ದೋಹಾ(ಕತಾರ್): 2023 ರ ವಂಡಾ ಡೈಮಂಡ್ ಲೀಗ್ ದೋಹಾದ ಕತಾರ್ ಸ್ಪೋರ್ಟ್ ಕ್ಲಬ್ನಲ್ಲಿ ನಾಳೆಯಿಂದ ಪ್ರಾರಂಭವಾಗಲಿದೆ. ಈ ಲೀಗ್ನಲ್ಲಿ ಡೈಮಂಡ್ ಟ್ರೋಫಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ನೀರಜ್ ಚೋಪ್ರಾ ಅವರು ಅಥ್ಲೆಟಿಕ್ಸ್ ಈವೆಂಟ್‌ಗಳಲ್ಲಿ ಒಂದರಲ್ಲಿ ಭಾಗವಹಿಸಲಿದ್ದಾರೆ.
ದೋಹಾ ಕೂಟದಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವೂ ನಡೆಯಲಿದ್ದು, ಟ್ರಿಪಲ್ ಜಂಪ್ ಚಾಂಪಿಯನ್ ಎಲ್ಡೋಸ್ ಪಾಲ್ ಸೇರಿದಂತೆ ಪೋರ್ಚುಗಲ್‌ನ ಹಾಲಿ ಒಲಿಂಪಿಕ್ ಚಾಂಪಿಯನ್ ಪೆಡ್ರೊ ಪಿಚಾರ್ಡೊ ಮತ್ತು ಕ್ಯೂಬಾದ ಡೈಮಂಡ್ ಲೀಗ್ ವಿಜೇತ ಆಂಡಿ ಡಯಾಜ್ ಹೆರ್ನಾಂಡೆಜ್ ಇವರು ಕ್ರೀಡಾಕೂಟದಲ್ಲಿ ಸ್ಪರ್ಧಿಸಲಿದ್ದಾರೆ.
2023 ರ ವಂಡಾ ಡೈಮಂಡ್ ಲೀಗ್ JioCinema ಮತ್ತು Sports18 ನಲ್ಲಿ ನೇರಪ್ರಸಾರವಾಗಲಿದೆ. 2022 ರಲ್ಲಿ ಜ್ಯೂರಿಚ್‌ನಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ನೀರಜ್ ಚೋಪ್ರಾರವರು 88.44 ಮೀಟರ್ ಜಾವೆಲಿನ್ ಎಸೆತದಲ್ಲಿ ಡೈಮಂಡ್ ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಬಾರಿಯೂ ದೋಹಾದ ಕತಾರ್ ಸ್ಪೋರ್ಟ್ ಕ್ಲಬ್ನಲ್ಲಿ ನಡೆಯಲಿರುವ ಡೈಮಂಡ್ ಲೀಗ್ 2023ರಲ್ಲೂ ಚೋಪ್ರಾ ಅವರು ಭಾಗವಹಿಸಲಿದ್ದಾರೆ.
ನೀರಜ್ ಚೋಪ್ರಾಗೆ ಪ್ರತಿಸ್ಪರ್ಧಿಯಾಗಿ ಹಾಲಿ ವಿಶ್ವ ಚಾಂಪಿಯನ್ ಮತ್ತು 2022 ದೋಹಾ ಕೂಟದ ವಿಜೇತ ಗ್ರೆನಡಾದ ಆಂಡರ್ಸನ್ ಪೀಟರ್ಸ್ (ಪಿಬಿ: 93.07 ಮೀ), ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ (ಪಿಬಿ: 90.88 ಮೀ), ಯುರೋಪಿಯನ್ ಚಾಂಪಿಯನ್ ಜರ್ಮನಿಯ ಜೂಲಿಯನ್ ವೆಬರ್ (ಪಿಬಿ: 89.54 ಮೀ), ಮತ್ತು ಟ್ರಿನಿಡಾಡ್ ಮತ್ತು ಟೊಬಾಗೋದ ಮಾಜಿ ಒಲಿಂಪಿಕ್ ಚಾಂಪಿಯನ್ ಕೆಶೋರ್ನ್ ವಾಲ್ಕಾಟ್ (PB: 90.16 ಮೀ) ಈ ಸೀಸನ್ನಲ್ಲಿ ಟಫ್ ಕಾಂಫಿಟೇಶನ್ ನೀಡಲಿದ್ದಾರೆ.