚಿನ್ನದ ಪದಕ ಗೆಲ್ಲುವೆ ಎಂದಿದ್ದಾರೆ.

ಭಜರಂಗ್ ಪೂನಿಯಾ

ಮೊಣಕಾಲಿನ ಗಾಯದ ಹೊರತಾಗಿ ಕೂಡ ಕಂಚಿನ ಪಂದ್ಯಕ್ಕಾಗಿ ಹೋರಾಟ ನಡೆಸಿದೆ. ಮೊಣಕಾಲಿನ ಗಾಯ ತೀವ್ರವಾಗಿದ್ದರೆ ವಿಶ್ರಾಂತಿ ಪಡೆದುಕೊಳ್ಳುವ ನಿರ್ಧಾರ ಮಾಡಿದ್ದೇನು. ಆದರೆ, ಈ ಪಂದ್ಯ ನನ್ನ ಜೀವನ ಬದಲಾಯಿಸಬಹುದು ಎಂದು ಭಾವಿಸಿ, ಮೈದಾನಕ್ಕಿಳಿದೆ. ಜೊತೆಗೆ ನನ್ನ ಕೈಲಾದ ಪ್ರಯತ್ನ ಮಾಡಿದೆ. ಅದರ ಫಲವಾಗಿ ಕಂಚಿನ ಪದಕ ಗೆಲ್ಲುವಲ್ಲಿ ಯಶಸ್ವಿಯಾದೆ ಎಂದರು.

ಜಾವಲಿನ್​ ಥ್ರೋದಲ್ಲಿ ಚಿನ್ನದ ಪದಕ ಗೆದ್ದಿರುವ ನೀರಜ್​ ಚೋಪ್ರಾ ಮಾತನಾಡಿ, ತಾವು ಗೆದ್ದಿರುವ ಸ್ವರ್ಣ ಪದಕವನ್ನ ದೇಶಕ್ಕೆ ಅರ್ಪಣೆ ಮಾಡುತ್ತಿದ್ದೇನೆ ಎಂದರು. ಜೊತೆಗೆ ತಮಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು

ಇದೇ ವೇಳೆ ಬೆಳ್ಳಿ ಪದಕ ವಿಜೇತ ರವಿ ದಹಿಯಾ, ಚಿನ್ನ ಗೆದ್ ನೀರಜ್​ ಚೋಪ್ರಾ, ಬಾಕ್ಸರ್​ ಲವ್ಲಿನಾ, ಪುರುಷರು ಹಾಗೂ ಮಹಿಳಾ ಹಾಕಿ ತಂಡ ಸೇರಿದಂತೆ ಅನೇಕ ಅಥ್ಲೀಟ್ಸ್​​ಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕೇಂದ್ರ ಕ್ರೀಡಾ ಸಚಿವ ಅನುರಾಗ್​ ಠಾಕೂರ್​, ಕಾನೂನು ಸಚಿವ ಕಿರಣ್​ ರಿಜಿಜು, ಹಾಗೂ ರಾಜ್ಯ ಖಾತೆ ಸಚಿವ ನಿಶೀತ್​ ಪ್ರಮಾಣಿಕ್​ ಉಪಸ್ಥಿತರಿದ್ದರು.

Last Updated : Aug 9, 2021, 10:23 PM IST

ABOUT THE AUTHOR

...view details