ನವದೆಹಲಿ: ಭಾರತದ ಬಾಕ್ಸರ್‌ಗಳಾದ ನಿತು ಘಂಘಾಸ್ ಮತ್ತು ಸ್ವೀಟಿ ಬೂರಾ ಮೊದಲ ಬಾರಿಗೆ ವಿಶ್ವ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ದೆಹಲಿಯ ಇಂದಿರಾಗಾಂಧಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಇಬ್ಬರೂ ಕೂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.
2022ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ ವಿಜೇತೆ ನಿತು (48 ಕೆಜಿ) ಮಂಗೋಲಿಯಾದ ಲುತ್ಸೈಖಾನ್ ಅಲ್ಟಾಂಟ್ಸೆಟ್ಸೆಗ್ ಅವರನ್ನು 5-0 ಅಂಕಗಳೊಂದಿಗೆ ಸೋಲಿಸುವ ಮೂಲಕ ತನ್ನ ಮೊದಲ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಗೆದ್ದರು. ಮತ್ತೊಂದೆಡೆ, ಮೂರು ಬಾರಿ ಏಷ್ಯನ್ ಪದಕ ವಿಜೇತೆ ಸ್ವೀಟಿ (81 ಕೆಜಿ) ಎರಡನೇ ವರ್ಲ್ಡ್ಸ್ ಪದಕಕ್ಕೆ ಮುತ್ತಿಕ್ಕಿದರು. ಚೀನಾದ ವಾಂಗ್ ಲೀನಾ ವಿರುದ್ಧದ 4-3 ಪಾಯಿಂಟ್‌ಗಳಿಂದ ಗೆಲುವು ಸಾಧಿಸಿದರು.
ಇದಕ್ಕೂ ಮುನ್ನ ಕಜಕಿಸ್ತಾನದ ಬಾಕ್ಸರ್‌ನನ್ನು 5-2 ಅಂತರದಿಂದ ಸೋಲಿಸಿ ನಿತು ಫೈನಲ್ ಪ್ರವೇಶಿಸಿದ್ದರು. ನಿತು ಅವರನ್ನು ಪ್ರೋತ್ಸಾಹಿಸಲು, ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಕೋಚ್ ಜಗದೀಶ್ ಸಿಂಗ್, ತಂದೆ ಜೈ ಭಗವಾನ್ ಘಂಘಾಸ್ ಹಾಗೂ ಸಹೋದರ ಅಕ್ಷಿತ್ ಮತ್ತು ಕುಟುಂಬಸ್ಥರು ಸೇರಿ ಹಲವರು ಪಂದ್ಯದ ವೇಳೆ ಹಾಜರಿದ್ದರು.
ಪಂದ್ಯದ ಆರಂಭದಿಂದಲೂ ಮಂಗೋಲಿಯಾದ ಪ್ರತಿಸ್ಪರ್ಧಿಯ ಮೇಲೆ ಒತ್ತಡ ಹೇರಿದ ಅವರು ಏಕಪಕ್ಷೀಯ ಪಂದ್ಯದಲ್ಲಿ 5-0 ಅಂತರದಲ್ಲಿ ಗೆದ್ದು ಚಿನ್ನದ ಪದಕ ಮುಡಿಗೇರಿಸಿಕೊಂಡರು. ವಿಶ್ವದ ಶ್ರೇಷ್ಠ ಬಾಕ್ಸರ್ ಎಂಸಿ ಮೇರಿ ಕೋಮ್ ಅವರನ್ನು ಸೋಲಿಸಿದ ನಂತರ ನೀತು ಬೆಳಕಿಗೆ ಬಂದಿದ್ದರು. ನೀತು ಅವರನ್ನು ಐಬಿಎ ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕಕ್ಕೆ ಸ್ಪರ್ಧಿಯಾಗಿ ಪರಿಗಣಿಸಲಾಗಿತ್ತು.