ಕರ್ನಾಟಕ

karnataka

ETV Bharat / sports

T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೇಹ್ವಾಗ್ ಬೇಸರ.. ಟೀಕಿಸಬೇಡಿ ಎಂದ ಟರ್ಬನೇಟರ್​

ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಪಂದ್ಯದಲ್ಲಿ ಭಾರತ ಸೋಲುಕಂಡಿದ್ದು, ಟೀಕೆಗೆ ಗುರಿಯಾಗಿದೆ. ತಂಡದ ಆಯ್ಕೆಯ ಕುರಿತಂತೆ ಮತ್ತೆ ಅಸಮಾಧಾನ ಕೇಳಿಬಂದರೆ, ಕಳಪೆ ಪ್ರದರ್ಶನದ ವಿರುದ್ಧ ಮಾಜಿ ಆಟಗಾರರು ಬೇಸರ ವ್ಯಕ್ತಪಡಿಸಿದ್ದಾರೆ.

By

Published : Nov 1, 2021, 10:37 AM IST

new-zealand-has-virtually-ensured-india-doesnt-make-it-to-semis-virender-sehwag
T20 ವಿಶ್ವಕಪ್: 2ನೇ ಪಂದ್ಯದಲ್ಲಿ ಕಳಪೆ ಪ್ರದರ್ಶನಕ್ಕೆ ಸೇಹ್ವಾಗ್ ಬೇಸರ

ನವದೆಹಲಿ: ನಿನ್ನೆ ನಡೆದ ಟಿ-20 ವಿಶ್ವಕಪ್​​ ಟೂರ್ನಿಯ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಸೋಲುಕಂಡಿದೆ. ಈ ಮೂಲಕ ಸೆಮಿಫೈನಲ್ ತಲುಪುವ ಅವಕಾಶ ಬಹುತೇಕ ಕೊನೆಗೊಂಡಿದೆ. ಭಾರತದ ಕಳಪೆ ಪ್ರದರ್ಶನಕ್ಕೆ ಟೀಕೆಗಳು ಕೇಳಿಬರುತ್ತಿದೆ. ಭಾರತೀಯ ಬ್ಯಾಟ್ಸ್​​ಮನ್​​ಗಳ ಪ್ರದರ್ಶನದ ವಿರುದ್ಧ ಮಾಜಿ ಕ್ರಿಕೆಟಿಗರು ಅಸಮಾಧಾನ ಹೊರಹಾಕಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೇಹ್ವಾಗ್, ಭಾರತ ತಂಡದ ಪ್ರದರ್ಶನ ನಿರಾಶದಾಯಕ. ನ್ಯೂಜಿಲೆಂಡ್ ತಂಡದ ಆಟ ಅದ್ಭುತ. ಈ ಹಿಂದಿನಂತೆಯೇ ಭಾರತ ತಂಡದ ಕಳಪೆ ಶಾಟ್​​ಗಳು, ನ್ಯೂಜಿಲೆಂಡ್ ತಂಡ ಭಾರತವನ್ನ ಸೆಮಿಸ್​ಗೆ ಹಾದಿಯನ್ನ ಕಠಿಣಗೊಳಿಸಿದೆ. ಇದು ನೋವುಂಟು ಮಾಡಿದೆ. ಭಾರತ ತಂಡಕ್ಕೆ ಆತ್ಮಾವಲೋಕನದ ಸಮಯವಿದು ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಆದರೆ ಇನ್ನೊಂದೆಡೆ ಮಾಜಿ ಕ್ರಿಕೆಟಿಗ ಹರ್ಭಜನ್​ ಸಿಂಗ್ ಭಾರತೀಯ ತಂಡವನ್ನ ಅಷ್ಟೊಂದು ಕಟುವಾಗಿ ಟೀಕಿಸಬೇಡಿ ಎಂದು ಕ್ರಿಕೆಟ್ ಪ್ರೇಮಿಗಳಲ್ಲಿ ಮನವಿ ಮಾಡಿದ್ದಾರೆ. ಉತ್ತಮ ಕ್ರಿಕೆಟ್​ ತಂಡ ಎಂದು ನಾನು ತಿಳಿದಿದ್ದೆವು, ಇದು ಹಲವು ಬಾರಿ ಅದು ಸಾಬೀತಾಗಿದೆ. ಈ ರೀತಿಯ ಫಲಿತಾಂಶದಿಂದಾಗಿ ಆಟಗಾರರಿಗೆ ಅತೀವ ನೋವಾಗಿರುತ್ತದೆ. ಆದರೆ ನ್ಯೂಜಿಲೆಂಡ್ ತಂಡ ಉತ್ತಮ ಆಟ ಪ್ರದರ್ಶಿಸಿದೆ. ಅವರು ಎಲ್ಲಾ ವಿಭಾಗದಲ್ಲೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಭಾರತ ತಂಡ ಟೂರ್ನಿಯಲ್ಲಿ ಸತತ ಎರಡನೇ ಸೋಲು ಕಂಡಿದೆ. ಎರಡು ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ತೋರಿದೆ. ಮುಂದಿನ ಮೂರು ಪಂದ್ಯಗಳಲ್ಲೂ ಟೀಂ ಇಂಡಿಯಾ ಜಯದಾಖಲಿಸಿದರೂ ಮುಂದಿನ ಹಂತ ತಲುಪುವುದು ಕಷ್ಟವಾಗಲಿದೆ.

ಅಬುಧಾಬಿಯ ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಬುಧವಾರ ಅಫ್ಘಾನಿಸ್ತಾನ ವಿರುದ್ಧ ಭಾರತ ಮುಂದಿನ ಪಂದ್ಯವಾಡಲಿದೆ.

ಇದನ್ನೂ ಓದಿ:ಪಾಕ್‌ ವಿರುದ್ಧದ ಸೋಲು ತುಂಬಾ ನೋವು ತಂದ ಕಾರಣ ನಿವೃತ್ತಿ ಆಗುತ್ತಿದ್ದೇನೆ : ಅಸ್ಗರ್​ ಆಫ್ಘಾನ್

ABOUT THE AUTHOR

...view details