ಕರ್ನಾಟಕ

karnataka

ETV Bharat / sports

ವಿಶ್ವ ಬಾಕ್ಸಿಂಗ್ ಚಾಂಪಿಯನ್​ಶಿಪ್: ಸೆಮೀಸ್​​ಗೆ ಲಗ್ಗೆ ಹಾಕಿ, ಭಾರತಕ್ಕೆ ಪದಕ ಖಚಿತಪಡಿಸಿದ ನಿಖಾತ್​ ಜರೀನ್

ಭಾರತದ ನಿಖಾತ್​ ಜರೀನ್​ ವಿಶ್ವ ಬಾಕ್ಸಿಂಗ್​ ಚಾಂಪಿಯನ್​ಶಿಪ್​​ನಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಇದೀಗ ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದಾರೆ.

Nikhat Zareen secures india first medal
Nikhat Zareen secures india first medal

By

Published : May 16, 2022, 7:05 PM IST

ಇಸ್ತಾಂಬುಲ್​​ (ಟರ್ಕಿ):ವಿಶ್ವ ಬಾಕ್ಸಿಂಗ್ ಚಾಂಪಿಯನ್​​ಶಿಪ್​​​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ 25 ವರ್ಷದ ನಿಖಾತ್​ ಜರೀನ್​ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ. ಟರ್ಕಿಯ ಇಸ್ತಾಂಬುಲ್​​ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್​ನ ಎದುರಾಳಿ ಚಾರ್ಲಿ ಡೇವಿಸನ್ ವಿರುದ್ಧ 5-0 ಅಂತರದಿಂದ ಜಯ ದಾಖಲಿಸಿ, ಸೆಮಿಫೈನಲ್​ಗೆ ಲಗ್ಗೆ ಹಾಕಿದ್ದು, ಈ ಮೂಲಕ ಪದಕ ಖಚಿತಪಡಿಸಿದ್ದಾರೆ.

ನಿಖಾತ್​ ಜರೀನ್ ಬಾಕ್ಸಿಂಗ್​

52 ಕೆಜಿ ವಿಭಾಗದ ಬಾಕ್ಸಿಂಗ್​​ನಲ್ಲಿ ನಿಖಾತ್​ ಜರೀನ್​​ ಅತ್ಯದ್ಭುತ ಪ್ರದರ್ಶನ ನೀಡಿದ್ದು, ಕ್ವಾರ್ಟರ್​ ಫೈನಲ್​​ನಲ್ಲಿ ಎದುರಾಳಿ ವಿರುದ್ಧ ಭರ್ಜರಿ 5-0 ಅಂತರದಿಂದ ಜಯ ದಾಖಲಿಸಿದರು. ಏಷ್ಯನ್​ ಚಾಂಪಿಯನ್​ಶಿಪ್​​​ನಲ್ಲಿ ಕಂಚಿನ ಪದಕ ಗೆದ್ದಿರುವ ತೆಲಂಗಾಣದ ಬಾಕ್ಸರ್​​ ಜರೀನ್​, ಇದೀಗ ಭಾರತಕ್ಕೆ ಮಹಿಳಾ ವಿಭಾಗದ ಬಾಕ್ಸಿಂಗ್​​ನಲ್ಲಿ ಮೊದಲ ಪದಕ ಖಚಿತಪಡಿಸಿದ್ದಾರೆ.

ಇದನ್ನೂ ಓದಿ:2022 ಕಾಮನ್​ವೆಲ್ತ್​ ಗೇಮ್ಸ್ ​​: ವಿನೇಶ್ ಫೋಗಟ್, ಸಾಕ್ಷಿ ಮಲಿಕ್ ಸೇರಿ ಇವರಿಗೆಲ್ಲ ಅವಕಾಶ

48 ಕೆಜಿ ವಿಭಾಗದಲ್ಲಿ ಭಾರತದ ನಿತು ಕಝಕಿಸ್ತಾನದ ಅಲುವಾ ವಿರುದ್ಧ 2-3 ಅಂತರದಿಂದ ಸೋಲು ಕಂಡರು. ಉಳಿದಂತೆ 57 ಕೆಜಿ ವಿಭಾಗದ ಬಾಕ್ಸಿಂಗ್​ನಲ್ಲಿ ಭಾರತಕ್ಕೆ ಮನೀಷಾ ಎರಡನೇ ಪದಕ ಖಚಿತಪಡಿಸಿದ್ದು, ಪ್ರವೀಣ್(63 ಕೆಜಿ ವಿಭಾಗ) ಕೂಡ ಮತ್ತೊಂದು ಪದಕ ಭಾರತಕ್ಕೆ ಹೊತ್ತು ತರಲಿದ್ದಾರೆ.

ABOUT THE AUTHOR

...view details