ನವದೆಹಲಿ: ಡಬ್ಲ್ಯೂಡಬ್ಲ್ಯೂಇ ವಿಶ್ವ ಹೆವಿವೈಟ್ನ ಮಾಜಿ ಚಾಂಪಿಯನ್ ದಿ ಗ್ರೇಟ್ ಖಲಿ ಅವರು ಡಬ್ಲ್ಯೂಡಬ್ಲ್ಯೂಇ ಪಂದ್ಯಗಳ ಹಿಂದಿರುವ ಕೆಲವು ರಹಸ್ಯಗಳನ್ನು ಬಹಿರಂಗಪಡಿಸಿದರು.
'ಈಟಿವಿ ಭಾರತ್'ಗೆ ವಿಶೇಷ ಸಂದರ್ಶನ ನೀಡಿ ಮಾತನಾಡಿದ ಖಲಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ವೃತ್ತಿಪರವಾಗಿ ಆಡುತ್ತಿರುವ ಪ್ರತಿಯೊಂದು ಕ್ರೀಡೆಯಲ್ಲಿ ಕೆಲವು ವೇಳೆ ಮ್ಯಾಚ್ ಫಿಕ್ಸಿಂಗ್ ನಡೆಯುತ್ತವೆ. ಅದೇ ರೀತಿಯಲ್ಲಿ ಡಬ್ಲ್ಯೂಡಬ್ಲ್ಯೂಇನಲ್ಲೂ ಮ್ಯಾಚ್ ಫಿಕ್ಸಿಂಗ್ ಅಸ್ತಿತ್ವದಲ್ಲಿದೆ ಎಂದರು.
ನನಗೂ ಅನೇಕ ಫಿಕ್ಸರ್ಗಳು ಸಂಪರ್ಕಿಸಿದ್ದಾರೆ. ಆದರೆ, ನಾನು ಎಂದಿಗೂ ನನ್ನ ಆಟವನ್ನು ರಾಜಿ ಮಾಡಿಕೊಂಡಿಲ್ಲ. ನನ್ನ ಜೀವನದುದ್ದಕ್ಕೂ ಪ್ರಾಮಾಣಿಕತೆಯಿಂದ ಪ್ರದರ್ಶನ ನೀಡಿದ್ದೇನೆ ಎಂದು ಹೇಳಿದ್ದಾರೆ.
'ಈಟಿವಿ ಭಾರತ್'ಗೆ ವಿಶೇಷ ಸಂದರ್ಶನ ನೀಡಿದ ದಿ ಗ್ರೇಟ್ ಖಲಿ 47 ವರ್ಷದ ಖಲಿ, ಭಾರತ ಸರ್ಕಾರವು ತಳಮಟ್ಟದ ಕ್ರೀಡೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುತ್ತಿಲ್ಲ ಎಂದು ಟೀಕಿಸಿದರು.
ಸರ್ಕಾರವು ತಳಮಟ್ಟದಲ್ಲಿರುವ ಉದಯೋನ್ಮುಖ ಕ್ರೀಡಾಪಟುಗಳಿಗೆ ಸೌಲಭ್ಯಗಳನ್ನು ಒದಗಿಸಬೇಕು. ನಾನು ಅವರಿಗೆ ಕೋಟ್ಯಂತರ ರೂಪಾಯಿ ನೀಡುವಂತೆ ಕೇಳುತ್ತಿಲ್ಲ. ಮೊಳಕೆಯೊಡೆಯುತ್ತಿರುವ ಭವಿಷ್ಯದ ಕ್ರೀಡಾಪಟುಗಳಿಗೆ ಟ್ರ್ಯಾಕ್‌ಸೂಟ್, ಕ್ರೀಡಾ ಬೂಟು ಮತ್ತು ಪದಕಗಳಂತಹ ಸೌಲಭ್ಯಗಳನ್ನು ಸಣ್ಣ ಮಟ್ಟದಲ್ಲಿ ಒದಗಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಸಿಎಎ ಮತ್ತು ಎನ್‌ಆರ್‌ಸಿ ಮಸೂದೆಯ ಬಗ್ಗೆಯೂ ಖಾಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಬಗ್ಗೆ ಇನ್ನಷ್ಟು ತಿಳಿಯಲು ಪೂರ್ಣ ಸಂದರ್ಶನ ವೀಕ್ಷಿಸಿ.