ಮಿಯಾಮಿ: ಮಿಯಾಮಿ ಓಪನ್‌ನಲ್ಲಿ ದಾಖಲೆಯ ಏಳನೇ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ನಂ 1 ಆಟಗಾರ ಸರ್ಬಿಯಾದ ನೊವಾಕ್ ಜೊಕೊವಿಕ್ ನಾಲ್ಕನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.
ಮಿಯಾಮಿ ಓಪನ್: ನಾಲ್ಕನೇ ಸುತ್ತು ಪ್ರವೇಶಿಸಿದ ನೊವಾಕ್ - Miami Open
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಂ1 ರ‍್ಯಾಂಕಿಂಗ್‌ನಲ್ಲಿರುವ ನೊವಾಕ್, ಮೂನೇ ಸುತ್ತಿನಲ್ಲಿ ಅರ್ಜೆಂಟೀನಾದ ಫೆಡೆರಿಕೊ ಡೆಲ್‌ಬೊನಿಸ್ ಅವರನ್ನು 7-5, 4-6, 6-1ರಲ್ಲಿ ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ನಂ1 ರ‍್ಯಾಂಕಿಂಗ್‌ನಲ್ಲಿರುವ ನೊವಾಕ್, ಮೂನೇ ಸುತ್ತಿನಲ್ಲಿ ಅರ್ಜೆಂಟೀನಾದ ಫೆಡೆರಿಕೊ ಡೆಲ್‌ಬೊನಿಸ್ ಅವರನ್ನು 7-5, 4-6, 6-1ರಲ್ಲಿ ಸೋಲಿಸಿ ನಾಲ್ಕನೇ ಸುತ್ತಿಗೆ ಪ್ರವೇಶ ಪಡೆದರು.
ಹಾರ್ಡ್ ರಾಕ್ ಮೈದಾನದಲ್ಲಿ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ ಮಿಂಚಿದ ನೊವಾಕ್, ಎರಡನೇ ಸೆಟ್‌ನಲ್ಲಿ ನಿರಾಸೆ ಕಂಡರೂ ಮೂರನೇ ಸೆಟ್‌ನಲ್ಲಿ ಅಬ್ಬರಿಸಿ ಗೆಲುವಿನ ತೋರಣ ಕಟ್ಟಿದರು.
ಪುರುಷರ ಇತರೆ ಸಿಂಗಲ್ಸ್ ಪಂದ್ಯಗಳಲ್ಲಿ ರಾಬರ್ಟೊ ಬಟಿಸ್ಟಾ ಅಗತ್ 6-4, 6-4ರಲ್ಲಿ ಫಾಬಿಯೊ ಫಾಗ್ನಿನಿ ಎದುರೂ, ಕೈಲ್ ಎಡ್ಮಂಡ್ 6-4, 6-4ರಲ್ಲಿ ಮಿಲೊಸ್ ರಾನಿಕ್ ಮೇಲೂ, ಜಾನ್ ಇಸ್ನರ್ 7-5, 7-6ರಲ್ಲಿ ಅಲ್ಬರ್ಟ್ ರಾಮೊಸ್ ವಿರುದ್ಧವೂ, ನಿಕ್ ಕಿರ್ಗಿಯೊಸ್ 6-3, 6-1ರಲ್ಲಿ ದುಸಾನ್ ಲಾಜೊವಿಚ್ ಮೇಲೂ ಗೆದ್ದು ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.