ಕರ್ನಾಟಕ

karnataka

ETV Bharat / sports

World Championship: ಹಾಲಿ ಚಾಂಪಿಯನ್​ಗೆ ಶಾಕ್ ನೀಡಿದ ಸರಿತಾ, ಸೆಮಿಫೈನಲ್ಸ್​ ಪ್ರವೇಶಿಸಿದ ಅನ್ಶು ಮಲಿಕ್ - ಅನ್ಶು ಮಲಿಕ್

ಏಷ್ಯನ್ ಚಾಂಪಿಯನ್ ಆಗಿರುವ ಸರಿತಾ 59 ಕೆಜಿ ವಿಭಾಗದ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ 2019ರ ವಿಶ್ವ ಚಾಂಪಿಯನ್​ ಆಗಿರುವ ಕೆನಡಾ ಕುಸ್ತಿ ಪಟುವಿನ ವಿರುದ್ಧ ಪ್ರಬಲ ಪೈಪೋಟಿ ಗೆದ್ದು ಬಂದಿದ್ದರು. ನಂತರ ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ಜರ್ಮನಿಯ ಸಾಂಡ್ರಾ ಪರುಜೆವ್ಸ್ಕಿ ವಿರುದ್ಧ ಗೆದ್ದು ಸೆಮಿಗೆ ಎಂಟ್ರಿಕೊಟ್ಟರು.

Sarita stuns world champ
ಸರಿತಾ ಮೋರ್​

By

Published : Oct 6, 2021, 8:44 PM IST

ಒಸ್ಲೊ(ನಾರ್ವೆ): ಇಲ್ಲಿ ನಡೆಯುತ್ತಿರುವ ವಿಶ್ವಚಾಂಪಿಯನ್​ಶಿಪ್​ನಲ್ಲಿ ಭಾರತದ ಕುಸ್ತಿಪಟು ಸರಿತಾ ಮೋರ್​ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ​ ಹಾಲಿ ವಿಶ್ವಚಾಂಪಿಯನ್ ಲಿಂಡಾ ಮೊರಾಯಿಸ್ ಅವರಿಗೆ ಅಘಾತ​ ನೀಡಿ, ನಂತರ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಮತ್ತು ಯುವ ಕುಸ್ತಿಪಟು ಅನ್ಶು ಮಲಿಕ್ ಕೂಡ ಅಂತಿಮ ನಾಲ್ಕರಘಟ್ಟಕ್ಕೆ ಪ್ರವೇಶ ಪಡೆದಿದ್ದು, ದೇಶದ ಪದಕದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.

ಏಷ್ಯನ್ ಚಾಂಪಿಯನ್ ಆಗಿರುವ ಸರಿತಾ 59 ಕೆಜಿ ವಿಭಾಗದ ಫ್ರೀ ಕ್ವಾರ್ಟರ್​ ಫೈನಲ್​ನಲ್ಲಿ 2019ರ ವಿಶ್ವ ಚಾಂಪಿಯನ್​ ಆಗಿರುವ ಕೆನಡಾ ಕುಸ್ತಿಪಟುವಿನ ವಿರುದ್ಧ ಪ್ರಬಲ ಪೈಪೋಟಿ ನೀಡಿ ಗೆದ್ದು ಬಂದಿದ್ದರು. ನಂತರ ನಡೆದ ಕ್ವಾರ್ಟರ್​ ಫೈನಲ್​ನಲ್ಲಿ ಜರ್ಮನಿಯ ಸಾಂಡ್ರಾ ಪರುಜೆವ್ಸ್ಕಿ ವಿರುದ್ಧ ಗೆದ್ದು ಸೆಮಿಗೆ ಎಂಟ್ರಿಕೊಟ್ಟರು.

ಸರಿತಾ ಸೆಮಿಫೈನಲ್ಸ್​ನಲ್ಲಿ ಯುರೋಪಿಯನ್ ಚಾಂಪಿಯನ್​ ಆಗಿರುವ ಬಲ್ಗೇರಿಯಾದ ಬಿಲಿಯಾನಾ ಜಿವ್ಕೋವಾ ದುಡೋವಾ ವಿರುದ್ಧ ಸೆಣಸಾಡಲಿದ್ದಾರೆ. 57ಕೆಜಿ ವಿಭಾಗದ ಕ್ವಾರ್ಟರ್ ಫೈನಲ್​ನಲ್ಲಿ ಅನ್ಶು ಮಲಿಕ್ ಮಂಗೋಲಿಯಾದ ದವಾಚಿಮೆಗ್ ಎರ್ಖೆಂಬಾಯರ್ ವಿರುದ್ಧ 5-1ರಲ್ಲಿ ಗೆದ್ದು ನಾಲ್ಕರ ಘಟ್ಟಕ್ಕೆ ಪ್ರವೇಶ ಪಡೆದರು.

72 ಕೆಜಿ ವಿಭಾಗದಲ್ಲಿ ಟೆಕ್ನಿಕಲ್ ಫಾಲ್​ ಮೂಲಕ ಕ್ಸೆನಿಯಾ ಬುರಕೋವಾ ವಿರುದ್ಧ ಗೆದ್ದಿದ್ದ ದಿವ್ಯಾ ಕಕ್ರಾನ್​ ನಂತರ ಜಪಾನ್​ನ ಅಂಡರ್ 23 ಚಾಂಪಿಯನ್​ ಮಸಾಕೊ ಫ್ಯೂರಿಚ್ ವಿರುದ್ಧ ಸೋಲು ಕಂಡರು.

76 ಕೆಜಿ ವಿಭಾಗದಲ್ಲಿ ಕಿರಣ್ ರೆಪೆಶಾಜ್​ ಪಂದ್ಯದಲ್ಲಿ ಕಂಚಿನ ಪದಕದ ಪ್ಲೇ ಆಫ್​ ತಲುಪಿದ್ದಾರೆ. ಉಳಿದಂತೆ 53 ಕೆಜಿ ವಿಭಾಗದಲ್ಲಿ ರೆಪೆಶಾಜ್ ಸುತ್ತಿನಲ್ಲಿ ಪೂಜಾ ಜಟ್​ ಸೋಲು ಕಂಡರೆ, 68 ಕೆಜಿ ವಿಭಾಗದಲ್ಲಿ ರೀತು ಮಲಿಕ್ ಉಕ್ರೇನ್ ಕುಸ್ತಿಪಟು ವಿರುದ್ಧ ಸೋಲು ಕಂಡರು.

ಇದನ್ನು ಓದಿ:ಹಾಕಿ..FIH ವಾರ್ಷಿಕ ಪ್ರಶಸ್ತಿಗಳೆಲ್ಲವನ್ನು ಬಾಚಿಕೊಂಡ ಭಾರತ: ಬೆಲ್ಜಿಯಂ ಅಸಮಾಧಾನ

ABOUT THE AUTHOR

...view details